ಇತ್ತೀಚಿನ ದಿನಗಳಲ್ಲಿ ಮೊಬೈಲ್‌ಗಳು ನಮಗೆ ಅತಿ ಮುಖ್ಯವಾಗಿಬಿಟ್ಟಿದೆ. ಮುಂಜಾನೆಯಿಂದ ಮಲಗುವವರೆಗೆ ಅದನ್ನು ಬಳಸುತ್ತಲೇ ಇರುತ್ತೇವೆ. ಇತ್ತೀಚಿಗೆ ಮೊಬೈಲ್, ಇಂಟರ್‌ನೆಟ್ ಬಳಕೆ ತುಂಬಾ ಹೆಚ್ಚಾಗಿದೆ. ಆದರೆ ಎಷ್ಟೇ ಮುಂಜಾಗ್ರತೆ ವಹಿಸಿದರೂ ಕೆಲವೊಮ್ಮೆ ಮೊಬೈಲ್ ಕೈಯಿಂದ ಜಾರಿ ನೀರಿಗೆ ಬೀಳುತ್ತದೆ. ನಾವು ಎಷ್ಟೇ ಎಚ್ಚರಿಕೆ ವಹಿಸಿದರೂ ಆಕಸ್ಮಿಕವಾಗಿ ಸ್ಮಾರ್ಟ್ ಫೋನ್ ನೀರಿನಲ್ಲಿ ಬೀಳುವ ಸಾಧ್ಯತೆ ಇರುತ್ತದೆ.
ಕೆಲವರು ಫೋನ್ ಅನ್ನು ಒಣಗಿಸಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಅಕ್ಕಿಯಲ್ಲಿ ಹಾಕುತ್ತಾರೆ ಮತ್ತು ಡ್ರೈಯರ್ಗಳೊಂದಿಗೆ ಒಣಗಿಸಲು ರೆಡಿಯಾಗುತ್ತಾರೆ. ಆದರೆ, ಈ ರೀತಿ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ಟೆಕ್ ತಜ್ಞರು. ಫೋನ್ ನೀರಿನಲ್ಲಿ ಬಿದ್ದಾಗ ಎಂದಿಗೂ ಈ ಕೆಲಸಗಳನ್ನು ಮಾಡಬಾರದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಹಾಗಿದ್ರೆ ಆ ಕೆಲಸಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಫೋನ್ ಚಾರ್ಜ್ ಮಾಡಬೇಡಿ: ಸ್ಮಾರ್ಟ್ ಫೋನ್ ನೀರಿನಲ್ಲಿ ಬಿದ್ದಾಗ ಸ್ವಿಚ್ ಆಫ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರೊಂದಿಗೆ, ಫೋನ್ ಸ್ವಿಚ್ ಆನ್ ಮಾಡಲು ಚಾರ್ಜ್ ಆಗಬೇಕಾಗುತ್ತದೆ. ಆದರೆ ಮೊಬೈಲ್ ನೀರಿಗೆ ಬಿದ್ದ ಸಂದರ್ಭದಲ್ಲಿ ಇದನ್ನು ಮಾಡಲೇಬಾರದು. ಏಕೆಂದರೆ ತಕ್ಷಣ ಚಾರ್ಜ್ ಮಾಡುವುದರಿಂದ ಚಾರ್ಜಿಂಗ್ ಸರ್ಕ್ಯೂಟ್ಗೆ ನೀರು ಹೋಗಿರುತ್ತೆ. ಈ ಸಂದರ್ಭದಲ್ಲಿ ಫೋನ್ ಹಾಳಾಗಬಹುದು. ಆದ್ದರಿಂದ ನೀರಿಗೆ ಬಿದ್ದಾಗ ಚಾರ್ಜ್ಗೆ ಇಡುವ ಬದಲು ಕನಿಷ್ಟ 5 ಗಂಟೆಯಾದ್ರೂ ಕಾಯಬೇಕು.
ಅಕ್ಕಿಯಲ್ಲಿ ಹಾಕಬೇಡಿ: ಒದ್ದೆಯಾದ ವಸ್ತುಗಳಿಂದ ತೇವಾಂಶವನ್ನು ತೆಗೆದುಹಾಕಲು ಅನೇಕ ಜನರು ಅಕ್ಕಿಯಲ್ಲಿ ಸಾಧನಗಳನ್ನು ಹಾಕುತ್ತಾರೆ. ಅಕ್ಕಿ ಕಾಳುಗಳು ತೇವಾಂಶವನ್ನು ಹೀರಿಕೊಳ್ಳುವ ಗುಣವನ್ನು ಹೊಂದಿವೆ. ಆದರೆ ಅಕ್ಕಿ ಧಾನ್ಯಗಳು ಸಾಧನದ ಒಳಗೆ ಹೋಗಿರುವ ತೇವಾಂಶವನ್ನು ಹೀರಿಕೊಳ್ಳುವುದಿಲ್ಲ. ಇದಲ್ಲದೆ, ಅಕ್ಕಿ ಕಾಳುಗಳು ಫೋನ್ ಪೋರ್ಟ್‌ಗಳಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ. ನಂತರ ಇದು ಮೊಬೈಲ್ ಬಳಕೆಯ ಮೇಲೆ ಪರಿಣಾಮ ಬೀರಬಹುದು.
ಶೇಕ್ ಮಾಡ್ಬೇಡಿ: ಕೆಲವರು ಫೋನ್ ಒಳಗೆ ಹೋಗಿರುವ ನೀರನ್ನು ಹೊರಹಾಕಲು ಸ್ಮಾರ್ಟ್‌ಫೋನ್ ಅನ್ನು ಅಲ್ಲಾಡಿಸುತ್ತಾರೆ. ಇದು ಕೂಡ ಒಳ್ಳೆಯದಲ್ಲಿ ಎನ್ನುತ್ತಾರೆ ತಜ್ಞರು. ಏಕೆಂದರೆ ಫೋನ್ ಅನ್ನು ಶೇಕ್ ಮಾಡುವುದರಿಂದ ಮೊಬೈಲ್ ಒಳಗಿನ ನೀರು ಅದರಲ್ಲಿರುವ ಇತರ ಸಾಧನಗಳಿಗೆ ಮತ್ತು ಸುರಕ್ಷಿತ ಸ್ಥಳಗಳಿಗೆ ಹೋಗಬಹುದು. ಇದರಿಂದ ಮೊಬೈಲ್ ಒಳಗಿರುವ ಇತರೆ ಸಾಧನಗಳು ಸಹ ಹಾನಿಯಾಗ್ಬಹುದು.
48 ಗಂಟೆಗಳ ಕಾಲ ಬಳಸಬೇಡಿ: ಇಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಇಲ್ಲದೆ ಒಂದು ದಿನವೂ ಕಳೆಯುವವರು ಕಡಿಮೆ. ಆದರೆ, ನೀರಿನಲ್ಲಿ ಬಿದ್ದ ನಂತರ ಕನಿಷ್ಠ 48 ಗಂಟೆಗಳ ಕಾಲ ಫೋನ್ ಬಳಸಬಾರದು. ಎರಡರಿಂದ ನಾಲ್ಕು ದಿನಗಳವರೆಗೆ ಸ್ಮಾರ್ಟ್‌ಫೋನ್ ಅನ್ನು ಒಣಗಲು ಬಿಡಿ. ಇದಾದ ನಂತರ ನೀವು ಮೊಬೈಲ್ ಅನ್ನು ಆರಾಮದಲ್ಲಿ ಬಳಸಬಹುದು. ಈ ಮುನ್ನೆಚ್ಚರಿಕೆಗಳನ್ನು ನೀವು ಬಳಸಿದ್ರೆ ನೀರಿಗೆ ಬಿದ್ದ ಮೊಬೈಲ್ ಎಂದಿಗೂ ಹಾಳಾಗುವುದಿಲ್ಲ.