ಇತ್ತೀಚೆಗೆ ರಿಲಯನ್ಸ್ ಜಿಯೋ ಪ್ಲಾನ್ಗಳ ಬೆಲೆಯನ್ನು ಹೆಚ್ಚಿಸುವ ಮೂಲಕ ಬಳಕೆದಾರಿಗೆ ಶಾಕ್ ನೀಡಿತ್ತು. ಆದರೆ ಅದರ ಜೊತೆಗೆ ಕೆಲವು ಕೊಡುಗೆಗಳನ್ನು ನೀಡುವ ಮೂಲಕ ಗ್ರಾಹಕರ ಹೊರೆಯನ್ನು ಕಡಿಮೆ ಮಾಡಿತ್ತು. ಇದೀಗ ಜಿಯೋ ಫೋನ್ ಬಳಕೆದಾರರನ್ನು ಮೆಚ್ಚಿಸುವ ಸಲುವಾಗಿ ಕೆಲವು ಯೋಜನೆಗಳನ್ನು ಪರಿಚಯಿಸಿದ್ದು, ಕಡಿಮೆ ಬೆಲೆಗೆ ಹಲವು ಪ್ರಯೋಜನಗಳನ್ನು ಒದಗಿಸಿದೆ.
2/ 4
ಜಿಯೋ 152 ರೂ ಪ್ಲಾನ್: ಈ ಯೋಜನೆ ಅಳವಡಿಸಿಕೊಂಡ ಜಿಯೋ ಫೋನ್ ಬಳಕೆದಾರರಿಗೆ ದಿನಕ್ಕೆ 0.5ಜಿಬಿ ಡೇಟಾ, ಹೊರತಾಗಿ ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಜೊತೆಗೆ 300 ಎಸ್ಎಮ್ಎಸ್ ಉಚಿತವಾಗಿ ಸಿಗಲಿದೆ. ಈ ಪ್ಲಾನ್ 28 ದಿನಗಳ ಮಾನ್ಯತೆ ಪಡೆದಿದೆ. ಹೆಚ್ಚುವರಿಯಾಗಿ ಜಿಯೋ ಅಪ್ಲಿಕೇಶನ್ ಪ್ರವೇಶ ಪಡೆಯಬಹುದಾಗಿದೆ.
3/ 4
ಜಿಯೋ 186 ರೂ ಪ್ಲಾನ್: ಈ ಪ್ಲಾನ್ ಮೂಲಕ ದಿನಕ್ಕೆ1ಜಿಬಿ ಡೇಟಾದ ಜೊತೆಗೆ, ಅನಿಯಮಿತ ಕರೆ ಸೌಲಭ್ಯ, ದಿನಕ್ಕೆ 100 ಎಸ್ಎಮ್ಎಸ್ ಲಭ್ಯವಿದೆ. ಜೊತೆಗೆ ಈ ಯೋಜನೆ ಮೂಲಕ ಜಿಯೋ ಅಪ್ಲಿಕೇಶನ್ ಪ್ರವೇಶವನ್ನು ಪಡೆಯಬಹುದಾಗಿದೆ. ಅಂದಹಾಗೆಯೇ ಈ ಯೋಜನೆ 28 ದಿನಗಳ ಮಾನ್ಯತೆ ಹೊಂದಿದೆ.
4/ 4
ಜಿಯೋ 75 ರೂ ಪ್ಲಾನ್: ಬಳಕೆದಾರರಿಗೆ 200ಎಂಬಿ ರೂಪದಲ್ಲಿ ದಿನಕ್ಕೆ ಡೇಟಾ ಸಿಗಲಿದೆ. 23 ದಿನಗಳ ಸಿಂಧುತ್ವ ಹೊಂದಿರುವ ಪ್ಲಾನ್ ಅಳವಡಿಸಿಕೊಂಡರೆ ಅನಿಯಮಿತ ಕರೆ ಮತ್ತು 50 ಎಸ್ಎಮ್ಎಸ್ ಉಚಿತವಾಗಿ ಸಿಗಲಿದೆ.