Flipkart Moto Days Sale: ಫ್ಲಿಪ್ಕಾರ್ಟ್ನಲ್ಲಿ ಒಂದು ತಿಂಗಳವರೆಗೆ "ಮೋಟೊ ಡೇಸ್ ಸೇಲ್", ಭಾರೀ ಡಿಸ್ಕೌಂಟ್ನಲ್ಲಿ ಸ್ಮಾರ್ಟ್ಫೋನ್ಗಳು
ಇಕಾಮರ್ಸ್ ವೆಬ್ಸೈಟ್ಗಳಾದ ಅಮೆಜಾನ್, ಫ್ಲಿಪ್ಕಾರ್ಟ್ಗಳು ಗ್ರಾಹಕರಿಗಾಗಿ ಏನಾದರೊಂದು ತನ್ನ ಉತ್ಪನ್ನಗಳ ಮೇಲೆ ಕೊಡುಗೆಯನ್ನು ನೀಡುತ್ತಲೇ ಇರುತ್ತದೆ. ಈ ಮೂಲಕ ಗ್ರಾಹಕರು ಆನ್ಲೈನ್ ಮೂಲಕ ಖರೀದಿ ಮಾಡಲು ಇಷ್ಟಪಡುತ್ತಾರೆ. ಇದೀಗ ಫ್ಲಿಪ್ಕಾರ್ಟ್ ತನ್ನ ಬ್ರಾಂಡ್ ಮೂಲಕ ಮೋಟೋ ಸ್ಮಾರ್ಟ್ಫೋನ್ಗಳನ್ನು ಭಾರೀ ಆಫರ್ನೊಂದಿಗೆ ಮಾರಾಟ ಮಾಡುತ್ತಿದೆ.
ಇ ಕಾಮರ್ಸ್ ವೆಬ್ಸೈಟ್ಗಳು ತನ್ನ ಗ್ರಾಹಕರಿಗಾಗಿ ಏನಾದರೊಂದು ಆಫರ್ಸ್ಗಳನ್ನು ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಲೇ ಇದೆ. ಇದೀಗ ಫ್ಲಿಪ್ಕಾರ್ಟ್ ಮೋಟೋ ಡೇಸ್ ಮಾರಾಟವನ್ನು ಘೋಷಿಸಿದೆ. ಈ ಸೇಲ್ ಇದೇ ತಿಂಗಳ 1ರಿಂದ ಆರಂಭವಾಗಿದ್ದು, 5ರವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ ವಿವಿಧ ಮೋಟೋ ಸ್ಮಾರ್ಟ್ ಫೋನ್ ಗಳ ಮೇಲೆ ಭಾರೀ ಆಫರ್ ಗಳಿವೆ.
2/ 8
ಮೋಟೋ ಜಿ52 ಸ್ಮಾರ್ಟ್ಫೋನ್ನಲ್ಲಿ ಫ್ಲಿಪ್ಕಾರ್ಟ್ ಅತಿದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಈ ಫೋನಿನ ಮೇಲೆ 5 ಸಾವಿರ ರೂಪಾಯಿಗೂ ಹೆಚ್ಚು ಭಾರೀ ರಿಯಾಯಿತಿ ಲಭ್ಯವಿದೆ. ಮೋಟೋರೊಲಾ ಜಿ52 ಮೆಟಾಲಿಕ್ ವೈಟ್ 128 GB ಸ್ಟೋರೇಜ್ ಮತ್ತು 6 GB ರ್ಯಾಮ್ ಫೋನ್ ಮೂಲ ಬೆಲೆ 19,999 ರೂಪಾಯಿಯಾಗಿದೆ.
3/ 8
ಈ ಮೋಟೋ 8ಜಿ52 ಸ್ಮಾರ್ಟ್ಫೋನ್ 30 ಪ್ರತಿಶತ ರಿಯಾಯಿತಿ ದರದಲ್ಲಿ ಲಭ್ಯವಿದೆ. ಅಂದರೆ 6 ಸಾವಿರ ರೂಪಾಯಿಯ ರಿಯಾಯಿತಿಯೊಂದಿಗೆ 13,999 ರೂಪಾಯಿಗೆ ಯಾರು ಬೇಕಾದರೂ ಖರೀದಿ ಮಾಡಬಹುದಾಗಿದೆ. ನೀವು ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನೊಂದಿಗೆ ಹೆಚ್ಚುವರಿ 5 ಪ್ರತಿಶತ ರಿಯಾಯಿತಿಯೊಂದಿಗೆ ಸಹ ಪಡೆಯಬಹುದು.
4/ 8
ಅಲ್ಲದೆ, ಈ ಫೋನ್ನಲ್ಲಿ 13,300 ರೂಪಾಯಿಯ ದೊಡ್ಡ ಮಟ್ಟದ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದೆ. ಈ ಆಫರ್ ನಿಮ್ಮ ಸ್ಮಾರ್ಟ್ಫೊನ್ಗೆ ಅನ್ವಯಿಸಿದರೆ, ನೀವು 699 ರೂಪಾಯಿಗೆ ಸ್ಮಾರ್ಟ್ಫೋನ್ ಅನ್ನು ಪಡೆಯಬಹುದು.
5/ 8
ಈ ಫೋನಿನ 4GB+64 GB ರೂಪಾಂತರದ ವಿಷಯಕ್ಕೆ ಬಂದರೆ. ಈ ಸ್ಮಾರ್ಟ್ಫೋನಿನ ಮೂಲ ಬೆಲೆ 12,999 ರೂಪಾಯಿಯಾಗಿದೆ. ಇದು ಶೇಕಡಾ 27% ರಷ್ಟು ರಿಯಾಯಿತಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಂದರೆ 5,000 ರೂಪಾಯಿಯ ರಿಯಾಯಿತಿಯೊಂದಿಗೆ 12,999 ರೂಪಾಯಿಗೆ ಖರೀದಿ ಮಾಡಬಹುದು.
6/ 8
ಅಲ್ಲದೆ, ನೀವು ಈ ಫೋನ್ ಅನ್ನು ಆಕ್ಸಿಸ್ ಬ್ಯಾಂಕ್ ಕಾರ್ಡ್ನೊಂದಿಗೆ ಖರೀದಿಸಿದರೆ, ನೀವು ಹೆಚ್ಚುವರಿ ಶೇಕಡಾ 5% ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಅಲ್ಲದೇ ಈ ಫೋನ್ ಮೇಲೆ ರೂ.12 ಸಾವಿರದ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ.
7/ 8
ಮೋಟೋ ಕಂಪನಿಯ ಸ್ಮಾರ್ಟ್ಫೋನ್ಗಳು ಉತ್ತಮ ಫೀಚರ್ಸ್ ಅನ್ನು ಹೊಂದಿದ್ದು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
8/ 8
ಅಮೆಜಾನ್, ಫ್ಲಿಪ್ಕಾರ್ಟ್ನಂತಹ ದೊಡ್ಡ ಇ ಕಾಮರ್ಸ್ ವೆಬ್ಸೈಟ್ಗಳು ಪ್ರತೀವರ್ಷ ಯಾವುದಾದರೊಂದು ಸಾಧನಗಳ ಮೇಲೆ ಆಫರ್ಸ್ ಅನ್ನು ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತದೆ.