Jio Best Plans: ಜಿಯೋ ಟೆಲಿಕಾಂನ 4 ಬೆಸ್ಟ್ ರೀಚಾರ್ಜ್ ಪ್ಲ್ಯಾನ್ಗಳಿವು!
ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿರುವ ಜಿಯೋ ಕಂಪೆನಿ ತನ್ನ ಗ್ರಾಹಕರಿಗಾಗಿ ವಿಶೇಷ ರೀಚಾರ್ಜ್ ಪ್ಲ್ಯಾನ್ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಪ್ರಯತ್ನವನ್ನು ಮಾಡುತ್ತಿರುತ್ತದೆ. ಇದೀಗ 200 ರೂಪಾಯಿ ಒಳಗಿನ 4 ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದ್ದು, ಜಿಯೋನ ಬೆಸ್ಟ್ ರೀಚಾರ್ಜ್ ಪ್ಲ್ಯಾನ್ಗಳು ಇದಾಗಿದೆ.
ಟೆಲಿಕಾಂ ಕಂಪೆನಿಗಳಲ್ಲಿ ಜಿಯೋ ಅಗ್ರಸ್ಥಾನದಲ್ಲಿದೆ. ಈ ಕಂಪೆನಿ ಗ್ರಾಹಕರಿ ಅಗ್ಗದ ರೀಚಾರ್ಜ್ ಪ್ಲ್ಯಾನ್ ಪರಿಚಯಿಸುವ ಮೂಲಕ ತನ್ನ ಗ್ರಾಹಕರನ್ಗನು ಆಕರ್ಷಿಸುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತದೆ.
2/ 8
ಜಿಯೋ ರೂ.119 ಪ್ಲಾನ್: ಕಡಿಮೆ ವೆಚ್ಚದ ಯೋಜನೆಯನ್ನು ಹುಡುಕುತ್ತಿರುವ ಜಿಯೋ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯ ಮಾನ್ಯತೆ 14 ದಿನಗಳು. ಇದು ಅನಿಯಮಿತ ಕಾಲ್ ಪ್ರಯೋಜನವನ್ನು ತನ್ನ ಗ್ರಾಹಕರಿಗೆ ಒದಗಿಸುತ್ತದೆ.
3/ 8
ಈ ಯೋಜನೆಯಲ್ಲಿ ಗ್ರಾಹಕರು 14 ದಿನಗಳವರೆಗೆ 1.5 GB ದೈನಂದಿನ ಡೇಟಾವನ್ನು ಪಡೆಯುತ್ತಾರೆ. ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್, ಜಿಯೋ ಸಿನಿಮಾದಂತಹ ಇತರ ಜಿಯೋ ಅಪ್ಲಿಕೇಶನ್ಗಳಿಗೆ ಉಚಿತ ಚಂದಾದಾರಿಕೆ ಸೌಲಭ್ಯವನ್ನೂ ಪಡೆಯುತ್ತಾರೆ.
4/ 8
ಜಿಯೋ ರೂ.149 ಯೋಜನೆ: ಹಿಂದಿನ ಯೋಜನೆಗೆ ಹೋಲಿಸಿದರೆ ಈ ಯೋಜನೆಯ ಮಾನ್ಯತೆ ಸ್ವಲ್ಪ ಹೆಚ್ಚಾಗಿದೆ. ಆದರೆ ಇದರಲ್ಲಿ ದೈನಂದಿನ ಡೇಟಾ ಸೌಲಭ್ಯ ಕಡಿಮೆ. ಸಂಪೂರ್ಣ ವಿವರಗಳಿಗೆ ಹೋಗುವುದಾದರೆ, ಈ ಯೋಜನೆಯು 20 ದಿನಗಳ ಮಾನ್ಯತೆಯೊಂದಿಗೆ ಲಭ್ಯವಿದೆ. ಈ ಯೋಜನೆಯನ್ನು ಆಯ್ಕೆ ಮಾಡುವ ಬಳಕೆದಾರರು ದಿನಕ್ಕೆ 1GB ಡೇಟಾವನ್ನು ಪಡೆಯುತ್ತಾರೆ.
5/ 8
ಜೊತೆಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಇದೆ. ಪ್ರತಿದಿನ 100 SMS ಅನ್ನು ಉಚಿತವಾಗಿ ಮಾಡಬಹುದಾಗಿದೆ. ಇದಲ್ಲದೆ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್, ಜಿಯೋ ಸಿನಿಮಾದಂತಹ ಇತರ ಜಿಯೋ ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆ ಸಹ ಲಭ್ಯವಿದೆ.
6/ 8
ಜಿಯೋ ರೂ.155 ಪ್ಲಾನ್: ಹೆಚ್ಚು ಡೇಟಾ ಬಳಸದವರಿಗೆ ಈ ಪ್ಲಾನ್ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು. ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಲಭ್ಯವಿದೆ. ಇದರಲ್ಲಿ ಬಳಕೆದಾರರು ಅನ್ಲಿಮಿಟೆಡ್ ವಾಯ್ಸ್ ಕಾಲ್ ಮಾಡುವ ಪ್ರಯೋಜನವನ್ನು ಸಹ ಪಡೆಯುತ್ತಾರೆ. ಜೊತೆಗೆ 2 GB ಡೇಟಾ ಸಹ ಲಭ್ಯವಿದೆ.
7/ 8
ಜಿಯೋ ರೂ.179 ಯೋಜನೆ: ರಿಲಯನ್ಸ್ ಜಿಯೋದ ರೂ. 179 ಯೋಜನೆಯು 24 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ. ಇದು 1ಜಿಬಿ ದೈನಂದಿನ ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಮತ್ತು ದಿನಕ್ಕೆ 100 SMS ನೊಂದಿಗೆ ಬರುತ್ತದೆ.
8/ 8
ಈ ಯೋಜನೆಯಲ್ಲಿ.. ಹೆಚ್ಚುವರಿ ಪ್ರಯೋಜನವಾಗಿ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಮತ್ತು ಜಿಯೋ ಸಿನಿಮಾದಂತಹ ಇತರ ಜಿಯೋ ಅಪ್ಲಿಕೇಶನ್ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ.