Jio Offers: ಗ್ರಾಹಕರಿಗಾಗಿ ವಾರ್ಷಿಕ ಪ್ಲಾನ್ ಬಿಡುಗಡೆ ಮಾಡಿದ ಜಿಯೋ; ಪ್ರತಿ ದಿನ 2GB ಡೇಟಾ ಉಚಿತ
Reliance JIo Offers: ರಿಲಾಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ವಾರ್ಷಿಕ ಪ್ಲಾನ್ವೊಂದನ್ನು ಬಿಡುಗಡೆ ಮಾಡಿದೆ. ಗ್ರಾಹಕರು ಈ ಪ್ಲಾನ್ ಮೂಲಕ ಪ್ರತಿದಿನ 2ಜಿಬಿ ಡೇಟಾ ಬಳಸಬಹುದಾಗಿದೆ. ಸದ್ಯ ಲಾಕ್ಡೌನ್ ಅವಧಿಯಲ್ಲಿ ಮನೆಯಲ್ಲಿ ಕುಳಿತು ‘ವರ್ಕ್ ಫ್ರಂ ಹೋಮ್‘ ಮಾಡುತ್ತಿರುವ ನೌಕಕರಿಗೆ ಈ ಪ್ಲಾನ್ ಹೆಚ್ಚು ಸಹಾಯಕವಾಗಲಿದೆ.
ರಿಲಾಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ವಾರ್ಷಿಕ ಪ್ಲಾನ್ವೊಂದನ್ನು ಬಿಡುಗಡೆ ಮಾಡಿದೆ. ಗ್ರಾಹಕರು ಈ ಪ್ಲಾನ್ ಮೂಲಕ ಪ್ರತಿದಿನ 2GB ಡೇಟಾ ಬಳಸಬಹುದಾಗಿದೆ. ಸದ್ಯ ಲಾಕ್ಡೌನ್ ಅವಧಿಯಲ್ಲಿ ಮನೆಯಲ್ಲಿ ಕುಳಿತು ‘ವರ್ಕ್ ಫ್ರಂ ಹೋಮ್‘ ಮಾಡುತ್ತಿರುವ ನೌಕಕರಿಗೆ ಈ ಪ್ಲಾನ್ ಹೆಚ್ಚು ಸಹಾಯಕವಾಗಲಿದೆ.
2/ 6
ರಿಲಾಯನ್ಸ್ ಪರಿಚಯಿಸಿರುವ ಆ್ಯನುವಲ್ ಪ್ಲಾನ್ ಬೆಲೆ 2399 ರೂಪಾಯಿಯಾಗಿದೆ. ಅಂದರೆ ಗ್ರಾಹಕರು ತಿಂಗಳಿಗೆ 200 ರೂಪಾಯಿ ನೀಡಿ 2GB ಡೇಟಾ ಪಡೆದುಕೊಳ್ಳುವ ಬದಲು 2399 ರೂಪಾಯಿ ನೀಡುವ ಮೂಲಕ ಈ ಸೇವೆಯನ್ನು ಪಡೆಯಬಹುದಾಗಿದೆ.
3/ 6
ಇದರ ಜೊತೆಗೆ ಅನಿಯಮಿತ ಕರೆ ಸೌಲಭ್ಯ, ಎಸ್ಎಮ್ಎಸ್ ಸೌಲಭ್ಯವನ್ನು ನೀಡಿದೆ. ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
4/ 6
ಏರ್ಟೆಲ್ ಈ ಹಿಂದೆ 2398 ರೂಪಾಯಿ ಆ್ಯನುವಲ್ ಪ್ಲಾನ್ ಅನ್ನು ಪರಿಚಯಿಸಿತ್ತು. ಈ ಪ್ಲಾನ್ ಮೂಲಕ ಗ್ರಾಹಕರು 1.5GB ಡೇಟಾದ ಜೊತೆಗೆ ಅನಿಯಮಿತ ಕರೆ ಸೌಲಭ್ಯ ನೀಡಿದೆ. ಅದಲ್ಲದೆ ಎಫ್ಯುಪಿ ಸೇವೆ ನೀಡಿದೆ. ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿಯನ್ನುಹೊಂದಿದೆ.
5/ 6
ವೊಡಾಫೋನ್ ಟೆಲಿಕಾಂ ಸಂಸ್ಥೆ ಕೂಡ 2399 ರೂಪಾಯಿಯ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್ನಲ್ಲಿ ಪ್ರತಿ ದಿನ 1.5GB ಡೇಟಾ, ಅನಿಯಮಿತ ಕರೆ ಸೌಲಭ್ಯ ನೀಡಿದೆ. ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
6/ 6
ಇನ್ನು ಜಿಯೋ ಪ್ರತಿ ದಿನ 1.5GB ಡೇಟಾ ಒದಗಿಸುವ 2121 ರೂಪಾಯಿಯ ಪ್ಲಾನ್ ಪರಿಚಯಿಸಿದೆ. ಇದರಲ್ಲಿ ಜಿಯೋ ನೆಟ್ವರ್ಕ್ಗಳಿಗೆ ಅನಿಯಮಿತ ಕರೆ ಸೌಲಭ್ಯ ನೀಡಿದೆ. ಜೊತೆಗೆ ಇತರೆ ನೆಟ್ವರ್ಕ್ ಕರೆಯ ಮೇಲೆ 1200 ನಿಮಿತ ಉಚಿತವಾಗಿ ನೀಡುತ್ತಿದೆ. ಈ ಪ್ಲಾನ್ 336 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.