ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಆನ್ಲೈನ್ ಫ್ರಾಡ್ಗಳು ಹೆಚ್ಚುತ್ತಿವೆ. ಈ ಕುರಿತು ನಿತ್ಯ ಹೊಸ ಹೊಸ ಪ್ರಕರಣಗಳು ಕೇಳಿ ಬರುತ್ತಲೇ ಇರುತ್ತವೆ. ಈಗ ಮುಂಬೈನಲ್ಲಿ ಇದೇ ಮಾದರಿಯ ಪ್ರಕರಣ ನಡೆದಿದೆ. ಉದ್ಯಮಿಯೋರ್ವ 400 ರೂಪಾಯಿ ರೀಫಂಡ್ ಪಡೆಯಲು ಹೋಗಿ 2.2 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
2/ 6
ಮುಂಬೈ ಮೂಲದ ಧಾನುಕ ಹೆಸರಿನ ಉದ್ಯಮಿ ಹಣ ಕಳೆದುಕೊಂಡವರು. ಇವರು ಇತ್ತೀಚೆಗೆ ಶಾಪ್ ಒಂದರಿಂದ ದಿನನಿತ್ಯದ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಅದು ಮನೆಗೂ ತಲುಪಿತ್ತು. ಇದಕ್ಕೆ ಅವರು ಅನ್ಲೈನ್ನಲ್ಲೇ ಹಣ ಪಾವತಿಸಿದ್ದರು.
3/ 6
ತರಿಸಿದ್ದ ಸಾಮಗ್ರಿಗಳ ಪೈಕಿ 400 ಮೌಲ್ಯದ ನ್ಯಾಪ್ಕಿನ್ಗಳು ಕೂಡ ಇದ್ದವು. ತಾವು ಇದನ್ನು ಆರ್ಡರ್ ಮಾಡಿಯೇ ಇರಲಿಲ್ಲ. ಆದಾಗ್ಯೂ ಸಂಸ್ಥೆಯವರು ಇದನ್ನು ತರಿಸಿದ್ದಾರೆ ಎಂದು ಸಿಟ್ಟಾಗಿದ್ದಾರೆ. ಗೂಗಲ್ನಲ್ಲಿ ಸೂಪರ್ ಮಾರ್ಕೆಟ್ ನಂಬರ್ ಹುಡುಕಿದ್ದಾರೆ.
4/ 6
ಅಲ್ಲಿ ಸಿಕ್ಕ ನಂಬರ್ಗೆ ಕರೆ ಮಾಡಿ ನಡೆದ ಘಟನೆ ಬಗ್ಗೆ ಹೇಳಿದ್ದಾರೆ. ದೂರವಾಣಿ ಕರೆಯಲ್ಲಿ ಮಾತನಾಡಿ ವ್ಯಕ್ತಿ ಡೆಬಿಟ್ ಕಾರ್ಡ್ ಮಾಹಿತಿ ಕೇಳಿದ್ದಾನೆ.
5/ 6
ಮಾಹಿತಿ ನೀಡುತ್ತಿದ್ದಂತೆ 2.2 ಲಕ್ಷ ರೂಪಾಯಿ ಖಾತೆಯಿಂದ ಕಟ್ ಆಗಿದೆ. ಅಷ್ಟೇ ಅಲ್ಲ ಕರೆ ಕೂಡ ಕಟ್ ಆಗಿದೆ.
6/ 6
ಈ ವಿಚಾರಕ್ಕೆ ಸಂಬಂಧಿಸಿ ಉದ್ಯಮಿ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.