ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಅತ್ಯುತ್ತಮ ಯೋಜನೆಗಳನ್ನು ನೀಡುತ್ತಲೇ ಬಂದಿದೆ. ಇದೀಗ ಕೊರೋನಾ ವೈರಸ್ ಭೀತಿಯಿಂದ ಜನರು ಮನೆಯಿಂದ ಹೊರಗೆ ಬರಲು ಯೋಚಿಸುತ್ತಿದ್ದಾರೆ.
2/ 9
ಹಾಗೆಯೇ ಅನೇಕ ರಿಚಾರ್ಜ್ ಮಳಿಗೆಗಳು ಬಂದ್ ಆಗಿವೆ. ಇನ್ನು ಸುರಕ್ಷತೆಯ ಸಲುವಾಗಿ ಈಗಾಗಲೇ ಮನೆಯಲ್ಲೇ ಉಳಿದುಕೊಳ್ಳುವಂತೆ ಸರ್ಕಾರಗಳು ಆದೇಶಿಸಿದೆ. ಹೀಗಾಗಿ ಜಿಯೋ ಬಳಕೆದಾರರಿಗೆ ಇಂಟರ್ನೆಟ್ ಬಳಕೆಯ ಸಮಸ್ಯೆ ಉಂಟಾಗಬಹುದು.
3/ 9
ಈ ಹಿನ್ನೆಲೆಯಲ್ಲಿ ರಿಲಯನ್ಸ್ ಕಂಪೆನಿಯು ತನ್ನ 4 ಜಿ ಡೇಟಾ ವೋಚರ್ ಪ್ಲ್ಯಾನ್ಗಳಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದೆ. ಕಂಪನಿಯು ಪರಿಷ್ಕರಿಸಿದ ಡಾಟಾ ವೋಚರ್ಗಳಲ್ಲಿ 11 ರೂ., 21 ರೂ., 51 ಮತ್ತು 101 ರೂ. ಪ್ಲ್ಯಾನ್ಗಳನ್ನು ನೀಡಲಾಗಿದೆ.
4/ 9
11 ರೂ. ಬೂಸ್ಟರ್ ಪ್ಯಾಕ್ನಲ್ಲಿ 800 ಎಂಬಿ ಡೇಟಾ ಮತ್ತು 75 ರೂ. ಗಳ ಅನ್ಯ ನೆಟ್ವರ್ಕ್ ಕರೆ ನಿಮಿಷಗಳು ದೊರೆಯಲಿದೆ. ಈ ಹಿಂದೆ ಇದೇ ಯೋಜನೆಯಲ್ಲಿ 400 ಎಂಬಿ ಡೇಟಾ ಮಾತ್ರ ಲಭ್ಯವಿತ್ತು.
5/ 9
ಅಂತೆಯೇ, 21 ರೂ. ವೋಚರ್ ಯೋಜನೆಯಲ್ಲಿ, 1 ಜಿಬಿಗೆ ಬದಲಾಗಿ, ಗ್ರಾಹಕರಿಗೆ 2 ಜಿಬಿ ಡೇಟಾ ಮತ್ತು 200 ನಿಮಿಷಗಳನ್ನು ನೀಡಲಾಗಿದೆ.
6/ 9
51 ರೂಪಾಯಿಗಳ 4 ಜಿ ಡೇಟಾ ವೋಚರ್ ಪ್ಲ್ಯಾನ್ನಲ್ಲಿ 3 ಜಿಬಿ ಡೇಟಾದ ಬದಲು 6 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಜೊತೆಗೆ 500 ಅನ್ಯ ನೆಟ್ವರ್ಕ್ ನಿಮಿಷಗಳು ಲಭ್ಯವಿರುತ್ತವೆ.
7/ 9
51 ರೂಪಾಯಿಗಳ 4 ಜಿ ಡೇಟಾ ವೋಚರ್ ಪ್ಲ್ಯಾನ್ನಲ್ಲಿ 3 ಜಿಬಿ ಡೇಟಾದ ಬದಲು 6 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಜೊತೆಗೆ 500 ಅನ್ಯ ನೆಟ್ವರ್ಕ್ ನಿಮಿಷಗಳು ಲಭ್ಯವಿರುತ್ತವೆ.
8/ 9
ಈ ಎಲ್ಲಾ ಯೋಜನೆಗಳಲ್ಲಿ ಡೇಟಾ ಪೂರ್ಣಗೊಂಡ ಬಳಿಕ, 64 ಕೆಬಿಪಿಎಸ್ ವೇಗದಲ್ಲಿ ಅನಿಯಮಿತ ಡೇಟಾ ಲಭ್ಯವಿರುತ್ತದೆ ಎಂದು ತಿಳಿಸಿದೆ. ಅಂದಹಾಗೆ ಇದರ ವಾಲಿಡಿಟಿ ನಿಮ್ಮ ಪ್ರಸ್ತುತ ವಾಲಿಡಿಟಿಗೆ ಅನುಗುಣವಾಗಿ ಇರಲಿದೆ.
9/ 9
ಈ ಎಲ್ಲಾ ಯೋಜನೆಗಳಲ್ಲಿ ಡೇಟಾ ಪೂರ್ಣಗೊಂಡ ಬಳಿಕ, 64 ಕೆಬಿಪಿಎಸ್ ವೇಗದಲ್ಲಿ ಅನಿಯಮಿತ ಡೇಟಾ ಲಭ್ಯವಿರುತ್ತದೆ ಎಂದು ತಿಳಿಸಿದೆ. ಅಂದಹಾಗೆ ಇದರ ವಾಲಿಡಿಟಿ ನಿಮ್ಮ ಪ್ರಸ್ತುತ ವಾಲಿಡಿಟಿಗೆ ಅನುಗುಣವಾಗಿ ಇರಲಿದೆ.