ಏರ್ಟೆಲ್ನ 398 ರೂ. ಯೋಜನೆಯಲ್ಲಿ ನಿಮಗೆ ದಿನಕ್ಕೆ 100 ಎಸ್ಎಂಎಸ್ನೊಂದಿಗೆ 3 ಜಿಬಿ ಡೇಟಾ ನೀಡಲಾಗುತ್ತದೆ. ಹಾಗೆಯೇ ಯಾವುದೇ ನೆಟ್ವರ್ಕ್ಗೂ ಅನಿಯಮಿತ ಕರೆ ಮಾಡಬಹುದು. ಇದಲ್ಲದೆ, ಕಂಪನಿಯು ಈ ಯೋಜನೆಯಲ್ಲಿ ಏರ್ಟೆಲ್ ಎಕ್ಸ್ಟ್ರೀಮ್, ವಿಂಕ್ ಮ್ಯೂಸಿಕ್ ಮತ್ತು ಫ್ರೀ ಹಲೊ ಟ್ಯೂನ್ಗೆ ಚಂದಾದಾರಿಕೆಯನ್ನು ನೀಡುತ್ತದೆ. ಈ ರಿಚಾರ್ಜ್ನ ವಾಲಿಡಿಟಿ 28 ದಿನಗಳು.
ಜಿಯೋನ 401 ರೂಪಾಯಿ ಯೋಜನೆಯಲ್ಲಿ, ಪ್ರತಿದಿನ 100 ಎಸ್ಎಂಎಸ್ನೊಂದಿಗೆ 3 ಜಿಬಿ ಡೇಟಾ ಸಿಗಲಿದೆ. ಅದರೊಂದಿಗೆ ಹೆಚ್ಚುವರಿಯಾಗಿ ಉಚಿತ 6 ಜಿಬಿ ಡೇಟಾವನ್ನು ಸಹ ನೀಡುತ್ತಿದೆ. ಹಾಗೆಯೇ ಅನ್ಯ ನೆಟ್ವರ್ಕ್ ಕರೆಗಳಿಗೆ 1,000 ಎಫ್ಯುಪಿ ನಿಮಿಷಗಳನ್ನು ನೀಡಲಾಗುತ್ತದೆ. ಈ ಯೋಜನೆಯೊಂದಿಗೆ ಜಿಯೋನ ಪ್ರೀಮಿಯಂ ಅಪ್ಲಿಕೇಶನ್ಗಳೊಂದಿಗೆ ಒಂದು ವರ್ಷದವರೆಗೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನ ಚಂದಾದಾರಿಕೆಯನ್ನುಉಚಿತವಾಗಿ ನೀಡುತ್ತದೆ. ಈ ಪ್ಲ್ಯಾನ್ನ ವಾಲಿಡಿಟಿ 28 ದಿನಗಳು.
ಏರ್ಟೆಲ್ನ 558 ರೂ. ಯೋಜನೆಯಲ್ಲಿ ಏರ್ಟೆಲ್ ಗ್ರಾಹಕರಿಗೆ ದಿನಕ್ಕೆ 100 ಎಸ್ಎಂಎಸ್ ಹಾಗೂ 3 ಜಿಬಿ ಡೇಟಾ ಸಿಗಲಿದೆ. ಇದರೊಂದಿಗೆ ನೀವು ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ಮಾಡಬಹುದು. ಇದಲ್ಲದೆ, ಕಂಪನಿಯು ಈ ಯೋಜನೆಯಲ್ಲಿ ಏರ್ಟೆಲ್ ಎಕ್ಸ್ಟ್ರೀಮ್, ವಿಂಕ್ ಮ್ಯೂಸಿಕ್ ಮತ್ತು ಫ್ರೀ ಹಲೊ ಟ್ಯೂನ್ಗೆ ಚಂದಾದಾರಿಕೆಯನ್ನು ನೀಡುತ್ತದೆ. ಈ ಪ್ಯಾಕ್ನ ವಾಲಿಡಿಟಿ 56 ದಿನಗಳು.