ಲ ದೇಶದ ನಂಬರ್ 1 ಟೆಲಿಕಾಂ ಕಂಪನಿಯಾಗಿರುವ ಜಿಯೋ ತನ್ನ ಬಳಕೆದಾರರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಅದ್ಭುತ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಯೋಜನೆಗಳನ್ನು ನೀಡುತ್ತ ಬಂದಿದೆ. ಇತ್ತೀಚೆಗೆ, ಜಿಯೋ ಹೊಸ ವರ್ಷದ ಪ್ರಯುಕ್ತ ಹೊಸ ಕೊಡುಗೆಯನ್ನು ಪರಿಚಯಿಸಿತ್ತು. ಅದಕ್ಕೆ 'ಹ್ಯಾಪಿ ನ್ಯೂ ಇಯರ್ 2022' ಎಂದು ಹೆಸರಿಸಿಟ್ಟಿತ್ತು. ಆದರೀಗ ಈ ಆಫರ್ನ ಸಮಯ ಮಿತಿಯನ್ನು ಜಿಯೋ ವಿಸ್ತರಿಸಿದೆ,
ಈ ಯೋಜನೆಯ ಮೂಲಕ ಜಿಯೋ ಇಂಟರ್ನೆಟ್ ಜೊತೆಗೆ ಅನೇಕ ಇತರ ಪ್ರಯೋಜನಗಳನ್ನು ನೀಡುತ್ತಿದೆ. ದೈನಂದಿನ ಡೇಟಾದೊಂದಿಗೆ ಯಾವುದೇ ನೆಟ್ವರ್ಕ್ಗೆ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಅನ್ನು ಸಹ ಸಿಗಲಿದೆ. ಅಲ್ಲದೆ, OTT ಪ್ರಯೋಜನಗಳು ಸಿಗಲಿದೆ. ಜಿಯೋ ಕ್ಲೌಡ್, ಜಿಯೋ ಮ್ಯೂಸಿಕ್, ಜಿಯೋ ಟಿವಿ ಮತ್ತು ಜಿಯೋ ಸಿನಿಮಾದಂತಹ ಎಲ್ಲಾ ಜಿಯೋ ಅಪ್ಲಿಕೇಶನ್ಗಳಿಗೆ ಉಚಿತ ಚಂದಾದಾರಿಕೆಯನ್ನು ಸಹ ದೊರೆಯುತ್ತದೆ.
ವಾಸ್ತವವಾಗಿ ಜಿಯೋ ಹೊಸ ಕೊಡುಗೆಯನ್ನು ಬಿಡುಗಡೆ ಮಾಡಿದ್ದು ಇದು ಹಳೆಯ ಪ್ರಿಪೇಯ್ಡ್ ಪ್ಲಾನ್ನ ನವೀಕರಿಸಿದ ಆವೃತ್ತಿಯಾಗಿದೆ. ಈ ಯೋಜನೆಯಲ್ಲಿ, ಹಿಂದಿನ ಬಳಕೆದಾರರು 336 ದಿನಗಳವರೆಗೆ ಧ್ವನಿ ಕರೆ, ಡೇಟಾ, SMS ಮತ್ತು OTT ಪ್ರಯೋಜನಗಳನ್ನು ಪಡೆಯುತ್ತಿದ್ದರು. ಹೊಸ ವರ್ಷದಂದು ನೀಡಲಾದ ಈ 'ಹ್ಯಾಪಿ ನ್ಯೂ ಇಯರ್ 2022' ಆಫರ್ನಲ್ಲಿ, ಈ ಯೋಜನೆಯ ಮಾನ್ಯತೆಯನ್ನು 365 ದಿನಗಳವರೆಗೆ ಹೆಚ್ಚಿಸಲಾಗಿದೆ.