ಶಿಯೋಮಿ ‘ಮಿ ಬ್ಯಾಂಡ್ 5‘ ಫೀಚರ್ಸ್ ಲೀಕ್; ಹೊಸ ಸ್ಮಾರ್ಟ್ ಬ್ಯಾಂಡ್ ಹೇಗಿದೆ ಗೊತ್ತಾ?
ಈಗಾಗಲೇ ಶಿಯೋಮಿ ಕಂಪೆನಿ ಗ್ರಾಹಕರಿಗಾಗಿ ‘ಮಿ ಬ್ಯಾಂಡ್‘, ‘ಮಿ ಬ್ಯಾಂಡ್ 2‘, ‘ಮಿ ಬ್ಯಾಂಡ್ 3‘ ಪರಿಚಯಿಸಿತ್ತು. ಮಾತ್ರವಲ್ಲದೆ , ಕಳೆದ ವರ್ಷ ‘ಮಿ ಬ್ಯಾಂಡ್ 4‘ ಅನ್ನು ಗ್ರಾಹಕರ ಮುಂದಿರಿಸಿತ್ತು.
News18 Kannada | January 12, 2020, 5:08 PM IST
1/ 8
ಚೀನಾ ಮೂಲದ ಶಿಯೋಮಿ ಕಂಪೆನಿ ಸ್ಮಾರ್ಟ್ಫೋನ್ಗಳನ್ನು ಮಾತ್ರವಲ್ಲದೆ, ಹಲವು ಗ್ರಾಹಕ ಸ್ನೇಹಿ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರುತ್ತದೆ.
2/ 8
ಇತ್ತೀಚೆಗೆ ಬಿಡುಗಡೆ ಮಾಡಿದ ಉತ್ಪನ್ನಗಳಲ್ಲಿ ಸ್ಮಾರ್ಟ್ ಬ್ಯಾಂಡ್ಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸಿದೆ.
3/ 8
ಈಗಾಗಲೇ ಶಿಯೋಮಿ ಕಂಪೆನಿ ಗ್ರಾಹಕರಿಗಾಗಿ ‘ಮಿ ಬ್ಯಾಂಡ್‘, ‘ಮಿ ಬ್ಯಾಂಡ್ 2‘, ‘ಮಿ ಬ್ಯಾಂಡ್ 3‘ ಪರಿಚಯಿಸಿತ್ತು. ಮಾತ್ರವಲ್ಲದೆ , ಕಳೆದ ವರ್ಷ ‘ಮಿ ಬ್ಯಾಂಡ್ 4‘ ಅನ್ನು ಗ್ರಾಹಕರ ಮುಂದಿರಿಸಿತ್ತು.
4/ 8
ಇದೀಗ ಕಂಪೆನಿ ಹೊಸ ಫೀಚರ್ಸ್ ಅಳವಡಿಸಿದ ‘ಮಿ ಬ್ಯಾಂಡ್ 5‘ ಡಿವೈಸ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
5/ 8
ಜನಪ್ರಿಯ ಶಿಯೋಮಿ ಸಂಸ್ಥೆಯ ಹೊಸ 'ಮಿ ಬ್ಯಾಂಡ್ 5' ಡಿವೈಸ್ ಬೆಲೆ ಮತ್ತು ಫೀಚರ್ಸ್ಗಳು ಲೀಕ್ ಆಗಿದ್ದು, ಗ್ರಾಹಕರಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.
6/ 8
ಹೊಸ ‘ಮಿ ಬ್ಯಾಂಡ್ 5‘ ಡಿವೈಸ್, ‘ಮಿ ಬ್ಯಾಂಡ್ 4‘ ಡಿವೈಸ್ಗಿಂತ ಹೆಚ್ಚಿನ ಗಾತ್ರದ ಡಿಸ್ಪ್ಲೇ ಹೊಂದಿರಲಿದೆ. ಇದರೊಂದಿಗೆ ಹೊಸ ಫೀಚರ್ಸ್ ಅನ್ನು ಅಳವಡಿಸಿಕೊಂಡಿದೆ. ಇನ್ನು ಬೆಲೆಯು ಸಹ ಗ್ರಾಹಕರ ಸ್ನೇಹಿ ಆಗಿರಲಿದೆ.
7/ 8
‘ಮಿ ಬ್ಯಾಂಡ್ 5‘ ಡಿವೈಸ್ 1.2 ಇಂಚಿನ ಡಿಸ್ಪ್ಲೇ ನೀಡುವ ಸಾಧ್ಯತೆಗಳಿವೆ. ‘ಮಿ ಬ್ಯಾಂಡ್ 5‘ ನಿರಂತರ ಹೃದಯ ಬಡಿತ ದ ಮಾಹಿತಿಯನ್ನು ತಿಳಿಸುವ ‘ಹಾರ್ಟ್ರೇಟ್ ಮಾನಿಟರಿಂಗ್' ಫೀಚರ್ ಅನ್ನು ನೀಡಿದೆ ಎಂದು ಹೇಳಲಾಗುತ್ತಿದೆ.
8/ 8
ಇನ್ನು ‘ಮಿ ಬ್ಯಾಂಡ್ 5‘ ಡಿವೈಸ್ ಬೆಲೆ ಚೀನಾದಲ್ಲಿ 179 ಯುವನ್ ಆಗಿದ್ದು, ಭಾರತದಲ್ಲಿ ಸುಮಾರು 1,800ರೂ.ಗಳ ಆಸುಪಾಸಿನಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.