ಬಿಡುಗಡೆಗೆ ಮುನ್ನವೇ ಲೀಕ್​ ಆಯ್ತು OnePlus 8T ಮಾಹಿತಿ: ಏನಿದರ ವಿಶೇಷತೆ?

ಈ ಸ್ಮಾರ್ಟ್‌ಫೋನ್ 8 ಜಿಬಿ + 128 ಜಿಬಿ ಮತ್ತು 12 ಜಿಬಿ + 256 ಜಿಬಿ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865+ ಪ್ರೊಸೆಸರ್ ನೀಡಲಾಗಿದೆ.

First published:

  • 18

    ಬಿಡುಗಡೆಗೆ ಮುನ್ನವೇ ಲೀಕ್​ ಆಯ್ತು OnePlus 8T ಮಾಹಿತಿ: ಏನಿದರ ವಿಶೇಷತೆ?

    ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿ ಒನ್‌ಪ್ಲಸ್ (OnePlus) ತನ್ನ ಹೊಸ ಮೊಬೈಲ್ ಒನ್‌ಪ್ಲಸ್ 8 ಟಿ ಯನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ. ಆದರೆ ಫೋನ್ ಬಿಡುಗಡೆಗೆ ಮುನ್ನವೇ ಇದರ ಮಾಹಿತಿಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.

    MORE
    GALLERIES

  • 28

    ಬಿಡುಗಡೆಗೆ ಮುನ್ನವೇ ಲೀಕ್​ ಆಯ್ತು OnePlus 8T ಮಾಹಿತಿ: ಏನಿದರ ವಿಶೇಷತೆ?

    OnePlus 8T ಫೋನ್‌ನಲ್ಲಿ ವಿಭಿನ್ನ ಕ್ಯಾಮೆರಾ ಮಾಡ್ಯೂಲ್ ನೀಡಲಾಗುತ್ತಿದೆ ಎಂಬ ಸುದ್ದಿಯೊಂದು ಇತ್ತೀಚೆಗೆ ಬಹಿರಂಗವಾಗಿತ್ತು. ಇದೀಗ ಈ ಸುದ್ದಿಗೆ ಪುಷ್ಠಿ ನೀಡುವಂತೆ ಆನ್‌ಲೀಕ್ಸ್​ನೊಂದಿಗೆ ಪ್ರೈಸ್‌ಬಾಬಾ ವೆಬ್​ಸೈಟ್​ ಫೋನ್‌ನ ಕೆಲವು ಚಿತ್ರಗಳನ್ನು ಹಂಚಿಕೊಂಡಿದೆ. (PC: Onleaks)

    MORE
    GALLERIES

  • 38

    ಬಿಡುಗಡೆಗೆ ಮುನ್ನವೇ ಲೀಕ್​ ಆಯ್ತು OnePlus 8T ಮಾಹಿತಿ: ಏನಿದರ ವಿಶೇಷತೆ?

    ಸೋರಿಕೆಯಾದ ಮಾಹಿತಿಯಂತೆ ಒನ್‌ಪ್ಲಸ್ 8 ಟಿ ಫೋನ್‌ನಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅಳವಡಿಸಿದ್ದು, ಇದರ ಪ್ರೈಮರಿ ಕ್ಯಾಮೆರಾ 48 ಮೆಗಾಪಿಕ್ಸೆಲ್‌ಗಳಾಗಲಿದೆ ಎಂದು ಹೇಳಲಾಗಿದೆ. (PC: Onleaks)

    MORE
    GALLERIES

  • 48

    ಬಿಡುಗಡೆಗೆ ಮುನ್ನವೇ ಲೀಕ್​ ಆಯ್ತು OnePlus 8T ಮಾಹಿತಿ: ಏನಿದರ ವಿಶೇಷತೆ?

    ಹಾಗೆಯೇ ಹಿಂಭಾಗದಲ್ಲಿ 16 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸೆನ್ಸರ್, 5 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಪೋರ್ಟೆಡ್ ಲೆನ್ಸ್ ಅನ್ನು ನೀಡಲಾಗಿದೆ. ಇದು ಬಳಕೆದಾರರಿಗೆ ಉತ್ತಮ ಚಿತ್ರ ಗುಣಮಟ್ಟವನ್ನು ನೀಡಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    MORE
    GALLERIES

  • 58

    ಬಿಡುಗಡೆಗೆ ಮುನ್ನವೇ ಲೀಕ್​ ಆಯ್ತು OnePlus 8T ಮಾಹಿತಿ: ಏನಿದರ ವಿಶೇಷತೆ?

    ವರದಿಗಳ ಪ್ರಕಾರ, OnePlus 8T 6.5 ಇಂಚಿನ ಪೂರ್ಣ ಎಚ್‌ಡಿ + ಡಿಸ್​ಪ್ಲೇ ಹೊಂದಿರಲಿದ್ದು, ಇದು 120Hz ರಿಫ್ರೆಶ್ ರೇಟ್ ಹೊಂದಿರುತ್ತದೆ. ಈ ಹಿಂದೆ ಕಂಪನಿಯು ಒನ್‌ಪ್ಲಸ್ 8 ಪ್ರೊನಲ್ಲಿ ಅದೇ ರಿಫ್ರೆಶ್ ರೇಟ್ ಡಿಸ್​ಪ್ಲೇಯನ್ನು ನೀಡಿತ್ತು.

    MORE
    GALLERIES

  • 68

    ಬಿಡುಗಡೆಗೆ ಮುನ್ನವೇ ಲೀಕ್​ ಆಯ್ತು OnePlus 8T ಮಾಹಿತಿ: ಏನಿದರ ವಿಶೇಷತೆ?

    ಹಾಗೆಯೇ ಈ ಸ್ಮಾರ್ಟ್‌ಫೋನ್ 8 ಜಿಬಿ + 128 ಜಿಬಿ ಮತ್ತು 12 ಜಿಬಿ + 256 ಜಿಬಿ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865+ ಪ್ರೊಸೆಸರ್ ನೀಡಲಾಗಿದೆ ಎಂದು ವರದಿಯಾಗಿದೆ.

    MORE
    GALLERIES

  • 78

    ಬಿಡುಗಡೆಗೆ ಮುನ್ನವೇ ಲೀಕ್​ ಆಯ್ತು OnePlus 8T ಮಾಹಿತಿ: ಏನಿದರ ವಿಶೇಷತೆ?

    ಇನ್ನು ನೂತನ OnePlus 8T ಸ್ಮಾರ್ಟ್​ಫೋನ್​ನ ಬ್ಯಾಟರಿ ಸಾಮರ್ಥ್ಯ 4,500 ಎಮ್‌ಎಹೆಚ್. ಇದು 65 ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್​ನಲ್ಲಿ ಜಾರ್ಜ್ ಆಗಲಿದೆ. OnePlus ಕಂಪೆನಿಯು ಇದುವರೆಗೂ ತನ್ನ ಸ್ಮಾರ್ಟ್​ಫೋನ್​ ಜೊತೆ 30W ವಾರ್ಪ್ ಚಾರ್ಜ್ ಫೀಚರ್ ಮಾತ್ರ ಪರಿಚಯಿಸಿತ್ತು. ಹೀಗಾಗಿ OnePlus 8T ಇದೇ ಮೊದಲ ಬಾರಿ ವೇಗದ ಚಾರ್ಜಿಂಗ್ ಫೆಸಿಲಿಟಿಯೊಂದಿಗೆ ಹೊರ ಬರುತ್ತಿದೆ.

    MORE
    GALLERIES

  • 88

    ಬಿಡುಗಡೆಗೆ ಮುನ್ನವೇ ಲೀಕ್​ ಆಯ್ತು OnePlus 8T ಮಾಹಿತಿ: ಏನಿದರ ವಿಶೇಷತೆ?

    ಲೀಕ್ ಆಗಿರುವ ಮಾಹಿತಿ ಪ್ರಕಾರ OnePlus 8T ಬೆಲೆಯು 40 ರಿಂದ 45 ಸಾವಿರಗಳವರೆಗೆ ಇರಬಹುದು ಎಂದು ಅಂದಾಜಿಸಲಾಗಿದ್ದು, ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಹೊಸ ಸ್ಮಾರ್ಟ್​ಫೋನ್ ಲಗ್ಗೆಯಿಡಲಿದೆ.

    MORE
    GALLERIES