ಫೋನ್‌ಗಳು ಸ್ಫೋಟಗೊಳ್ಳುವುದು ಹೊಸದೇನಲ್ಲ. ಹಿಂದೆಯೂ ಬಹಳಷ್ಟು ಸ್ಮಾರ್ಟ್‌ಫೋನ್‌ಗಳು ಬ್ಲಾಸ್ಟ್ ಆಗಿದೆ. ಇಂತಹದ್ದೇ ಘಟನೆಯೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದೆ ಬಿಹಾರದ ಭಾಗಲ್‌ಪುರ ನಿವಾಸಿಯೊಬ್ಬರಿಗೆ ಸೇರಿದ ಶಿಯೋಮಿ 11 Lite NE ಸ್ಮಾರ್ಟ್‌ಫೋನ್ ಸ್ಫೋಟಗೊಂಡಿತ್ತು. ಫೋನ್ ಉರಿಯುತ್ತಿರುವ ವಿಡಿಯೋ ಮತ್ತು ಫೋಟೋಗಳನ್ನು ಮಾಲೀಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗಳು ಮತ್ತು ಫೋಟೋಗಳನ್ನು ನೋಡಿದ ನಂತರ ಫೋನ್ ಬಳಕೆದಾರರಲ್ಲಿ ಆತಂಕ ಶುರುವಾಗಿದೆ.
ಫೋನ್‌ಗಳು ಏಕೆ ಸ್ಫೋಟಗೊಳ್ಳುತ್ತವೆ: ಸ್ಮಾರ್ಟ್ಫೋನ್ನಲ್ಲಿರುವ ಲಿಥಿಯಂ-ಐಯಾನ್ ಬ್ಯಾಟರಿಗೆ ಹಾನಿಯಾಗುವುದರಿಂದ ಸ್ಮಾರ್ಟ್‌ಫೋನ್‌ಗಳು ಸಾಮಾನ್ಯವಾಗಿ ಸ್ಫೋಟಗೊಳ್ಳುತ್ತವೆ. ಫೋನ್ ಸ್ಫೋಬ್ಲಾಸ್ಟ್ ಆಗಲು ಮತ್ತೊಂದು ಪ್ರಮುಖ ಕಾರಣವೆಂದರೆ ಅತಿಯಾದ ಹೀಟ್. ಫೋನ್ ಅತಿಯಾಗಿ ಹೀಟ್ ಆದಾಗ ಬ್ಯಾಟರಿಯನ್ನು ಹಾನಿಗೊಳಿಸುತ್ತದೆ. ಇದು ಬ್ಯಾಟರಿಯೊಳಗೆ ಹೀಟ್ ಆಗಲು ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಬ್ಯಾಟರಿ ಬ್ಲಾಸ್ಟ್ ಆಗುತ್ತದೆ.
ಅಲ್ಲದೆ, ಬಳಕೆದಾರರು ತಮ್ಮ ಫೋನ್‌ಗಳನ್ನು ಯಾವತ್ತಿಗೂ ಕೆಳಗೆ ಬೀಳಿಸಬಾರದು. ಈ ರೀತಿಯಾದಾಗ ಮೊಬೈಲ್ ಬ್ಲಾಸ್ಟ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ದೀರ್ಘಕಾಲ ಫೋನ್ ಬಳಸುವುದರಿಂದ ಬ್ಯಾಟರಿಯೂ ಹಾಳಾಗುತ್ತದೆ. ಇದು ಬ್ಯಾಟರಿಯ ಊತ ಮತ್ತು ಅಧಿಕ ಹೀಟ್ ಆಗಲು ಕಾರಣವಾಗುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗ್ಬೇಕಾದ್ರೆ ಈ ಟಿಪ್ಸ್ ಅನ್ನು ಫಾಲೋ ಮಾಡಿ.