ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಕಿಯಾ ಕಾರು: ಮೈಲೇಜ್ ಬರೋಬ್ಬರಿ 450 ಕಿ.ಮೀ
News18 Kannada | April 10, 2020, 6:28 PM IST
1/ 11
ದಕ್ಷಿಣ ಕೊರಿಯಾದ ವಾಹನ ನಿರ್ಮಾಣ ಕಂಪೆನಿ ಕಿಯಾ ಮೋಟಾರ್ಸ್ನ ಎಲೆಕ್ಟ್ರಿಕ್ ಎಸ್ಯುವಿ ಕಿಯಾ ಸೋಲ್ ಇವಿ ( Kia Soul EV) 15 ನೇ ವಿಶ್ವ ಕಾರು ಪ್ರಶಸ್ತಿಗಳಲ್ಲಿ ವರ್ಷದ ಅರ್ಬನ್ ಕಾರ್ ಎಂಬ ಅವಾರ್ಡ್ ತನ್ನದಾಗಿಸಿಕೊಂಡಿದೆ.
2/ 11
ಕಳೆದ ವರ್ಷ ಲಾಸ್ ಏಂಜಲೀಸ್ನಲ್ಲಿ ನಡೆದ ಮೋಟಾರ್ ಶೋನಲ್ಲಿ Kia Soul EV ಅನ್ನು ಪರಿಚಯಿಸಲಾಗಿತ್ತು. ಇದೀಗ ಈ ಎಲೆಕ್ಟ್ರಿಕ್ ವಾಹನಕ್ಕೆ ವರ್ಷದ ಅತ್ಯುತ್ತಮ ಅರ್ಬನ್ ಕಾರ್ ಪ್ರಶಸ್ತಿ ಒಲಿದು ಬಂದಿದೆ. ಆದರೆ ಕೊರೋನಾ ಕಾರಣದಿಂದ ಈ ಆವಾರ್ಡ್ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.
3/ 11
ಎಸ್ಯುವಿ ಕಿಯಾ ಸೋಲ್ ಇವಿ ( Kia Soul EV) ವಿಶೇಷತೆಗಳೇನು?
4/ 11
Kia Soul EV ಅತ್ಯಾಧುನಿಕ ಸುರಕ್ಷತಾ ಫೀಚರ್ಗಳೊಂದಿಗೆ ಬಿಡುಗಡೆಯಾದ ವಾಹನ. ಆಕರ್ಷಕ ವಿನ್ಯಾಸ ಹಾಗೂ ಅತ್ಯುತ್ತಮ ಇಂಟಿರೀಯಲ್ ಡಿಸೈನ್ ಹೊಂದಿರುವ ಈ ಕಾರಿನಲ್ಲಿ ಐದು ಮಂದಿ ಆರಾಮಾಗಿ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆಯಿದೆ.
5/ 11
ಹಾಗೆಯೇ ಇದರಲ್ಲಿ ಫಾರ್ವಡ್ ಕೊಲಿಜನ್ ಅವೈಂಡನ್ಸ್ ಅಸಿಸ್ಟೆಂಟ್ (ಎಫ್ಸಿಎ), ಬ್ಲೈಂಡ್-ಸ್ಪಾಟ್ ಕೊಲೆಜಿನ್ ವಾರ್ನಿಂಗ್ (ಬಿಸಿಡಬ್ಲ್ಯು), ಸ್ಮಾರ್ಟ್ ಕ್ರೂಸ್ ಕಂಟ್ರೋಲ್ (ಎಸ್ಸಿಸಿ), ಲೇನ್ ಕೀಪ್ ಅಸಿಸ್ಟ್ (ಎಲ್ಕೆಎ) ಮತ್ತು ಲೇನ್ ಫಾಲೋ ಅಸಿಸ್ಟ್ (ಎಲ್ಎಫ್ಎ) ನಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇದರಿಂದ ಆ್ಯಕ್ಸಿಡೆಂಟ್ ಸೇರಿದಂತೆ ಇನ್ನಿತರ ಅವಘಡ ಸಂಭವಿಸುವುದನ್ನು ಚಾಲಕರಿಗೆ ಎಚ್ಚರಿಸುತ್ತದೆ.
6/ 11
Kia Soul EV ನ ಮುಂಭಾಗ ತೀಕ್ಷ್ಣವಾದ ರೇಜರ್ ಎಲ್ಇಡಿ ಹೆಡ್ಲೈಟ್ಗಳು, ಲೋವರ್ ಗ್ರಿಲ್, 17 ಇಂಚಿನ ಅಲಾಯ್ ವೀಲ್ಗಳನ್ನು ನೀಡಲಾಗಿದೆ. ಕಿಯಾ ಸೋಲ್ ಇವಿ ಉದ್ದ 4195 ಮಿಮೀ, ಅಗಲ 1800 ಎಂಎಂ, ಎತ್ತರ 1605 ಎಂಎಂ ಮತ್ತು ವೀಲ್ಬೇಸ್ 2600 ಎಂಎಂ ಹೊಂದಿದೆ.
7/ 11
ಇದರಲ್ಲಿ ಬೀಜ್-ಬ್ಲ್ಯಾಕ್ ಡ್ಯುಯಲ್ ಟೋನ್ ಕ್ಯಾಬಿನ್ ಹೊಂದಿದ್ದು, ಇದರ ಡ್ಯಾಶ್ಬೋರ್ಡ್ ಸಮತಟ್ಟಾಗಿದೆ. ಆದರೆ ಇದು ತುಂಬಾ ಉದ್ದವಿಲ್ಲ. ಇದರೊಂದಿಗೆ 10.25-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ವ್ಯವಸ್ಥೆಯನ್ನು ಈ ಕಾರಿನಲ್ಲಿ ನೀಡಲಾಗಿದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಸಪೋರ್ಟ್ ಮಾಡುತ್ತೆ.
8/ 11
ಹರ್ಮನ್ ಕಾರ್ಡನ್ನ 10 ಸ್ಪೀಕರ್ಗಳು , ಲೆದರ್ಫೀಲ್ ಅಪ್ಹೋಲ್ಸ್ಟರಿ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಇಟೆಡ್ ಸಿಸ್ಟಂ ವ್ಯವಸ್ಥೆಯೊಂದಿಗೆ ಇಕೋ, ಇಕೋ ಪ್ಲಸ್, ಕಂಫರ್ಟ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್ಗಳನ್ನು ಇದರಲ್ಲಿ ನೀಡಲಾಗಿದೆ.
9/ 11
ಇನ್ನು ಈ ವಾಹನದಲ್ಲಿ 64 ಕಿ.ವ್ಯಾ ಲಿಥಿಯಂ ಅಯಾನ್ ಪಾಲಿಮರ್ ಬ್ಯಾಟರಿಯನ್ನು ನೀಡಲಾಗಿದ್ದು, ಇದನ್ನು ಚಾರ್ಜ್ ಮಾಡಲು ಕಿಯಾ ಸೋಲ್ ಇವಿ ಎಸಿ ಚಾರ್ಜರ್ ವ್ಯವಸ್ಥೆ ಇದೆ. ಈ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು ತೆಗೆದುಕೊಳ್ಳುವ ಸಮಯ ಒಂದು ಗಂಟೆ ಮಾತ್ರ. ಹಾಗೆಯೇ ಮನೆಯ 3 ಪಿನ್ ಪ್ಲಗ್ ಮೂಲಕ 7 ರಿಂದ 9 ಗಂಟೆಯೊಳಗೆ ಪೂರ್ತಿ ಚಾರ್ಜ್ ಮಾಡಿಕೊಳ್ಳಬಹುದು.
10/ 11
ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿಕೊಂಡರೆ Kia Soul EV ಕಾರಿನಲ್ಲಿ 280 ಮೈಲಿ ಕ್ರಮಿಸಬಲ್ಲದು. ಅಂದರೆ 450 ಕಿ.ಮೀ ಮೈಲೇಜ್ ನೀಡಲಿದೆ.
11/ 11
ಸದ್ಯ ಈ ಕಾರು ದಕ್ಷಿಣ ಕೊರಿಯಾ ಮಾರುಕಟ್ಟೆಗೆ ಮಾತ್ರ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಭಾರತದ ರಸ್ತೆಗೆ ಇಳಿಯಲಿದೆ ಎಂದು ಹೇಳಲಾಗಿದೆ. ಅಲ್ಲದೆ ಕಿಯಾ ಎಕ್ಸ್ ಶೋರೂಮ್ನಲ್ಲಿ Kia Soul EV ಕಾರಿನ ಬೆಲೆ 10 ಲಕ್ಷದಿಂದ ಪ್ರಾರಂಭವಾಗಲಿದೆ.