ಡಿಸೆಂಬರ್ ತಿಂಗಳಲ್ಲಿ ಟೆಲಿಕಾಂ ಕಂಪೆನಿಗಳು ಜಾರಿಗೆ ತಂದಂತಹ ಇಂಟರ್ಕನೆಕ್ಟ್ ಯೂಸರ್ ಚಾರ್ಜ್ (IUC)ಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ದಿನಾಂಕ ನಿಗದಿಪಡಿಸಿದೆ.
2/ 8
ಟ್ರಾಯ್ ಹೊರಡಿಸಿರುವ ಹೊಸ ನಿಯಮದಂತೆ ಒಂದು ವರ್ಷದವರೆಗೆ ಮಾತ್ರ 6 ಪೈಸೆಯಂತೆ ಇಂಟರ್ಕನೆಕ್ಟ್ ಯೂಸರ್ ಚಾರ್ಜ್ (ಐಯುಸಿ) ಯನ್ನು ಮುಂದುವರೆಸಬಹುದು ಎಂದು ಟೆಲಿಕಾಂ ಕಂಪೆನಿಗಳಿಗೆ ತಿಳಿಸಲಾಗಿದೆ.
3/ 8
ಅಂದರೆ 31 ಡಿಸೆಂಬರ್ 2020 ರ ನಂತರ ಯಾವುದೇ ಐಯುಸಿ ಚಾರ್ಜ್ ಇರುವುದಿಲ್ಲ. ಟೆಲಿಕಾಂ ಕಂಪನಿಗಳು 1 ವರ್ಷದವರೆಗೆ ಐಯುಸಿ ಶುಲ್ಕ ವಿಧಿಸಬಹುದು ಎಂದು ಟ್ರಾಯ್ ಹೇಳಿದೆ.
4/ 8
ಭಾರತೀಯ ಟೆಲಿಕಾಂ ಕಂಪೆನಿಗಳು ಈಗಾಗಲೇ ಸಂಪೂರ್ಣ ಉಚಿತ ಕರೆ ಸೌಲಭ್ಯವನ್ನು ಕೊನೆಗೊಳಿಸಿದೆ. ಇದರ ಹೊರತಾಗಿಯು ಕೆಲ ಆಫರ್ಗಳ ಮೂಲಕ ಅನಿಯಮಿತ ಕರೆ ಸೌಲಭ್ಯವನ್ನು ನೀಡುತ್ತಿದೆ.
5/ 8
ಹಾಗೆಯೇ ಹೊಸ ಆದೇಶದಲ್ಲಿ ಕಂಪೆನಿಯು ಗ್ರಾಹಕರಿಂದ ಪ್ರತ್ಯೇಕವಾಗಿ ಇಂಟರ್ ಕನೆಕ್ಟ್ ಯೂಸರ್ ಚಾರ್ಜ್ಗಳನ್ನು (ಐಯುಸಿ) ವಿಧಿಸುವಂತಿಲ್ಲ. ಇದನ್ನು ರಿಚಾರ್ಜ್ ಪ್ಲ್ಯಾನ್ನಲ್ಲಿಯೇ ಸೇರಿಸುವಂತೆ ತಿಳಿಸಲಾಗಿದೆ. ಇದರಿಂದ ಇದು ಗ್ರಾಹಕರ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಟ್ರಾಯ್ ಅಭಿಪ್ರಾಯ ಪಟ್ಟಿದೆ.
6/ 8
ಏನಿದು ಐಯುಸಿ?: ಐಯುಸಿ ಎಂದರೆ ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್. ಬೇರೆ ನೆಟ್ವರ್ಕ್ಗೆ ಮಾಡುವ ಕರೆಗೆ ವಿಧಿಸಲಾಗುವ ದರ ಇದಾಗಿದೆ. ಅಂದರೆ, ಜಿಯೋ ನೆಟ್ವರ್ಕ್ನಿಂದ ಏರ್ಟೆಲ್ನಂತಹ ಬೇರೆ ನೆಟ್ವರ್ಕ್ಗೆ ಗ್ರಾಹಕರು ಕರೆ ಮಾಡಿದಾಗ, ಆ ನೆಟ್ವರ್ಕ್ಗೆ ಜಿಯೋ ಸಂಸ್ಥೆ ಇಂತಿಷ್ಟು ದರ ಪಾವತಿಸಬೇಕಾಗುತ್ತದೆ.
7/ 8
ಇದೇ ಮಾದರಿಯಲ್ಲಿ ಇತರೆ ಕಂಪೆನಿಗಳು ಅನ್ಯ ನೆಟ್ವರ್ಕ್ ಕರೆಗಳ ಮೇಲೆ 0.6 ಪೈಸೆ ದರ ವಿಧಿಸುತ್ತಿದೆ. ಈ ದರವೇ ಐಯುಸಿ ಆಗಿದೆ. ಟ್ರಾಯ್ ಸಂಸ್ಥೆಯೇ ಈ ಐಯುಸಿ ದರವನ್ನು ನಿಗದಿ ಮಾಡಿದೆ. 2017ಕ್ಕಿಂತ ಮುಂಚೆ 14 ಪೈಸೆ ಇದ್ದ ಐಯುಸಿ ದರವನ್ನು ಜಿಯೋ 6 ಪೈಸೆಗೆ ಇಳಿಕೆ ಮಾಡಿದೆ.
8/ 8
ಇದೀಗ ಐಯುಸಿ ಚಾರ್ಜ್ ಅನ್ನು ಕೇವಲ ಒಂದು ವರ್ಷದವರೆಗೆ ಮಾತ್ರ ವಿಧಿಸಬಹುದು ಎಂದು ಟ್ರಾಯ್ ಟೆಲಿಕಾಂ ಕಂಪೆನಿಗಳಿಗೆ ಸೂಚಿಸಿದೆ.