ದಕ್ಷಿಣ ಕೊರಿಯಾದ ಖ್ಯಾತ ಮೋಟಾರ್ ವಾಹನ ಕಂಪೆನಿ ಕಿಯಾ ಭಾರತದಲ್ಲಿ ತನ್ನ ಮೊದಲ ಕಾರನ್ನು ಬಿಡುಗಡೆಗೊಳಿಸಿದೆ. ಸೆಲ್ಟೋಸ್ ಹೆಸರಿನ SUV ಕಾರನ್ನು ಕೆಲ ತಿಂಗಳ ಹಿಂದೆ ಅನಾವರಣಗೊಳಿಸಲಾಗಿತ್ತು. ಇದೀಗ ಅಧಿಕೃತವಾಗಿ ನೂತನ ಕಾರನ್ನು ಬಿಡುಗಡೆ ಮಾಡಿರುವ ಕಿಯಾ, ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲಿದೆ. ದೇಶಿ ರಸ್ತೆಗೆ ಇಳಿಯಲಿರುವ ಈ ಹೊಸ ಕಾರಿನ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿವೆ.
ಫೀಚರ್ಸ್: ಈ ಕಾರು ಅನೇಕ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. AI ವಾಯ್ಸ್ ಕಮಾಂಡ್, ಸ್ಟೋಲನ್ ವೆಹಿಕಲ್ ಟ್ರ್ಯಾಕಿಂಗ್ ಮತ್ತು ಇಮೊಬಿಲೈಸೇಶನ್, ಆಟೋ ಕ್ಲೋಸ್ ನೋಟಿಫಿಕೇಶನ್, SOS-ತುರ್ತು ಸಹಾಯ, ರಿಮೋಟ್ ಎಂಜಿನ್ ಸ್ಟಾರ್ಟ್ ಮತ್ತು ಸ್ಟಾಪ್, ರಿಮೋಟ್ ಆಪರೇಟೆಡ್ ಏರ್ ಪ್ಯೂರಿಫೈಯರ್ ಮತ್ತು ಇನ್-ಕಾರ್ ಕ್ವಾಲಿಟಿ ಮಾನಿಟರ್, ಸೇಫ್ಟಿ ಅಲರ್ಟ್ ಸೇರಿದಂತೆ ಅನೇಕ ಸೂಪರ್ ಸೌಲಭ್ಯಗಳನ್ನು ಈ ಕಾರಿನಲ್ಲಿ ಒದಗಿಸಲಾಗಿದೆ. ಇದರೊಂದಿಗೆ UVO ಅಪ್ಲಿಕೇಶನ್ ಕೂಡ ನೀಡಲಾಗಿದ್ದು, ಈ ಮೂಲಕ ನೀವು ಕಾರಿನ ಸ್ಥಳವನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಹಾಗೆಯೇ ರಿಮೋಟ್ ಮೂಲಕ ನಿಮ್ಮ ಕಿಯಾ ಸೆಲ್ಟೋಸ್‌ನ ವೇಗ ಮಿತಿಯನ್ನು ಸಹ ನಿಗದಿಪಡಿಸಬಹುದು. ಈ ಕಾರಿನಲ್ಲಿ 8 ಇಂಚಿನ ಹೆಡ್-ಅಪ್ ಡಿಸ್ಪ್ಲೇ, 360 ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್, ಪುಶ್ ಬಟನ್ ಮತ್ತು ವೈಫೈನಂತಹ ಸುಧಾರಿತ ಫೀಚರ್ಗಳನ್ನು ನೀಡಲಾಗಿದೆ.
ಸುರಕ್ಷತೆ: ಕಿಯಾ ಸೆಲ್ಟೋಸ್‌ನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ಕಾರಣದಿಂದಾಗಿ ಕ್ಯಾಬಿನ್‌ನಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಒದಗಿಸಲಾಗಿದೆ. ಅಲ್ಲದೆ, ಕಾರಿನಲ್ಲಿ ನೀವು ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್ (ABS), ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ, ಬ್ರೇಕ್ ಅಸಿಸ್ಟ್ ಸಿಸ್ಟಮ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಜೊತೆಗೆ ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಸೆನ್ಸಿಂಗ್ ವೈಪರ್‌ಗಳು ಮತ್ತು ಆಟೋ ಹೆಡ್‌ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳಳನ್ನು ಸೆಲ್ಟೋಸ್‌ನಲ್ಲಿ ನೀಡಲಾಗಿದೆ.
ಎಂಜಿನ್: ಸೆಲ್ಟೋಸ್ನ್ನು ಮೂರು ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ. 1.4-ಲೀಟರ್ ಟರ್ಬೊ ಪೆಟ್ರೋಲ್ ಇಂಜಿನ್, 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಇಂಜಿನ್ ವಾಹನಗಳ ಆಯ್ಕೆ ನೀಡಲಾಗಿದೆ. ಈ ಎಲ್ಲಾ ಇಂಜಿನ್‌ಗಳು BS-VI ಎಮಿಷನ್ ಸ್ಟ್ಯಾಂಡರ್ಡ್ ಕಂಪ್ಲೈಂಟ್ ಹೊಂದಿರಲಿದೆ. ಹಾಗೆಯೇ ಇದರಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮೂರು ಸ್ವಯಂಚಾಲಿತ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ. 7-ಸ್ಪೀಡ್ ಡಿಸಿಟಿ, ಐವಿಟಿಯೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಪಡೆಯುತ್ತೀರಿ.
ಇತರೆ ಕಂಪೆನಿಗಳೊಂದಿಗೆ ಪೈಪೋಟಿ: ಭಾರತದ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್, ಹ್ಯುಂಡೈ ಕ್ರೆಟಾ, ಜೀಪ್ ಕಂಪಾಸ್, ನಿಸ್ಸಾನ್ ಕಿಕ್ಸ್‌ನಂತಹ ವಾಹನಗಳು ಈಗಾಗಲೇ ರಸ್ತೆಗಳಿದಿದ್ದು, ಆದರೆ ಕಿಯಾ ಸ್ಟೆಲೋಸ್ ನೀಡಿರುವ ಹಲವು ವೈಶಿಷ್ಠ್ಯಗಳು ಈ ಕಾರುಗಳಿಲ್ಲ ಎಂಬುದು ವಿಶೇಷ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತದಲ್ಲಿರುವ ಎಸ್ಯುವಿ ಕಾರುಗಳಿಗೆ ಕಿಯಾ ಭಾರೀ ಪೈಪೋಟಿ ನೀಡುವ ಸಾಧ್ಯತೆಯಿದೆ.