74ನೇ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ದಿನವಾದ ಇಂದು ದೇಶಿಯ ಸ್ಮಾರ್ಟ್ಫೋನ್ ಸಂಸ್ಥೆಯಾದ ಲಾವಾ ಝೆಡ್ 61 ಪ್ರೊ ಸ್ಮಾರ್ಟ್ಫೋನ್ ಜೊತೆಗೆ ಎ5, ಎ9 ಫೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
2/ 10
ಲಾವಾ ಸಂಸ್ಥೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹೆಮ್ಮೆಯ ಭಾರತೀಯ ಎಂಬ ವಿಶೇಷ ಆವೃತ್ತಿಯಲ್ಲಿ ಈ ಸ್ಮಾರ್ಟ್ಫೋನ್ಗಳನ್ನು ಹೊರತಂದಿದೆ
3/ 10
ಲಾವಾ ಝೆಡ್ 61 ಪ್ರೊ ಸ್ಮಾರ್ಟ್ಫೋನ್ ಜುಲೈ ತಿಂಗಳಿನಲ್ಲಿ ಬಿಡುಗಡೆಯಾಗಿದೆ. ಇದೀಗ ಹೆಮ್ಮೆಯ ಭಾರತೀಯ ಲೋಗೋ ಅಡಿಯಲ್ಲಿ ಷಾಂಪೇನ್ ಗೋಲ್ಡ್ ರೂಪಾಂತರದಲ್ಲಿ ಬಿಡುಗಡೆಯಾಗಿದೆ.
4/ 10
ಎರಡು ಫೋನ್ಗಳು ಟ್ರೈ-ಕಲರ್ ಬ್ಯಾಕ್ ಪ್ಯಾನೆಲ್ಗಳನ್ನು ಹೊಂದಿದೆ. ಸದ್ಯದಲ್ಲೇ ಆನ್ಲೈನ್ ಮಳಿಗೆಯಲ್ಲಿ ಮಾರಾಟ ಮಾಡುವ ಮೂಲಕ ಗ್ರಾಹಕರ ಖರೀದಿಗೆ ಸಿಗಲಿದೆ.
5/ 10
ಲಾವಾ ಝೆಡ್61 ಪ್ರೊ ಸ್ಮಾರ್ಟ್ಫೋನ್ 5.45 ಇಂಚಿನ ಎಚ್ಡಿ + ಡಿಸ್ಪ್ಲೇ ಹೊಂದಿದ್ದು, 1.6ಜಿಎಚ್ಝೆಡ್ ಒಕ್ವಾಕೋರ್ ಪ್ರೊಸೆಸರ್ ಒಳಗೊಂಡಿದೆ.
6/ 10
2GB RAM ಮತ್ತು 16GB ಇಂಟರ್ನಲ್ ಸ್ಟೊರೇಜ್ ಜೊತೆಗೆ 128GB ವರೆಗೆ ಮೆಮೊರಿ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಈ ಸ್ಮಾರ್ಟ್ಫೋನ್ 8 ಮೆಗಾಫಿಕ್ಸೆಲ್ ಸೆನ್ಸಾರ್ ಸಿಂಗಲ್ ರಿಯರ್ ಕ್ಯಾಮೆರಾ, 5 ಮೆಗಾಫಿಕ್ಸೆಲ್ ಸೆನ್ಸಾರ್ ಹೊಂದಿರುವ ಸಲ್ಫಿ ಕ್ಯಾಮೆರಾ ಇದರಲ್ಲಿದೆ.
7/ 10
ಲಾವಾ ಎ5 ಫೋನ್: 2.4 ಇಂಚಿನ ಕ್ಯೂವಿಜಿಎ ಡಿಸ್ಪ್ಲೇಯನ್ನು ಹೊಂದಿದೆ. ಕಡಿಮೆ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ನೀಡಲಾಗಿದೆ. 32ಜಿಬಿ ವರೆಗೆ ಸ್ಟೊರೇಜ್ ಹೊಂದಿದೆ.
8/ 10
ಲಾವಾ ಎ9 ಫೋನ್ 240x320 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 2.8 ಇಂಚಿನ ಡಿಸ್ಪ್ಲೇ ಹೊಂದಿದೆ.1.3 ಮೆಗಾಫಿಕ್ಸೆಲ್ ಸಿಂಗಲ್ ರಿಯರ್ ಕ್ಯಾಮೆರಾ ನೀಡಲಾಗಿದೆ.
9/ 10
4GB RAMಮತ್ತು 32ಜಿಬಿ ಸ್ಟೊರೇಜ್ ಆಯ್ಕೆ ಸಿಗಲಿದೆ. ಜೊತೆಗೆ FM ಆಲಿಸಬಹುದಾಗಿದೆ.
10/ 10
ಲಾವಾ ಝೆಡ್61 ಪ್ರೊ 5,777 ರೂ.ಗೆ ಖರೀದಿಗೆ ಸಿಗಲಿದೆ . ಷಾಂಪೇನ್ ಗೋಲ್ಡ್ ಬಣ್ಣದಲ್ಲಿ ಗ್ರಾಹಕರಿಗೆ ಸಿಗಲಿದೆ. ಲಾವಾ ಎ5 ಮತ್ತು ಎ9 ಫೋನ್ ತ್ರಿವರ್ಣ ಧ್ವಜದ ಬಣ್ಣದಲ್ಲಿ ಸಿಗಲಿದ್ದು, ಲಾವಾ ಎ5 1,333ರೂ ಮತ್ತು ಎ9 1,574 ರೂ.ಗೆ ಸಿಗಲಿದೆ