ಜನಪ್ರಿಯ ಸ್ಮಾರ್ಟ್ ಬ್ರ್ಯಾಂಡ್ ಒಪ್ಪೊ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ನಿರಂತರವಾಗಿ ಅಭಿವೃದ್ಧಿಯಾಗುತ್ತಿದೆ. ಸ್ಮಾರ್ಟ್ ಫೋನ್ ಮಾತ್ರವಲ್ಲದೆ ಇಯರ್ ಬಡ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಟೆಕ್ ಪ್ರಿಯರನ್ನು ಸೆಳೆಯುತ್ತಿದೆ. Oppo ಇತ್ತೀಚೆಗೆ ತನ್ನ Enco ಸರಣಿಯಿಂದ ಮತ್ತೊಂದು TWS ಇಯರ್ಬಡ್ಗಳನ್ನು ಬಿಡುಗಡೆ ಮಾಡಿದೆ. ಒಪ್ಪೊ ಎನ್ಕೋ ಆರ್ ಪ್ರೋ ಅವುಗಳನ್ನು TWS ಇಯರ್ಬಡ್ಸ್ ಹೆಸರಿನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಿದೆ. ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಲಾದ ಈ ಸಾಧನವು ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುತ್ತದೆ. ಎನ್ಕೋ ಆರ್ ಪ್ರೋ ಬೆಲೆ ಮತ್ತು ವೈಶಿಷ್ಟ್ಯಗಳನ್ನು ನೋಡೋಣ.
ಬೆಲೆ ಮತ್ತು ಲಭ್ಯತೆ: ಒಪ್ಪೊ ಎನ್ಕೋ ಆರ್ ಪ್ರೋ ಟ್ರೂ ವೈರ್ಲೆಸ್ ಇಯರ್ಫೋನ್ಗಳನ್ನು ಚೀನಾದಲ್ಲಿ CNY 499 ಅಂದರೆ ಭಾರತದಲ್ಲಿ ಸುಮಾರು 5,700 ರೂಪಾಯಿನಲ್ಲಿ ಬಿಡುಗಡೆ ಮಾಡಲಾಗಿದೆ. ಈ TWS ಇಯರ್ಬಡ್ಗಳ ಪ್ರಿ-ಆರ್ಡರ್ಗಳು ಈಗಾಗಲೇ ಚೀನಾದಲ್ಲಿ ಪ್ರಾರಂಭವಾಗಿವೆ. ಮಾರುಕಟ್ಟೆಯಲ್ಲಿ ನವೆಂಬರ್ 24 ರಿಂದ ಲಭ್ಯವಿರುತ್ತದೆ. ಆದಾಗ್ಯೂ, ವಿತರಣೆಗಳು ಡಿಸೆಂಬರ್ 2 ರಿಂದ ಪ್ರಾರಂಭವಾಗುತ್ತವೆ.