ಐಟೆಲ್ ಕಂಪೆನಿ ‘ವಿಷನ್ 1‘ ಹೆಸರಿನ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್ಫೋನ್ 15.46 ಸೆ.ಮೀ (6.088 ಇಂಚಿನ) ಹೆಚ್ಡಿ +ಐಪಿಎಸ್ ವಾಟರ್ಡ್ರಾಪ್ ಡಿಸ್ಪ್ಲೆ ಹೊಂದಿದ್ದು. ದೀರ್ಘಕಾಲದ ಬಳಕೆಗಾಗಿ 4000ಎಮ್ಎಎಚ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಗ್ರಾಹಕರಿಗಾಗಿ ‘ವಿಷನ್ 1‘ ಸ್ಮಾರ್ಟ್ಫೋನ್ 2ಜಿಬಿ ರ್ಯಾಮ್ ಮತ್ತು 32ಜಿಬಿ ಸ್ಟೊರೇಜ್ ಆಯ್ಕೆಯಲ್ಲಿ ಸಿಗುತ್ತಿದೆ. ಇನ್ನು 128ಜಿಬಿ ವರೆಗೂ ಸ್ಟೊರೇಜ್ ಅನ್ನು ವೃದ್ಧಿಸಬಹುದಾಗಿದೆ. ‘ವಿಷನ್ 1‘ ಸ್ಮಾರ್ಟ್ಫೋನಿನಲ್ಲಿ ಡುಯೆಲ್ ಕ್ಯಾಮೆರಾ ನೀಡಲಾಗಿದೆ. ಜತೆಗೆ ಫಿಂಗರ್ ಪ್ರಿಂಟ್ ಸೆನ್ಸಾರ್, ಫೇಸ್ ಅನ್ಲಾಕ್ ಫೀಚರ್ ನೀಡಲಾಗಿದೆ. ಡುಯೆಲ್ ಆ್ಯಕ್ಟೀವ್ 4ಜಿ ವೋಲ್ಡ್ ನೆಟ್ವರ್ಕ್ನಲ್ಲಿ ಕಾರ್ಯನಿರ್ವಹಿಸಲಿದೆ . ಈ ಸ್ಮಾರ್ಟ್ಫೋನ್ ಡುಯೆಲ್ ಕ್ಯಾಮೆರಾವನ್ನು ಹೊಂದಿದೆ. 8 ಮೆಗಾಫಿಕ್ಸೆಲ್ ಮತ್ತು 0.09 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಜತೆಗೆ ಫ್ಲಾಶ್ಲೈಟ್ ಆಳವಡಿಸಲಾಗಿದೆ. ಇನ್ನು ಕ್ಯಾಮೆರಾದಲ್ಲಿ ಎಐ ಬ್ಯೂಟಿ ಮೋಡ್, ಎಚ್ಡಿಆರ್, ಸ್ಮಾರ್ಟ್ ರೆಕಗ್ನನೈಸ್ , ಅಟೋಮ್ಯಾಟಿಕ್ ಅಡ್ಜೆಸ್ಟ್ಮೆಂಟ್ ಕ್ಯಾಮೆರಾ ಎಫೆಕ್ಟ್ ಫೀಚರ್ ನೀಡಲಾಗಿದೆ. ಸೆಲ್ಫಿಗಾಗಿ 5ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಜತೆಗೆ ಎಐ ಬ್ಯೂಟಿ ಮೋಡ್ ಮತ್ತು ಫ್ಲಾಶ್ಲೈಟ್ ಅಳವಡಿಸಲಾಗಿದೆ. ಐಟೆಲ್ ‘ವಿಷುವಲ್ 1‘ ಸ್ಮಾರ್ಟ್ಫೋನ್ 1.6ಜಿಎಚ್ಝೆಡ್ ಓಕ್ಟಾ ಕೋರ್ ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ. ಇನ್ನು ಐಟೆಲ್ ವಿ‘ಶನ್ 1‘ ಸ್ಮಾರ್ಟ್ಫೋನ್ ಖರೀದಿಸುವ ಗ್ರಾಹಕರಿಗಾಗಿ ಕಂಪೆನಿ ಭರ್ಜರಿ ಆಫರ್ ಒದಗಿಸಿದೆ. 799 ರೂಪಾಯಿಯ ಬ್ಲೂಟೂತ್ ವೈರ್ಲೆಸ್ ಹೆಡ್ಸೆಟ್, ಅದರ ಜತೆಗೆ 2,200 ರೂ ಕ್ಯಾಶ್ಬ್ಯಾಕ್ + ರಿಲಾಯನ್ಸ್ ಜಿಯೋ 25ಜಿಬಿ ಡೇಟಾವನ್ನು ಉಚಿವಾಗಿ ನೀಡುತ್ತಿದೆ. ಗ್ರಾಹಕರಿಗೆ ಈ ಸ್ಮಾರ್ಟ್ಫೋನ್ 5,499 ರೂ.ಗೆ ಸಿಗಲಿದೆ.