Tirupati Tirumala: ತಿರುಪತಿಯಲ್ಲಿ ಫೇಸ್​ ರೆಕಗ್ನೈಸೇಷನ್​ ಸಿಸ್ಟಮ್​ ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಶೀಘ್ರದಲ್ಲೇ ಹೊಸ ಹೊಸ ಬದಲಾವಣೆಗಳು ಆಗಲಿದೆ ಎಂದು ದೇವಾಲಯದ ಆಡಳಿತ ಸಮಿತಿ ಹೇಳಿದೆ. ದೇವರ ದರ್ಶನದಲ್ಲಿ ಉಂಟಾಗುತ್ತಿದ್ದ ಕೆಲವೊಂದು ಲೋಪದೋಷಗಳನ್ನು ತೆಗೆದುಹಾಕುವುದಕ್ಕಾಗಿ ಫೇಸ್‌ ರೆಕಗ್ನಿಷನ್ ಟೆಕ್ನಾಲಜಿ ಪರಿಚಯಿಸಲಾಗ್ತಿದೆ ಎಮದು ಹೇಳಲಾಗಿದೆ. ಹಾಗಿದ್ರೆ ಈ ಹೊಸ ಸಿಸ್ಟಮ್​ ಹೇಗೆ ಕಾರ್ಯನಿರ್ವಹಿಸುತ್ತದೆ ಎಮದು ತಿಳಿಬೇಕಾದ್ರೆ ಈ ಲೇಖನವನ್ನೊಮ್ಮೆ ಓದಿ.

  • News18 Kannada
  • |
  •   | Andhra Pradesh, India
First published:

  • 18

    Tirupati Tirumala: ತಿರುಪತಿಯಲ್ಲಿ ಫೇಸ್​ ರೆಕಗ್ನೈಸೇಷನ್​ ಸಿಸ್ಟಮ್​ ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

    ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತಾಧಿಗಳಿಗೆ ಟಿಟಿಡಿ ಗುಡ್‌ನ್ಯೂಸ್‌ ನೀಡಿದೆ. ಇದರಿಂದ ತಿಮ್ಮಪ್ಪನ ದರ್ಶನ ಮಾಡುವುದು ಇನ್ನಷ್ಟು ಸುಲಭವಾಗಲಿದೆ ಎಂದು ಹೇಳಿದೆ. ಇದಕ್ಕಾಗಿ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಫೇಸ್‌ ರೆಕಗ್ನೈಸೇಷನ್ ಟೆಕ್ನಾಲಜಿಯನ್ನು ಪರಿಚಯಿಸಲು ಮುಂದಾಗಿದೆ. ಈ ಹೊಸ ಸಿಸ್ಟಂ ಇದೇ ಮಾರ್ಚ್‌ 1 ರಿಂದ ಜಾರಿಗೆ ದೇವಾಲಯದಲ್ಲಿ ಜಾರಿಗೆ ಬರುತ್ತದೆ.

    MORE
    GALLERIES

  • 28

    Tirupati Tirumala: ತಿರುಪತಿಯಲ್ಲಿ ಫೇಸ್​ ರೆಕಗ್ನೈಸೇಷನ್​ ಸಿಸ್ಟಮ್​ ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

    ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಶೀಘ್ರದಲ್ಲೇ ಹೊಸ ಹೊಸ ಬದಲಾವಣೆಗಳು ಆಗಲಿದೆ ಎಂದು ದೇವಾಲಯದ ಆಡಳಿತ ಸಮಿತಿ ಹೇಳಿದೆ. ದೇವರ ದರ್ಶನದಲ್ಲಿ ಉಂಟಾಗುತ್ತಿದ್ದ ಕೆಲವೊಂದು ಲೋಪದೋಷಗಳನ್ನು ತೆಗೆದುಹಾಕುವುದಕ್ಕಾಗಿ ಫೇಸ್‌ ರೆಕಗ್ನೈಸೇಷನ್ ಟೆಕ್ನಾಲಜಿ ಪರಿಚಯಿಸಲಾಗ್ತಿದೆ ಎಮದು ಹೇಳಲಾಗಿದೆ. ಹಾಗಿದ್ರೆ ಈ ಹೊಸ ಸಿಸ್ಟಮ್​ ಹೇಗೆ ಕಾರ್ಯನಿರ್ವಹಿಸುತ್ತದೆ ಎಮದು ತಿಳಿಬೇಕಾದ್ರೆ ಈ ಲೇಖನವನ್ನೊಮ್ಮೆ ಓದಿ.

    MORE
    GALLERIES

  • 38

    Tirupati Tirumala: ತಿರುಪತಿಯಲ್ಲಿ ಫೇಸ್​ ರೆಕಗ್ನೈಸೇಷನ್​ ಸಿಸ್ಟಮ್​ ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

    ತಿರುಪತಿ ತಿಮ್ಮಪ್ಪನ ದರ್ಶನ ಬಯಸುವವರು ಮಾರ್ಚ್‌ 1 ರಿಂದ ಫೇಸ್‌ ರೆಕಗ್ನಿಷನ್ ಮೂಲಕ ದರ್ಶನದ ಟಿಕೆಟ್‌ಗಳನ್ನು ಪಡೆಯಬಹುದಾಗಿದೆ. ಈ ಹೊಸ ಫೇಸ್‌ ರೆಕಗ್ನೈಸೇಷನ್ ಸಿಸ್ಟಂ ಸರ್ವ ದರ್ಶನ, ಟೋಕನ್ ರಹಿತ ದರ್ಶನ, ಲಡ್ಡು ವಿತರಣೆ, ವಸತಿ ವ್ಯವಸ್ಥೆ, ಎಚ್ಚರಿಕೆ ಠೇವಣಿ ಮರುಪಾವತಿ ಈ ಎಲ್ಲಾ ವಿಭಾಗದಲ್ಲೂ ಬಳಕೆಗೆ ಬರಲಿದೆ ಎಂದು ಟಿಟಿಡಿ ಹೇಳಿದೆ.

    MORE
    GALLERIES

  • 48

    Tirupati Tirumala: ತಿರುಪತಿಯಲ್ಲಿ ಫೇಸ್​ ರೆಕಗ್ನೈಸೇಷನ್​ ಸಿಸ್ಟಮ್​ ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

    ಸದ್ಯ ಮಾರ್ಚ್ 1 ರಿಂದ ವೈಕುಂಟಂ 2 ಮತ್ತು ಎಎಂಎಸ್ ಸಿಸ್ಟಮ್‌ಗಳಲ್ಲಿ ಈ ಫೇಸ್‌ ರೆಕಗ್ನೈಸೇಷನ್ ಸಿಸ್ಟಂ ಅನ್ನು ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಲಾಗುತ್ತದೆ ಎಂದು ಹೇಳಲಾಗಿದೆ.

    MORE
    GALLERIES

  • 58

    Tirupati Tirumala: ತಿರುಪತಿಯಲ್ಲಿ ಫೇಸ್​ ರೆಕಗ್ನೈಸೇಷನ್​ ಸಿಸ್ಟಮ್​ ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

    ಇನ್ನು ಈ ಸಿಸ್ಟಮ್ ಬಗ್ಗೆ ಟಿಟಿಡಿ ನೀಡಿರುವ ಮಾಹಿತಿ ಪ್ರಕಾರ ಲಡ್ಡು ಪ್ರಸಾದ ವಿತರಣೆಯಲ್ಲಿ, ಸರ್ವ ದರ್ಶನಂ ಟೋಕನ್‌ಗಳಲ್ಲಿ ಇದುವರೆಗೆ ಸಾಕಷ್ಟು ಅಕ್ರಮಗಳು ನಡೆದಿವೆ ಎನ್ನಲಾಗಿದೆ. ಅಲ್ಲದೆ ಭಕ್ತರಿಗೆ ವಸತಿ ಮಂಜೂರು ಮಾಡುವಲ್ಲಿಯೂ ಕೆಲವು ಮೋಸಗಳು ನಡೆಯುತ್ತಿವೆ ಎಂದು ಟಿಟಿಡಿ ಹೇಳಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಫೇಸ್‌ ರೆಕಗ್ನೈಸೇಷನ್ ಸಿಸ್ಟಂ ಅನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ. ಇದು ಪ್ರವೇಶ ದ್ಯಾರದಿಂದ ಹಿಡಿದು ನಿರ್ಗಮಿಸುವವರೆಗೂ ಬಳಕೆಯಲ್ಲಿರುತ್ತದೆ.

    MORE
    GALLERIES

  • 68

    Tirupati Tirumala: ತಿರುಪತಿಯಲ್ಲಿ ಫೇಸ್​ ರೆಕಗ್ನೈಸೇಷನ್​ ಸಿಸ್ಟಮ್​ ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

    ತಿರುಪತಿಯಲ್ಲಿ ಕೆಲವು ಭಕ್ತರು ಅಲ್ಲಿಯೇ ಬಂದು ರಶೀದಿ ಮಾಡುವ ಮೂಲಕ ವಸತಿ ಸೇವೆಯನ್ನು ಪಡೆಯುತ್ತಿದ್ದಾರೆ. ಆದರೆ ಕೆಲವರು ಬ್ರೋಕರ್​​ಗಳ ಮೂಲಕ ಬಂದು ಇಲ್ಲಿ ಡೆಪಾಸಿಟ್​ ಪಾವತಿಸುವ ಮೂಲಕ ವಸತಿ ವ್ಯವಸ್ಥೆಯನ್ನು ಪಡೆಯುತ್ತಾರೆ. ಆದರೆ ನಂತರ ಮತ್ತೆ ಬ್ರೋಕರ್​​ಗಳ ಬಳಿಗೆ ಹೋಗಿ ಡೆಪಾಸಿಟ್​ ಹಣವನ್ನು ಕೇಳಿದಾಗ ಬ್ರೋಕರ್​ಗಳು ಹಣ ನೀಡದೆ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಬಂದಿವೆ. ಆದ್ದರಿಂದ ಇವೆಲ್ಲವನ್ನು ತಡೆಯುವ ನಿಟ್ಟಿನಲ್ಲಿ ಫೇಸ್​ ರೆಕಗ್ನೈಸೇಷನ್​ ಸಿಸ್ಟಮ್​ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.

    MORE
    GALLERIES

  • 78

    Tirupati Tirumala: ತಿರುಪತಿಯಲ್ಲಿ ಫೇಸ್​ ರೆಕಗ್ನೈಸೇಷನ್​ ಸಿಸ್ಟಮ್​ ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

    ಫೇಸ್​ ರೆಕಗ್ನೈಸೇಷನ್ ಎಂದರೇನು?: ತಿರುಪತಿಯಲ್ಲಿ ಫೇಸ್‌ ರೆಕಗ್ನೈಸೇಷನ್ ಸಿಸ್ಟಂ ಜಾರಿಗೆ ತರುವುದರಿಂದ ದರ್ಶನ ಹಾಗೂ ಲಡ್ಡು ವಿತರಣೆಯ ಕಾರ್ಯದಲ್ಲಿ ಬಹಳಷ್ಟು ಉಪಯೋಗಕ್ಕೆ ಬರುತ್ತದೆ. ಫೇಸ್‌ ರೆಕಗ್ನೈಸೇಷನ್ ಸಿಸ್ಟಂ ಎಂದರೆ ಹೆಸರೇ ಸೂಚಿಸುವಂತೆ ವ್ಯಕ್ತಿಯ ಮುಖವನ್ನು ಬಳಸಿಕೊಂಡು ಅವರ ಗುರುತನ್ನು ಗುರುತಿಸುವ ಕಾರ್ಯವನ್ನು ಈ ಸಿಸ್ಟಂ ಮಾಡುತ್ತದೆ. ಅಂದರೆ ಫೇಸ್‌ ರೆಕಗ್ನಿಷನ್ ಬಯೋಮೆಟ್ರಿಕ್ ಭದ್ರತೆಯ ಮತ್ತೊಂದು ಭಾಗ ಅಂತಾನೂ ಹೇಳಬಹುದು.

    MORE
    GALLERIES

  • 88

    Tirupati Tirumala: ತಿರುಪತಿಯಲ್ಲಿ ಫೇಸ್​ ರೆಕಗ್ನೈಸೇಷನ್​ ಸಿಸ್ಟಮ್​ ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

    ಇನ್ನು ಇತ್ತೀಚಿಗೆ ಟಿಟಿಡಿ ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್‌ ಅನ್ನು ಪರಿಚಯಿಸಿದೆ. ಈ ಆ್ಯಪ್‌ ತಿರುಪತಿ ಯಾತ್ರೆಯ ಸಮಯದಲ್ಲಿ ನಿಮಗೆ ಉಪಯೋಗಕ್ಕೆ ಬರಲಿದೆ. ಈ ಆ್ಯಪ್‌ ಬಳಕೆ ಮಾಡುವ ಮೂಲಕ ದೇವರ ದರ್ಶನದ ಟಿಕೆಟ್‌ ಬುಕಿಂಗ್‌, ದೇವಸ್ಥಾನಕ್ಕೆ ಸಂಬಂಧಿಸಿದ ರೂಮ್‌ಗಳ ಬುಕ್ಕಿಂಗ್‌, ಇ-ಹುಂಡಿ ಸೇವೆ ಸೇರಿದಂತೆ ವಿವಿಧ ಯಾತ್ರಾ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

    MORE
    GALLERIES