ಈ ಮೊಬೈಲ್ನಲ್ಲಿ ವೈಯಕ್ತಿಕ ವಿವರಗಳು, ಬ್ಯಾಂಕ್, ಆನ್‌ಲೈನ್ ಖಾತೆ ವಿವರಗಳು, ಫೋಟೋಗಳು ಮತ್ತು ಇತರ ಪ್ರಮುಖ ಮಾಹಿತಿ ಇರುತ್ತದೆ. ಮತ್ತು ನೀವು ಅಂತಹ ಫೋನ್ ಅನ್ನು ಎಲ್ಲೋ ಮರೆತರೆ? ಯಾರಾದರೂ ಕದ್ದರೆ ಏನ್ ಮಾಡೋದು ಎಂಬ ಯೋಚನೆಯಲ್ಲಿರುತ್ತೀರಾ. ಆದರೆ ಇನ್ಮುಂದೆ ಟೆನ್ಷನ್ ಬೇಡ, ಈ ಟ್ರಿಕ್ಸ್ ಬಳಸಿ ಸುಲಭದಲ್ಲಿ ನೀವು ಕಳೆದುಕೊಂಡ ಸ್ಮಾರ್ಟ್‌ಫೋನ್ ಅನ್ನು ಮರಳಿ ಪಡೆಯಬಹುದು.
ಸ್ಮಾರ್ಟ್‌ಫೋನ್ ಅನ್ನು ಟ್ರ್ಯಾಕ್ ಮಾಡಬಹುದು : ನಿಮ್ಮ ಸ್ಮಾರ್ಟ್‌ಫೋನ್ ಮೊಬೈಲ್ ಟ್ರ್ಯಾಕಿಂಗ್ ಆಯ್ಕೆಯನ್ನು ಸಕ್ರಿಯವಾಗಿದ್ದರೆ ಅದು ಎಲ್ಲಿದೆ ಎಂದು ತಿಳಿಯಲು ಸಾಧ್ಯವಾಗುತ್ತದೆ. ಹೇಗೆಂದರೆ ಫೈಂಡ್ ಮೈ ಐಫೋನ್ ಮೂಲಕ ನೀವು ಐಫೋನ್ ಅನ್ನು ಕಂಡುಹಿಡಿಯಬಹುದು. ನೀವು ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದರೆ, ಫೈಂಡ್ ಮೈ ಡಿವೈಸ್ ಆಯ್ಕೆಗಳು ಆನ್ ಆಗಿದ್ದರೆ, ಟ್ರ್ಯಾಕ್ ಮಾಡುವ ಸಾಧ್ಯತೆಯಿದೆ. ಅದನ್ನು ಆಫ್ ಮಾಡಿದರೆ, ಕಳೆದು ಹೋದ ಫೋನ್ ಅನ್ನು ಟ್ರ್ಯಾಕಿಂಗ್ ಮಾಡಲು ಸಾಧ್ಯವಾಗುವುದಿಲ್ಲ.
ಸ್ಮಾರ್ಟ್‌ಫೋನ್ ಟ್ರ್ಯಾಕಿಂಗ್ ಅಥವಾ ಡೇಟಾ ಅಳಿಸುವಿಕೆ ಸಾಧ್ಯವಾಗದಿದ್ದಾಗ ನಿಮ್ಮ ಸಿಮ್ ಅನ್ನು ತಕ್ಷಣವೇ ಬ್ಲಾಕ್ ಮಾಡ್ಬೇಕು. ಒಂದೇ ಸಂಖ್ಯೆಯ ವಿಭಿನ್ನ ಸಿಮ್ ಅನ್ನು ಪಡೆಯಿರಿ ಮತ್ತು ಆನ್‌ಲೈನ್ ಖಾತೆಗೆ ಸಂಬಂಧಿಸಿದ ಎಲ್ಲಾ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ಗಳನ್ನು ಬದಲಾಯಿಸಿ. ಇನ್ನು ಬ್ಯಾಂಕ್ ಖಾತೆಯ ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾಯಿಸುವ ಮೂಲಕ ನಷ್ಟವಾಗುವುದನ್ನು ಕಡಿಮೆ ಮಾಡಬಹುದು.