ಈ ಮುಖಭಾವ ನಿಮ್ಮಲ್ಲಿದ್ದರೆ ಸಿಗುತ್ತೆ 92 ಲಕ್ಷ ರೂಪಾಯಿ..!

First published:

 • 111

  ಈ ಮುಖಭಾವ ನಿಮ್ಮಲ್ಲಿದ್ದರೆ ಸಿಗುತ್ತೆ 92 ಲಕ್ಷ ರೂಪಾಯಿ..!

  ಟೆಕ್ನಾಲಜಿ ಬೆಳೆಯುತ್ತಿದ್ದಂತೆ ಚಿಂತನೆಗಳು ಸಹ ಬದಲಾಗುತ್ತಿದೆ. ಈಗಾಗಲೇ ಚೀನಾ, ಜಪಾನ್​ ಸೇರಿ ಸಾಕಷ್ಟು ದೇಶಗಳಲ್ಲಿ ಮೆಡಿಕಲ್​ ಶಾಪ್​, ಹೋಟೆಲ್​ ಹೀಗೆ ಅನೇಕ ಕಡೆಗಳಲ್ಲಿ ರೋಬೋಟ್​ ಸೇವೆ ಆರಂಭವಾಗಿದೆ.

  MORE
  GALLERIES

 • 211

  ಈ ಮುಖಭಾವ ನಿಮ್ಮಲ್ಲಿದ್ದರೆ ಸಿಗುತ್ತೆ 92 ಲಕ್ಷ ರೂಪಾಯಿ..!

  ಇನ್ನು ಚೀನಾದಲ್ಲಿ ರೋಬೋಟ್​ನಿಂದ ನ್ಯೂಸ್ ಆ್ಯಂಕರಿಂಗ್ ಮಾಡಿಸುವ ಮೂಲಕ ವಿಶ್ವದ ಗಮನ ಸೆಳೆದಿತ್ತು. ಹಾಗೆಯೇ ಭಾರತದಲ್ಲೂ ಅಲ್ಲಲ್ಲಿ ರೋಬೋ ಸೇವೆ ಆರಂಭಗೊಂಡಿದೆ.

  MORE
  GALLERIES

 • 311

  ಈ ಮುಖಭಾವ ನಿಮ್ಮಲ್ಲಿದ್ದರೆ ಸಿಗುತ್ತೆ 92 ಲಕ್ಷ ರೂಪಾಯಿ..!

  ಸಾಮಾನ್ಯವಾಗಿ ಮೊದಲ ನೋಟಕ್ಕೆ ರೋಬೋಟ್​ಗಳು ಯಂತ್ರ ಎಂಬುದು ಅದರ ವಿನ್ಯಾಸದಿಂದಲೇ ತಿಳಿಯುತ್ತದೆ. ಇದೀಗ ಅದಕ್ಕೂ ಹೊಸ ಟಚ್ ನೀಡಲು ಲಂಡನ್ ಮೂಲದ ಟೆಕ್ ಕಂಪೆನಿಯೊಂದು ಮುಂದಾಗಿದೆ.

  MORE
  GALLERIES

 • 411

  ಈ ಮುಖಭಾವ ನಿಮ್ಮಲ್ಲಿದ್ದರೆ ಸಿಗುತ್ತೆ 92 ಲಕ್ಷ ರೂಪಾಯಿ..!

  ಜಿಯೋಮಿಕ್ ಎಂಬ ಟೆಕ್​ ಕಂಪೆನಿಯು ತನ್ನ ನೂತನ ರೋಬೋಟ್‌ಗಾಗಿ ಮುಖವೊಂದರ ಹುಡುಕಾಟದಲ್ಲಿದೆ. ಕೇಳಲು ಅಚ್ಚರಿಯಾದರೂ ಇದು ಸತ್ಯ.

  MORE
  GALLERIES

 • 511

  ಈ ಮುಖಭಾವ ನಿಮ್ಮಲ್ಲಿದ್ದರೆ ಸಿಗುತ್ತೆ 92 ಲಕ್ಷ ರೂಪಾಯಿ..!

  ಕಂಪೆನಿಯು ಬಿಡುಗಡೆ ಮಾಡಲಿರುವ ಹೊಸ ರೋಬೋಟ್​​ಗೆ ಮನುಷ್ಯನ ಮುಖ ರೂಪವನ್ನು ನೀಡಲಿದೆ. ಅದಕ್ಕಾಗಿ ದಯೆ ಮತ್ತು ಸ್ನೇಹಪರ ಮುಖಭಾವ ಹೊಂದಿರುವ ಮುಖವೊಂದನ್ನು ಹುಡುಕಾಡುತ್ತಿದೆ.

  MORE
  GALLERIES

 • 611

  ಈ ಮುಖಭಾವ ನಿಮ್ಮಲ್ಲಿದ್ದರೆ ಸಿಗುತ್ತೆ 92 ಲಕ್ಷ ರೂಪಾಯಿ..!

  ಅಂತಹದೊಂದು ಚಹರೆ ನಿಮ್ಮದಾಗಿದ್ದರೆ ಅದೇ ವಿನ್ಯಾಸದಲ್ಲಿ ರೋಬೋಟ್​ನ ಮುಖ ರೂಪಿಸಲಾಗುತ್ತದೆ. ಇದಕ್ಕಾಗಿ ಕಂಪೆನಿ ನಿಮ್ಮೊಂದಿಗೆ ಒಪ್ಪಂದವನ್ನು ಕೂಡ ಮಾಡಿಕೊಳ್ಳಲಿದೆ. ಈ ಒಪ್ಪಂದದ ಪ್ರಕಾರ...

  MORE
  GALLERIES

 • 711

  ಈ ಮುಖಭಾವ ನಿಮ್ಮಲ್ಲಿದ್ದರೆ ಸಿಗುತ್ತೆ 92 ಲಕ್ಷ ರೂಪಾಯಿ..!

  ಕಂಪೆನಿಯು ಆ ವ್ಯಕ್ತಿಗೆ  92 ಲಕ್ಷ ರೂ. ನೀಡುವುದಾಗಿ ಹೇಳಿಕೊಂಡಿದೆ. ಅಂದರೆ ನಿಮ್ಮ ಮುಖದಲ್ಲಿರುವ ದಯೆ ಹಾಗೂ ಸ್ನೇಹಪರತೆ ಗುಣ ತಂತ್ರಜ್ಞರಿಗೆ ಇಷ್ಟವಾದರೆ ನಿಮಗೆ ಈ ಭರ್ಜರಿ ಮೊತ್ತ ಸಿಗಲಿದೆ.

  MORE
  GALLERIES

 • 811

  ಈ ಮುಖಭಾವ ನಿಮ್ಮಲ್ಲಿದ್ದರೆ ಸಿಗುತ್ತೆ 92 ಲಕ್ಷ ರೂಪಾಯಿ..!

  ಅಂದಹಾಗೆ ಈ ರೋಬೋಟ್​ ವಿನ್ಯಾಸವನ್ನು ವರ್ಚುವಲ್ ಸ್ನೇಹಿತನ ಹೆಸರಿನಲ್ಲಿ ಪರಿಗಣಿಸಲಾಗುತ್ತದೆ ಎಂದು ಜಿಯೋಮಿಕ್ ಕಂಪನಿ ತಿಳಿಸಿದೆ.

  MORE
  GALLERIES

 • 911

  ಈ ಮುಖಭಾವ ನಿಮ್ಮಲ್ಲಿದ್ದರೆ ಸಿಗುತ್ತೆ 92 ಲಕ್ಷ ರೂಪಾಯಿ..!

  ಮುಂದಿನ ವರ್ಷದೊಳಗೆ ಈ ರೋಬೋಟ್ ಪೂರ್ಣಗೊಳ್ಳಲಿದ್ದು, ಇದಕ್ಕಾಗಿ ಮುಖದ ಹುಡುಕಾಟ ಈಗಾಗಲೇ ಪ್ರಾರಂಭವಾಗಿದೆ. ಇದಕ್ಕಾಗಿ ಅನೇಕ ಮುಖಗಳನ್ನು ಪರೀಕ್ಷಿಸಿದ್ದೇವೆ ಎಂದು ಕಂಪೆನಿ ಹೇಳಿದೆ.

  MORE
  GALLERIES

 • 1011

  ಈ ಮುಖಭಾವ ನಿಮ್ಮಲ್ಲಿದ್ದರೆ ಸಿಗುತ್ತೆ 92 ಲಕ್ಷ ರೂಪಾಯಿ..!

  ಆದರೂ ನಮಗೆ ಬೇಕಾದ ಮುಖವಿನ್ನೂ ಸಿಕ್ಕಿಲ್ಲ. ಇದು ವಿಭಿನ್ನ ರೀತಿಯ ಹುಡುಕಾಟ ಎಂಬುದು ನಮಗೆ ತಿಳಿದಿದೆ. ಹಾಗಾಗಿಯೇ ಕೆಲ ಅಪರೂಪದ ಮುಖಕ್ಕಾಗಿ ನಾವು ಹುಡುಕಾಟವನ್ನು ಮುಂದುವರೆಸಿರುವುದಾಗಿ ಕಂಪೆನಿ ಹೇಳಿಕೊಂಡಿದೆ.

  MORE
  GALLERIES

 • 1111

  ಈ ಮುಖಭಾವ ನಿಮ್ಮಲ್ಲಿದ್ದರೆ ಸಿಗುತ್ತೆ 92 ಲಕ್ಷ ರೂಪಾಯಿ..!

  ಈ ರೋಬೋಟ್ ಮುಖವು ಮನುಷ್ಯನಂತೆ ಕಾಣಲಿದ್ದು, ಅಂದರೆ ಆಯ್ಕೆಯಾದ ವ್ಯಕ್ತಿಯ ತದ್ರೂಪಿ ಯಂತ್ರಮಾನವನಾಗಿ ಈ ರೋಬೋಟ್ ಪ್ರಪಂಚಕ್ಕೆ ಕಾಲಿಡಲಿದ್ದಾನೆ ಎಂದು ಕಂಪೆನಿ ಹೇಳಿದೆ.

  MORE
  GALLERIES