2,599 ರೂ. ರೀಚಾರ್ಜ್ ಯೋಜನೆ: ರಿಲಯನ್ಸ್ ಜಿಯೋನ 2,599 ರೂ ರೀಚಾರ್ಜ್ ಪ್ಯಾಕ್ನ ಮಾನ್ಯತೆ 365 ದಿನಗಳು. ಈ ಪ್ಲ್ಯಾನ್ನಲ್ಲಿ ಪ್ರತಿದಿನ ಒಟ್ಟು 2 ಜಿಬಿ ಹೈಸ್ಪೀಡ್ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 10 ಜಿಬಿ ಡೇಟಾವನ್ನು ನೀಡಲಿದೆ. ಅಂದರೆ, ಜಿಯೋ ಗ್ರಾಹಕರು ಈ ಪ್ಯಾಕ್ನಲ್ಲಿ ಒಟ್ಟು 740 ಜಿಬಿ ಡೇಟಾವನ್ನು ಪಡೆಯಬಹುದು. ಪ್ರತಿದಿನ ಹೈ-ಸ್ಪೀಡ್ ಡೇಟಾದ ಅವಧಿ ಮುಗಿದ ನಂತರ ವೇಗ 64 ಕೆಬಿಪಿಎಸ್ಗೆ ಕಡಿಮೆಯಾಗಲಿದೆ.
ಇನ್ನು ಜಿಯೋ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ಸೌಲಭ್ಯವಿದ್ದು, ಹಾಗೆಯೇ ಇತರೆ ನೆಟ್ವರ್ಕ್ಗೆ ಕರೆ ಮಾಡಲು 12 ಸಾವಿರ ನಿಮಿಷಗಳು ಉಚಿತವಾಗಿ ದೊರೆಯಲಿದೆ. ಇನ್ನು ಪ್ರತಿದಿನ 100 ಉಚಿತ ಎಸ್ಎಂಎಸ್ ಹಾಗೂ ಜಿಯೋ ಅಪ್ಲಿಕೇಶನ್ಗಳ ಉಚಿತ ಸದಸ್ಯತ್ವವನ್ನು ಪಡೆಯಬಹುದು. ಹಾಗೆಯೇ ಒಂದು ವರ್ಷದವರೆಗೆ ಡಿಸ್ನಿ + ಹಾಟ್ಸ್ಟಾರ್ ವಿಐಪಿಯ ಉಚಿತ ಸದಸ್ಯತ್ವವನ್ನು ಸಹ ಸಿಗಲಿದೆ.
2,399 ರೂ. ರೀಚಾರ್ಜ್ ಯೋಜನೆ: ಇದರ ವಾಲಿಟಿಡಿ ಕೂಡ ಒಂದು ವರ್ಷ. ಈ ಪ್ಯಾಕ್ನಲ್ಲಿ, ಪ್ರತಿದಿನ 2 ಜಿಬಿ ಹೈಸ್ಪೀಡ್ ಡೇಟಾ ಅಂದರೆ ವರ್ಷಕ್ಕೆ 730 ಜಿಬಿ ಡೇಟಾವನ್ನು ನೀಡಲಾಗುತ್ತದೆ. ಪ್ರತಿದಿನ ಹೈ-ಸ್ಪೀಡ್ ಡೇಟಾದ ಅವಧಿ ಮುಗಿದ ನಂತರ ವೇಗ 64 ಕೆಬಿಪಿಎಸ್ಗೆ ಕಡಿಮೆಯಾಗಲಿದೆ. ಜಿಯೋ ಟು ಜಿಯೋ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ಸೌಲಭ್ಯವಿದ್ದು, ಹಾಗೆಯೇ ಇತರೆ ನೆಟ್ವರ್ಕ್ಗೆ ಕರೆ ಮಾಡಲು 12 ಸಾವಿರ ನಿಮಿಷಗಳು ಉಚಿತವಾಗಿ ದೊರೆಯಲಿದೆ. ಇನ್ನು ಪ್ರತಿದಿನ 100 ಉಚಿತ ಎಸ್ಎಂಎಸ್ ಹಾಗೂ ಜಿಯೋ ಅಪ್ಲಿಕೇಶನ್ಗಳ ಉಚಿತ ಸದಸ್ಯತ್ವವನ್ನು ಪಡೆಯಬಹುದು.