ಬೇಸಿಗೆಕಾಲ ಅರಂಭವಾಗಿದೆ. ಬಿಸಿಲಂತು ತುಂಬಾನೇ ಹೆಚ್ಚಾಗಿಯೇ ಇದೆ. ಈಗಲೇ ಹೀಗಾದರೆ ಇನ್ನೆರಡು ತಿಂಗಳಲ್ಲಿ ಬಿಸಿಲು ಇನ್ನಷ್ಟು ಉರಿಯುವುದು ಖಚಿತ. ತಾಪಮಾನವು ಮುಂದಿನ ದಿನಗಳಲ್ಲಿ 40 ಡಿಗ್ರಿಯಿಂದ 50 ಡಿಗ್ರಿಗಳವರೆಗೆ ಹೋಗಬಹುದು ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಸಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ಇ-ಕಾಮರ್ಸ್ ಕಂಪೆನಿಗಳು ಸಹ ಈ ಟೈಮಲ್ಲಿ ಎಸಿ ಆಫರ್‌ಗಳನ್ನು ಘೋಷಿಸುತ್ತವೆ.
ವಿಂಡೋ ಎಸಿ: ಹೆಸರೇ ಸೂಚಿಸುವಂತೆ, ವಿಂಡೋ ಎಸಿ ಎಂದರೆ ಕಿಟಕಿಯಲ್ಲಿ ಅಳವಡಿಸಬಹುದಾದ ಎಸಿ. ಇವುಗಳ ಬೆಲೆ ಸ್ವಲ್ಪ ಕಡಿಮೆ. ನೀವು ರೂ.25,000ಕ್ಕಿಂತ ಕಡಿಮೆ ಬೆಲೆಗೆ ವಿಂಡೋ ಎಸಿ ಖರೀದಿಸಬಹುದು. ನಿಮಗೆ ಉತ್ತಮ ಬ್ರ್ಯಾಂಡ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳು ಬೇಕಾದರೆ, ನೀವು ರೂ.40,000 ವರೆಗೆ ಖರ್ಚು ಮಾಡಬೇಕಾಗುತ್ತದೆ. ವಿಂಡೋ ಎಸಿ ಅಳವಡಿಸಲು ತುಂಬಾ ಸುಲಭ. ಆದರೆ ನಿಮ್ಮ ಮಲಗುವ ಕೋಣೆಯಲ್ಲಿ ಕಿಟಕಿ ಇದ್ದರೆ ಮಾತ್ರ ನೀವು ವಿಂಡೋ ಎಸಿ ಖರೀದಿಸಬಹುದು. ಎಸಿ ಘಟಕದ ಭಾಗವು ಕಿಟಕಿಯ ಮೂಲಕ ಮನೆಯ ಹೊರಗೆ ಹೋಗುತ್ತದೆ.
ಪೋರ್ಟಬಲ್ ಎಸಿ: ಪೋರ್ಟಬಲ್ ಎಸಿಗಳು ಉತ್ತಮ ಬ್ರಾಂಡ್‌ಗಳಿಂದ ಕೆಲವೇ ಕೆಲವು ಲಭ್ಯವಿದೆ. ಕೆಲವೇ ಕಂಪೆನಿಗಳು ಪೋರ್ಟಬಲ್ ಎಸಿಗಳನ್ನು ನೀಡುತ್ತವೆ. ಸಣ್ಣ ರೂಮ್ ಹೊಂದಿರುವವರಿಗೆ ಪೋರ್ಟಬಲ್ ಎಸಿ ಸೂಕ್ತವಾಗಿದೆ. ಇನ್ನು ಈ ಎಸಿಯಲ್ಲಿ ಫೀಚರ್ಸ್ಗಳು ಮತ್ತು ಆಯ್ಕೆಗಳು ಕಡಿಮೆ. ಆದ್ದರಿಂದ ಸಾಧ್ಯವಾದಷ್ಟು ಪೋರ್ಟಬಲ್ ಎಸಿ ತೆಗೆದುಕೊಳ್ಳದಿರುವುದು ಉತ್ತಮ. ಬೇರೆ ರೀತಿಯ ಎಸಿ ಅಳವಡಿಸಲು ಅವಕಾಶವಿಲ್ಲದಿದ್ದರೆ ಮಾತ್ರ ಪೋರ್ಟಬಲ್ ಎಸಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನೀವು ಇತರ ಎಸಿಗಳನ್ನು ನೋಡಬಹುದು.
ಬಾಲ್ಕನಿ, ಟೆರೇಸ್ ಇತ್ಯಾದಿಗಳಿಗೆ ಪ್ರವೇಶವಿಲ್ಲದಿದ್ದರೆ ಸ್ಪ್ಲಿಟ್ ಎಸಿ ಅಳವಡಿಸುವುದು ಕಷ್ಟ. ಆ ಸಂದರ್ಭದಲ್ಲಿ ವಿಂಡೋ ಎಸಿ ತೆಗೆದುಕೊಳ್ಳಬೇಕು. ಕೊಠಡಿ ಸೂಕ್ತವಾಗಿದ್ದರೆ ಸ್ಪ್ಲಿಟ್ ಎಸಿ ತೆಗೆದುಕೊಳ್ಳಬಹುದು. ಆದರೆ ವಿಂಡೋ ಎಸಿಗಿಂತ ಬೆಲೆ ಸ್ವಲ್ಪ ಹೆಚ್ಚಾಗಿರುತ್ತದೆ. ಸ್ಪ್ಲಿಟ್ ಎಸಿ ಬೆಲೆ ರೂ.35,000 ರಿಂದ ಪ್ರಾರಂಭವಾಗುತ್ತದೆ. ನೀವು ಉತ್ತಮ ವೈಶಿಷ್ಟ್ಯಗಳೊಂದಿಗೆ ಸ್ಪ್ಲಿಟ್ ಎಸಿ ಖರೀದಿಸಲು ಬಯಸಿದರೆ, ನೀವು ರೂ.70,000 ವರೆಗೆ ಖರ್ಚು ಮಾಡಬೇಕಾಗುತ್ತದೆ.
ಸೆಂಟ್ರಲ್ ಎಸಿ: ಸೆಂಟ್ರಲ್ ಎಸಿಗಳು ಹೆಚ್ಚಾಗಿ ಕಚೇರಿಗಳು ಮತ್ತು ದೊಡ್ಡ ಹಾಲ್‌ಗಳಲ್ಲಿ ಕಂಡುಬರುತ್ತವೆ. ಕೆಲವೇ ಜನರು ತಮ್ಮ ಮನೆಗಳಲ್ಲಿ ಸೆಂಟ್ರಲ್ ಎಸಿಗಳನ್ನು ಅಳವಡಿಸುತ್ತಾರೆ. ಸೆಂಟ್ರಲ್ ಎಸಿ ಕೂಡ ದುಬಾರಿಯಾಗಿದೆ. ನೀವು ವಿಶಾಲವಾದ ಮನೆಯನ್ನು, ರೂಮ್ಗಳನ್ನು ಹೊಂದಿದ್ದರೆ ಮಾತ್ರ ಸೆಂಟ್ರಲ್ ಎಸಿಯನ್ನು ಖರೀದಿಸಬೇಕು. ಅಪಾರ್ಟ್ ಮೆಂಟ್ ಹಾಗೂ ಸಣ್ಣ ಮನೆಗಳಲ್ಲಿ ಸೆಂಟ್ರಲ್ ಎಸಿ ಅಳವಡಿಸಲು ಸಾಧ್ಯವಿಲ್ಲ. ಸೆಂಟ್ರಲ್ ಎಸಿ ದೊಡ್ಡ ದೊಡ್ಡ ಆಫೀಸ್ಗಳಲ್ಲಿ ಮಾತ್ರ ಸೂಕ್ತವಾಗಿದೆ.