Jio Plans Under 200: 200 ರೂಪಾಯಿ ಒಳಗಿನ ಜಿಯೋನ ಬೆಸ್ಟ್ 4 ರೀಚಾರ್ಜ್ ಪ್ಲಾನ್ಸ್ಗಳು! ಇಲ್ಲಿದೆ ಕಂಪ್ಲೀಟ್ ಮಾಹಿತಿ
ಭಾರತದ ನಂಬರ್ 1 ಟೆಲಿಕಾಂ ಕಂಪನಿಯೆಂದು ಜನಪ್ರಿತೆ ಪಡೆದಿರುವ ರಿಲಯನ್ಸ್ ಜಿಯೋ. ತನ್ನ ಅಗ್ಗದ ರೀಚಾರ್ಜ್ ಪ್ಲಾನ್ ಮೂಲಕವೇ ಸಾಕಷ್ಟು ಗ್ರಾಹಕರನ್ನು ಹೊಂದಿದೆ. ಜಿಯೋದಲ್ಲಿ ಬಿಡುಗಡೆಯಾದಂತಹ ಪ್ಲಾನ್ಗಳಲ್ಲಿ 200 ರೂಪಾಯಿ ಒಳಗಿನ ರೀಚಾರ್ಜ್ನಲ್ಲಿ ಬೆಸ್ಟ್ 4 ಯೋಜನೆಗಳ ಮಾಹಿತಿ ಇಲ್ಲಿದೆ.
ಭಾರತದ ನಂಬರ್ 1 ಟೆಲಿಕಾಂ ಕಂಪನಿಯೆಂದು ಜನಪ್ರಿತೆ ಪಡೆದಿರುವ ರಿಲಯನ್ಸ್ ಜಿಯೋ. ತನ್ನ ಅಗ್ಗದ ರೀಚಾರ್ಜ್ ಪ್ಲಾನ್ ಮೂಲಕವೇ ಸಾಕಷ್ಟು ಗ್ರಾಹಕರನ್ನು ಹೊಂದಿದೆ. ಜಿಯೋದಲ್ಲಿ ಬಿಡುಗಡೆಯಾದಂತಹ ಪ್ಲಾನ್ಗಳಲ್ಲಿ 200 ರೂಪಾಯಿ ಒಳಗಿನ ರೀಚಾರ್ಜ್ನಲ್ಲಿ ಬೆಸ್ಟ್ 4 ಯೋಜನೆಗಳ ಮಾಹಿತಿ ಇಲ್ಲಿದೆ.
2/ 8
ಜಿಯೋ ರೂ.119 ಪ್ಲಾನ್: ಕಡಿಮೆ ವೆಚ್ಚದ ಯೋಜನೆಯನ್ನು ಹುಡುಕುತ್ತಿರುವ ಜಿಯೋ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯು 14 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಇದು ಅನ್ಲಿಮಿಟೆಡ್ ಉಚಿತವಾಗಿ ಕಾಲ್ ಮಾಡುವಂತಹ ಅವಕಾಶವನ್ನು ಒದಗಿಸುತ್ತದೆ.
3/ 8
ಈ ಯೋಜನೆಯಲ್ಲಿ ಗ್ರಾಹಕರು 14 ದಿನಗಳವರೆಗೆ 1.5 GB ದೈನಂದಿನ ಡೇಟಾವನ್ನು ಪಡೆಯುತ್ತಾರೆ. ಜೊತೆಗೆ ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್, ಜಿಯೋ ಸಿನೆಮಾದಂತಹ ಇತರ ಜಿಯೋ ಅಪ್ಲಿಕೇಶನ್ಗಳಿಗೆ ಉಚಿತ ಚಂದಾದಾರಿಕೆ ಕೂಡ ಪಡೆಯಬಹುದು.
4/ 8
ಜಿಯೋ ರೂ.149 ಯೋಜನೆ: ಹಿಂದಿನ ಯೋಜನೆಗೆ ಹೋಲಿಸಿದರೆ ಈ ಯೋಜನೆಯ ವ್ಯಾಲಿಡಿಟಿ ಸ್ವಲ್ಪ ಹೆಚ್ಚು ದಿನಗಳವರೆಗೆ ಇರುತ್ತದೆ. ಆದರೆ ದೈನಂದಿನ ಡೇಟಾ ಸೌಲಭ್ಯ ಮಾತ್ರ ಕಡಿಮೆ. ಸಂಪೂರ್ಣ ವಿವರಗಳ ಬಗ್ಗೆ ನೋಡುವುದಾದರೆ ಈ ಯೋಜನೆಯು 20 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆಯನ್ನು ಬಳಸಿದರೆ ಬಳಕೆದಾರರು ದಿನಕ್ಕೆ 1ಜಿಬಿ ಡೇಟಾವನ್ನು ಪ್ರತೀದಿನ ಪಡೆಯುತ್ತಾರೆ.
5/ 8
ಜೊತೆಗೆ ಅನ್ಲಿಮಿಟೆಡ್ ಕಾಲ್ ಸೌಲಭ್ಯವೂ ಇದೆ. ಪ್ರತಿದಿನ 100 ಎಸ್ಎಮ್ಎಸ್ ಮಾಡಬಹುದು. ಇದಲ್ಲದೆ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್, ಜಿಯೋ ಸಿನಿಮಾದಂತಹ ಇತರ ಜಿಯೋ ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆ ಸಹ ಲಭ್ಯವಿದೆ.
6/ 8
ಜಿಯೋ ರೂ.155 ಪ್ಲಾನ್: ಹೆಚ್ಚು ಡೇಟಾ ಬಳಸದವರಿಗೆ ಈ ಪ್ಲಾನ್ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರಲಿದೆ. ಇದರಲ್ಲಿ ಬಳಕೆದಾರರು ಅನ್ಲಿಮಿಟೆಡ್ ಉಚಿತವಾಗಿ ಕಾಲ್ ಮಾಡುವ ಪ್ರಯೋಜನವನ್ನು ಸಹ ಪಡೆಯುತ್ತಾರೆ. ಒಟ್ಟಾಗಿ 2ಜಿಬಿ ಡೇಟಾವನ್ನು ಕೂಡ ಪಡೆಯಬಹುದು.
7/ 8
ಜಿಯೋ ರೂ.179 ಯೋಜನೆ: ರಿಲಯನ್ಸ್ ಜಿಯೋದ ರೂ. 179 ಯೋಜನೆಯಲ್ಲಿ ಬಳಕೆದಾರರು 24 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ. ಇನ್ನು ಈ ಯೋಜನೆಯಲ್ಲಿ 1ಜಿಬಿ ದೈನಂದಿನ ಡೇಟಾ, ಅನ್ಮಲಿಮಿಟೆಡ್ ಕಾಲ್ ಮತ್ತು ದಿನಕ್ಕೆ 100 ಎಸ್ಎಮ್ಎಸ್ ಅನ್ನು ಕೂಡ ಮಾಡಬಹುದು.
8/ 8
ಈ ಯೋಜನೆಯಲ್ಲಿ ಹೆಚ್ಚುವರಿ ಪ್ರಯೋಜನವಾಗಿ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಮತ್ತು ಜಿಯೋ ಸಿನೆಮಾದಂತಹ ಇತರ ಜಿಯೋ ಅಪ್ಲಿಕೇಶನ್ಗಳಿಗೆ ಉಚಿತ ಚಂದಾದಾರಿಕೆ ಕೂಡ ಪಡೆಯಬಹುದು.