Moto E13: ಮೋಟೋ ಇ13 ಸ್ಮಾರ್ಟ್​​ಫೋನ್​ ಫಸ್ಟ್​ ಸೇಲ್​ ಆರಂಭ! ಹೇಗಿದೆ ಗೊತ್ತಾ ಆಫರ್ಸ್​?

Moto e13 | ಮೊಟೊರೊಲಾ ಇಂಡಿಯಾ ಇತ್ತೀಚೆಗೆ ಬಿಡುಗಡೆ ಮಾಡಿದ ಮೊಟೊ ಇ13 ಸ್ಮಾರ್ಟ್‌ಫೋನ್​ ಫಸ್ಟ್​ ಸೇಲ್​ ಅನ್ನು ಫ್ಲಿಪ್​ಕಾರ್ಟ್​ನಲ್ಲಿ ಆರಂಭಿಸಿದೆ. ಈ ಮೂಲಕ ಈ ಸ್ಮಾರ್ಟ್​​ಫೋನ್​ ಅನ್ನು ಭಾರೀ ಆಫರ್ಸ್​ಗಳೊಂದಿಗೆ ಖರೀದಿ ಮಾಡಬಹುದಾಗಿದೆ.

First published:

  • 18

    Moto E13: ಮೋಟೋ ಇ13 ಸ್ಮಾರ್ಟ್​​ಫೋನ್​ ಫಸ್ಟ್​ ಸೇಲ್​ ಆರಂಭ! ಹೇಗಿದೆ ಗೊತ್ತಾ ಆಫರ್ಸ್​?

    ಮೊಟೊರೊಲಾ ಇಂಡಿಯಾ ಕಡಿಮೆ ಬೆಲೆಗೆ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿರುವುದು ಗೊತ್ತೇ ಇದೆ. ಮೋಟೋ ಇ13 ಮೊಬೈಲ್ ಅನ್ನು ರೂ.6,999 ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್​​ಫೋನ್​ ಯುನಿಸೋಕ್​ ಪ್ರೊಸೆಸರ್, 64 ಜಿಬಿ ಸ್ಟೋರೇಜ್, 13 ಎಂಪಿ ಕ್ಯಾಮೆರಾ, ಬೃಹತ್ ಬ್ಯಾಟರಿ ಮುಂತಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

    MORE
    GALLERIES

  • 28

    Moto E13: ಮೋಟೋ ಇ13 ಸ್ಮಾರ್ಟ್​​ಫೋನ್​ ಫಸ್ಟ್​ ಸೇಲ್​ ಆರಂಭ! ಹೇಗಿದೆ ಗೊತ್ತಾ ಆಫರ್ಸ್​?

    ಭಾರತದಲ್ಲಿ ಬಿಡುಗಡೆಯಾದ ಮೋಟೋ ಇ13 ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಮೋಟೋ ಇ13 ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್​​ಫೋನ್​ಗಳ ಆರಂಭಿಕ ಬೆಲೆ ರೂ.6,999 ಆಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ರೂ.10,000 ಒಳಗಿನ ಸ್ಮಾರ್ಟ್‌ಫೋನ್‌ಗಳಿಗೆ ಮೋಟೋ ಇ13 ಕಠಿಣ ಸ್ಪರ್ಧೆಯನ್ನು ನೀಡಲಿದೆ. 

    MORE
    GALLERIES

  • 38

    Moto E13: ಮೋಟೋ ಇ13 ಸ್ಮಾರ್ಟ್​​ಫೋನ್​ ಫಸ್ಟ್​ ಸೇಲ್​ ಆರಂಭ! ಹೇಗಿದೆ ಗೊತ್ತಾ ಆಫರ್ಸ್​?

    ಮೋಟೋ ಇ13 ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಯಿತು. 2ಜಿಬಿ ರ್‍ಯಾಮ್ ಮತ್ತು 64ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ ರೂ 6,999 ಆಗಿದ್ದರೆ, 4ಜಿಬಿ ರ್‍ಯಾಮ್ ಮತ್ತು 64ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ ರೂ 7,999 ಆಗಿದೆ. ಈ ಸ್ಮಾರ್ಟ್​​ಫೋನ್​ಗಳು ಫೆಬ್ರವರಿ 15 ರಂದು ಮಧ್ಯಾಹ್ನ 12 ಗಂಟೆಗೆ ಮೊದಲ ಮಾರಾಟ ಪ್ರಾರಂಭಿಸಿದೆ. ಇನ್ನು ಈ ಸೇಲ್​ ಜನಪ್ರಿಯ ಇಕಾಮರ್ಸ್​ ವೆಬ್​ಸೈಟ್​ ಫ್ಲಿಪ್​ಕಾರ್ಟ್​ನಲ್ಲಿ ಆರಂಭವಾಗಿದೆ. ಕಾಸ್ಮಿಕ್ ಬ್ಲಾಕ್, ಅರೋರಾ ಗ್ರೀನ್, ಕ್ರೀಮಿ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.

    MORE
    GALLERIES

  • 48

    Moto E13: ಮೋಟೋ ಇ13 ಸ್ಮಾರ್ಟ್​​ಫೋನ್​ ಫಸ್ಟ್​ ಸೇಲ್​ ಆರಂಭ! ಹೇಗಿದೆ ಗೊತ್ತಾ ಆಫರ್ಸ್​?

    ಮೋಟೋ ಇ13 ಮೊಬೈಲ್ ಖರೀದಿದಾರರಿಗೆ ಫ್ಲಿಪ್​ಕಾರ್ಟ್​ ಹಲವು ಕೊಡುಗೆಗಳನ್ನು ನೀಡುತ್ತಿದೆ. HSBC, IndusInd ಮತ್ತು OneCard ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಖರೀದಿಗೆ 10 ಪ್ರತಿಶತ ರಿಯಾಯಿತಿ ಲಭ್ಯವಿದೆ. ಹಾಗೆಯೇ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಗೆ 5 ಪ್ರತಿಶತ ಕ್ಯಾಶ್‌ಬ್ಯಾಕ್ ಸಿಗಲಿದೆ. ಇನ್ನು ಇಎಂಐ ಆಫರ್ ಕೂಡ ಇದೆ. ನೀವು ಮೋಟೋ ಇ13 ಅನ್ನು ರೂ. 247 ರ ಇಎಮ್​​ಐನೊಂದಿಗೆ ಖರೀದಿ ಮಾಡಬಹುದು. 

    MORE
    GALLERIES

  • 58

    Moto E13: ಮೋಟೋ ಇ13 ಸ್ಮಾರ್ಟ್​​ಫೋನ್​ ಫಸ್ಟ್​ ಸೇಲ್​ ಆರಂಭ! ಹೇಗಿದೆ ಗೊತ್ತಾ ಆಫರ್ಸ್​?

    ಮೋಟೋ ಇ13 ಸ್ಮಾರ್ಟ್‌ಫೋನ್‌ನ ಫೀಚರ್ಸ್​ ಬಗ್ಗೆ ಹೇಳುವುದಾದರೆ, ಇದು 6.5-ಇಂಚಿನ ಹೆಚ್​ಡಿ+ IPS LCD ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್​​ಫೋನ್ ಯುನಿಸೋಕ್​ T606 ಪ್ರೊಸೆಸರ್‌ನಿಂದ ನಡೆಸಲ್ಪಡುತ್ತಿದೆ. ಇದು ಆಂಡ್ರಾಯ್ಡ್​ 13 ಗೋ ವರ್ಷನ್​ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. 4ಜಿಬಿ ರ್‍ಯಾಮ್ ಮತ್ತು 64ಜಿಬಿ ವರೆಗೆ ಸ್ಟೋರೇಜ್​ ಸಾಮರ್ಥ್ಯವನ್ನು ಪಡೆದಿದೆ. ಮೆಮೊರಿ ಕಾರ್ಡ್‌ನೊಂದಿಗೆ ಇದರ ಸ್ಟೋರೇಜ್​ ಅನ್ನು 1TB ವರೆಗೆ ಹೆಚ್ಚಿಸಬಹುದು.

    MORE
    GALLERIES

  • 68

    Moto E13: ಮೋಟೋ ಇ13 ಸ್ಮಾರ್ಟ್​​ಫೋನ್​ ಫಸ್ಟ್​ ಸೇಲ್​ ಆರಂಭ! ಹೇಗಿದೆ ಗೊತ್ತಾ ಆಫರ್ಸ್​?

    ಮೋಟೋ ಇ13 ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದ್ದರೆ, ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 5-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. ಪೋರ್ಟ್ರೇಟ್, ಫೋಟೋ, ಪನೋರಮಾ, ಪ್ರೋ ಮೋಡ್, ಆಟೋ ಸ್ಮೈಲ್ ಕ್ಯಾಪ್ಚರ್ ಮುಂತಾದ ವೈಶಿಷ್ಟ್ಯಗಳನ್ನು ಈ ಕ್ಯಾಮೆರಾಗಳು ಹೊಂದಿದೆ. 

    MORE
    GALLERIES

  • 78

    Moto E13: ಮೋಟೋ ಇ13 ಸ್ಮಾರ್ಟ್​​ಫೋನ್​ ಫಸ್ಟ್​ ಸೇಲ್​ ಆರಂಭ! ಹೇಗಿದೆ ಗೊತ್ತಾ ಆಫರ್ಸ್​?

    ಈ ಸ್ಮಾರ್ಟ್​​ಫೋನ್​ 5,000mAh ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿದೆ ಮತ್ತು ಈ ಬ್ಯಾಟರಿಯು 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, ವೈಫೈ, ಬ್ಲೂಟೂತ್, ಟೈಪ್ ಸಿ ಪೋರ್ಟ್, 3.5 ಎಂಎಂ ಆಡಿಯೋ ಜ್ಯಾಕ್, ಡಾಲ್ಬಿ ಅಟ್ಮಾಸ್ ಬೆಂಬಲದಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

    MORE
    GALLERIES

  • 88

    Moto E13: ಮೋಟೋ ಇ13 ಸ್ಮಾರ್ಟ್​​ಫೋನ್​ ಫಸ್ಟ್​ ಸೇಲ್​ ಆರಂಭ! ಹೇಗಿದೆ ಗೊತ್ತಾ ಆಫರ್ಸ್​?

    ಮೊಟೊರೊಲಾ ಈಗಾಗಲೇ ಮೊಟೊ ಇ32 ಸ್ಮಾರ್ಟ್‌ಫೋನ್ ಅನ್ನು ರೂ.10,000 ಬಜೆಟ್‌ನ ಅಡಿಯಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್​​ಫೋನ್​ನ ಆರಂಭಿಕ ಬೆಲೆ ರೂ.8,999. ಇದು 6.5 ಇಂಚಿನ ಹೆಚ್​ಡಿ+ ಎಲ್​ಸಿಡಿ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, ಮೀಡಿಯಾಟೆಕ್ ಹೆಲಿಯೋ ಜಿ37 ಪ್ರೊಸೆಸರ್, 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ, 5,000mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

    MORE
    GALLERIES