Mahindra ವಾಹನಗಳ ಮೇಲೆ ಭರ್ಜರಿ ಕೊಡುಗೆ! 80 ಸಾವಿರದಷ್ಟು ಉಳಿತಾಯ ಮಾಡ್ಬೋದು ನೋಡಿ​

Mahindra Cars: ಮಹೀಂದ್ರಾ Bolero, Scorpio, XUV300, KUV100 NXT, Marazzo ಮತ್ತು Alturas G4 ನಲ್ಲಿ ಮಹೀಂದ್ರಾ ಈ ಎಲ್ಲಾ ಕೊಡುಗೆಗಳನ್ನು ನೀಡಿದೆ. ಆದರೆ ಕಂಪನಿಯ ಜನಪ್ರಿಯ SUV ಥಾರ್ ಮತ್ತು XUV700 ನಲ್ಲಿ ಯಾವುದೇ ಪ್ರಯೋಜನಗಳನ್ನು ನೀಡಿಲ್ಲ.

First published:

 • 18

  Mahindra ವಾಹನಗಳ ಮೇಲೆ ಭರ್ಜರಿ ಕೊಡುಗೆ! 80 ಸಾವಿರದಷ್ಟು ಉಳಿತಾಯ ಮಾಡ್ಬೋದು ನೋಡಿ​

  ಮಹೀಂದ್ರಾ ಕಂಪನಿ ಆಯ್ದ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಸುಮಾರು 80 ಸಾವಿರ ರೂಪಾಯಿಗಳವರೆಗೆ ಈ ಆಫರ್ ನೀಡುತ್ತಿದೆ. ಅಂದಹಾಗೆಯೇ ಮಹೀಂದ್ರಾ ಮೇ 2022 ರಲ್ಲಿ ನೀಡುತ್ತಿರುವ ದೊಡ್ಡ ರಿಯಾಯಿತಿ ಇದಾಗಿದೆ. ಈ ತಿಂಗಳ ಅಂತ್ಯದ ವೇರೆಗೆ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ.

  MORE
  GALLERIES

 • 28

  Mahindra ವಾಹನಗಳ ಮೇಲೆ ಭರ್ಜರಿ ಕೊಡುಗೆ! 80 ಸಾವಿರದಷ್ಟು ಉಳಿತಾಯ ಮಾಡ್ಬೋದು ನೋಡಿ​

  ಮಹೀಂದ್ರಾ Bolero, Scorpio, XUV300, KUV100 NXT, Marazzo ಮತ್ತು Alturas G4 ನಲ್ಲಿ ಮಹೀಂದ್ರಾ ಈ ಎಲ್ಲಾ ಕೊಡುಗೆಗಳನ್ನು ನೀಡಿದೆ. ಆದರೆ ಕಂಪನಿಯ ಜನಪ್ರಿಯ SUV ಥಾರ್ ಮತ್ತು XUV700 ನಲ್ಲಿ ಯಾವುದೇ ಪ್ರಯೋಜನಗಳನ್ನು ನೀಡಿಲ್ಲ.

  MORE
  GALLERIES

 • 38

  Mahindra ವಾಹನಗಳ ಮೇಲೆ ಭರ್ಜರಿ ಕೊಡುಗೆ! 80 ಸಾವಿರದಷ್ಟು ಉಳಿತಾಯ ಮಾಡ್ಬೋದು ನೋಡಿ​

  ಮಹೀಂದ್ರಾ ಬೊಲೆರೊ: ಗ್ರಾಹಕರ ನೆಚ್ಚಿನ ಹೊಸ ಬೊಲೆರೊ ಖರೀದಿಯ ಮೇಲೆ ಮಹೀಂದ್ರಾ 19,000 ರೂ.ವರೆಗಿನ ಒಟ್ಟು ಕೊಡುಗೆಗಳನ್ನು ನೀಡಿದೆ. ಗ್ರಾಹಕರಿಗಾಗಿ ಇದರ ಮೇಲೆ ಸುಮಾರು 10,000 ವರೆಗಿನ ವಿನಿಮಯ ಬೋನಸ್ ನೀಡುತ್ತಿದೆ, ರೂ. 3,000 ರ ಕಾರ್ಪೊರೇಟ್ ರಿಯಾಯಿತಿ ಮತ್ತು ರೂ. 6,000 ವರೆಗಿನ ಪ್ರತ್ಯೇಕವಾಗಿ ಕೊಡುಗೆಗಳು ಸೇರಿವೆ.

  MORE
  GALLERIES

 • 48

  Mahindra ವಾಹನಗಳ ಮೇಲೆ ಭರ್ಜರಿ ಕೊಡುಗೆ! 80 ಸಾವಿರದಷ್ಟು ಉಳಿತಾಯ ಮಾಡ್ಬೋದು ನೋಡಿ​

  ಮಹೀಂದ್ರಾ KUV100 NXT: ಈ ಸಣ್ಣ ಗಾತ್ರದ SUV ಯ ಮೇಲೆ 37,190 ರೂ.ವರೆಗೆ ಕೊಡುಗೆಗಳನ್ನು ಒದಗಿಸಿದೆ. ಇವುಗಳಲ್ಲಿ 14,190 ರೂ. ವರೆಗಿನ ನಗದು ರಿಯಾಯಿತಿ ನೀಡಿದೆ. 3,000 ರೂ ವರೆಗಿನ ಕಾರ್ಪೊರೇಟ್ ರಿಯಾಯಿತಿಗಳು ಮತ್ತು 20,000 ರೂ.ವರೆಗಿನ ವಿನಿಮಯ ಕೊಡುಗೆಗಳು ಸೇರಿವೆ.

  MORE
  GALLERIES

 • 58

  Mahindra ವಾಹನಗಳ ಮೇಲೆ ಭರ್ಜರಿ ಕೊಡುಗೆ! 80 ಸಾವಿರದಷ್ಟು ಉಳಿತಾಯ ಮಾಡ್ಬೋದು ನೋಡಿ​

  ಮಹೀಂದ್ರಾ XUV300: ಈ ಕಾರಿನ ಮೇಲೆ 46,581 ರೂ.ವರೆಗೆ ಒಟ್ಟು ಕೊಡುಗೆಗಳನ್ನು ನೀಡಲಾಗಿದೆ. ಇದರಲ್ಲಿ 7,581 ರೂ.ವರೆಗೆ ನಗದು ರಿಯಾಯಿತಿ ಒದಗಿಸಿದೆ. ಇದಲ್ಲದೆ, 10,000 ರೂ. ವರೆಗಿನ ಉಚಿತ ಪರಿಕರಗಳು, 25,000 ರೂ. ವರೆಗೆ ಎಕ್ಸ್ಚೇಂಜ್ ಆಫರ್ ಮತ್ತು 4,000 ರೂ. ವರೆಗಿನ ಕಾರ್ಪೊರೇಟ್ ರಿಯಾಯಿತಿ ನೀಡಿದೆ.

  MORE
  GALLERIES

 • 68

  Mahindra ವಾಹನಗಳ ಮೇಲೆ ಭರ್ಜರಿ ಕೊಡುಗೆ! 80 ಸಾವಿರದಷ್ಟು ಉಳಿತಾಯ ಮಾಡ್ಬೋದು ನೋಡಿ​

  ಮಹೀಂದ್ರ ಸ್ಕಾರ್ಪಿಯೊ: ಗ್ರಾಹಕರ ನೆಚ್ಚಿನ ಸ್ಕಾರ್ಪಿಯೊ ಎಸ್ಯುವಿ ಮೇಲೆ ಮಹೀಂದ್ರಾ ಒಟ್ಟು 27,320 ರೂ. ವರೆಗೆ ಕೊಡುಗೆಗಳನ್ನು ನೀಡಿದೆ. ಇವುಗಳಲ್ಲಿ 13,320 ರೂ.ವರೆಗಿನ ಉಚಿತ ಪರಿಕರಗಳು, 4,000 ರೂವರೆಗೆ ಕಾರ್ಪೊರೇಟ್ ರಿಯಾಯಿತಿ ಮತ್ತು 10,000 ರೂ. ವರೆಗೆ ವಿನಿಮಯ ಬೋನಸ್ ಸೇರಿವೆ.

  MORE
  GALLERIES

 • 78

  Mahindra ವಾಹನಗಳ ಮೇಲೆ ಭರ್ಜರಿ ಕೊಡುಗೆ! 80 ಸಾವಿರದಷ್ಟು ಉಳಿತಾಯ ಮಾಡ್ಬೋದು ನೋಡಿ​

  ಮಹೀಂದ್ರ ಅಲ್ಟುರಾಸ್ ಜಿ4: ಮಹೀಂದ್ರಾದ ಅತ್ಯಂತ ದುಬಾರಿ SUV ಇದಾಗಿದೆ. ಇದರ ಮೇಲೆ ಕಂಪನಿಯು 81,500 ರೂ.ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಈ ಕೊಡುಗೆಗಳು 50,000 ರೂ.ವರೆಗೆ ವಿನಿಮಯ ಬೋನಸ್, 11,500 ರೂ. ವರೆಗೆ ಕಾರ್ಪೊರೇಟ್ ರಿಯಾಯಿತಿ ಮತ್ತು 20,000 ರೂ. ಮೌಲ್ಯದ ಉಚಿತ ಪರಿಕರಗಳನ್ನು ಒಳಗೊಂಡಿವೆ.

  MORE
  GALLERIES

 • 88

  Mahindra ವಾಹನಗಳ ಮೇಲೆ ಭರ್ಜರಿ ಕೊಡುಗೆ! 80 ಸಾವಿರದಷ್ಟು ಉಳಿತಾಯ ಮಾಡ್ಬೋದು ನೋಡಿ​

  ಮಹೀಂದ್ರ ಮರಾಜ್ಜೊ: ಮಹೀಂದ್ರಾ ಮರಾಜ್ಜೋ ವಾಹನದ ಮೇಲೆ 55,200 ರೂ.ವರೆಗಿನ ಪ್ರಯೋಜನಗಳನ್ನು ನೀಡುತ್ತಿದೆ. ಬೇಸ್ M2 ಟ್ರಿಮ್ನಲ್ಲಿ 20,000 ರೂಪಾಯಿಗಳವರೆಗೆ ನಗದು ರಿಯಾಯಿತಿಯನ್ನು ನೀಡಲಾಗುತ್ತಿದ್ದು, ಉಳಿದ ಟ್ರಿಮ್ಗಳು 15,000 ರೂಪಾಯಿಗಳ ನಗದು ರಿಯಾಯಿತಿಯನ್ನು ಪಡೆಯುತ್ತಿವೆ. ಕಂಪನಿಯ ಕಾರಿನ ಮೇಲೆ 15,000 ರೂಪಾಯಿಗಳವರೆಗೆ ವಿನಿಮಯ ಬೋನಸ್ ಮತ್ತು 5,200 ರೂಪಾಯಿಗಳವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತಿದೆ.

  MORE
  GALLERIES