WhatsApp: ನಿಮಗೇ ತಿಳಿಯದಂತೆ ನಿಮ್ಮ ಫೋನಿನ ಮೈಕ್ರೋಫೋನ್ ಬಳಸುತ್ತಾ ವಾಟ್ಸಾಪ್? ಈ ಬಗ್ಗೆ ಏನಂತ ಎಚ್ಚರಿಕೆ ನೀಡಿದ್ರು ಮಸ್ಕ್

ಟ್ವಿಟರ್ ಇಂಜಿನಿಯರ್ ಒಬ್ಬರು ತಾನು ಮಲಗಿರುವಾಗ ಬ್ಯಾಗ್​ರೌಂಡ್​ನಲ್ಲಿ ಮೈಕ್ರೊಫೋನ್ ವಾಟ್ಸಾಪ್​ ಅನ್ನು ಬಳಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ನಂತರ ವಾಟ್ಸಾಪ್ ಅನ್ನು ನಂಬಲು ಸಾಧ್ಯವಿಲ್ಲ ಎಂದು ಬಿಲಿಯನೇರ್ ಎಲಾನ್ ಮಸ್ಕ್ ಹೇಳಿದ್ದಾರೆ. ಭಾರತ ಸರ್ಕಾರವೂ ಇದನ್ನು ಗಮನಿಸಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.

First published:

  • 18

    WhatsApp: ನಿಮಗೇ ತಿಳಿಯದಂತೆ ನಿಮ್ಮ ಫೋನಿನ ಮೈಕ್ರೋಫೋನ್ ಬಳಸುತ್ತಾ ವಾಟ್ಸಾಪ್? ಈ ಬಗ್ಗೆ ಏನಂತ ಎಚ್ಚರಿಕೆ ನೀಡಿದ್ರು ಮಸ್ಕ್

    ಈಗಂತೂ ವಾಟ್ಸಾಪ್ ಬಳಸದವರು ಬಹುಶಃ ಯಾರೂ ಇರಲಿಕ್ಕಿಲ್ಲ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಂದ ಹಿಡಿದು ವಯೋ ವೃದ್ದರವರೆಗೆ ಒಂದಲ್ಲ ಒಂದು ಕೆಲಸಕ್ಕೆ ಈ ವಾಟ್ಸಾಪ್ ಅನ್ನು ಬಳಸುತ್ತಲೇ ಇದ್ದಾರೆ. ಕೆಲವರು ಇದನ್ನು ತಮ್ಮ ಸ್ನೇಹಿತರ ಮತ್ತು ಆಪ್ತರ ಜೊತೆಗೆ ಚಾಟ್ ಮಾಡಲು ಮತ್ತು ಸದಾ ಅವರೊಡನೆ ಸಂಪರ್ಕದಲ್ಲಿರಲು ಬಳಸಿದರೆ, ಇನ್ನೂ ಕೆಲವರು ಇದರಲ್ಲಿ ಬರುವ ವಿಡಿಯೋಗಳನ್ನು, ಫೋಟೋಗಳನ್ನು ನೋಡಲು ಮತ್ತು ಇತರರೊಂದಿಗೆ ಹಂಚಿಕೊಳ್ಳಲು ಬಳಸುತ್ತಾರೆ.

    MORE
    GALLERIES

  • 28

    WhatsApp: ನಿಮಗೇ ತಿಳಿಯದಂತೆ ನಿಮ್ಮ ಫೋನಿನ ಮೈಕ್ರೋಫೋನ್ ಬಳಸುತ್ತಾ ವಾಟ್ಸಾಪ್? ಈ ಬಗ್ಗೆ ಏನಂತ ಎಚ್ಚರಿಕೆ ನೀಡಿದ್ರು ಮಸ್ಕ್

    ಎಷ್ಟೋ ಜನರಿಗೆ ಈ ವಾಟ್ಸಾಪ್ ನಲ್ಲಿ ತಮ್ಮ ಆಪ್ತರಿಗೆ ಕಳುಹಿಸುವ ಸಂದೇಶಗಳು ಮತ್ತು ವಾಟ್ಸಾಪ್ ಕರೆಗಳಲ್ಲಿ ಮಾತನಾಡುವ ಸಂಭಾಷಣೆ ಎಷ್ಟರ ಮಟ್ಟಿಗೆ ಗೌಪ್ಯವಾಗಿರುತ್ತದೆ ಅನ್ನೋದರ ಮೇಲೆ ಸದಾ ಒಂದು ಸಂಶಯ ಕಾಡುತ್ತಲೇ ಇರುತ್ತದೆ. ವಾಟ್ಸಾಪ್ ನಲ್ಲಿ ನೀವು ನೋಡುವ ಮತ್ತು ಕಳಿಸುವ ಅಪ್ಡೇಟ್ ಗಳನ್ನು ಬೇರೆಯವರು ನೋಡಲು ಸಾಧ್ಯವಿಲ್ಲ ಅಂತ ಹೇಳುತ್ತೇ ಈ ವಾಟ್ಸಾಪ್. ಆದರೆ, ಟ್ವಿಟರ್ ಎಂಜಿನಿಯರ್ ಇತ್ತೀಚೆಗೆ ಬಹಿರಂಗಪಡಿಸಿದ ವಿಷಯಗಳನ್ನು ಗಮನಿಸಿದರೆ ಕೆಲವು ಕಳವಳಗಳು ಮನಸ್ಸಿನಲ್ಲಿ ಬರುವುದು ಗ್ಯಾರಂಟಿ.

    MORE
    GALLERIES

  • 38

    WhatsApp: ನಿಮಗೇ ತಿಳಿಯದಂತೆ ನಿಮ್ಮ ಫೋನಿನ ಮೈಕ್ರೋಫೋನ್ ಬಳಸುತ್ತಾ ವಾಟ್ಸಾಪ್? ಈ ಬಗ್ಗೆ ಏನಂತ ಎಚ್ಚರಿಕೆ ನೀಡಿದ್ರು ಮಸ್ಕ್

    ವಾಟ್ಸಾಪ್ ಬಗ್ಗೆ ಟ್ವಿಟ್ಟರ್ ಎಂಜಿನಿಯರ್ ಹೇಳಿದ್ದೇನು?: ಟ್ವಿಟ್ಟರ್ ಎಂಜಿನಿಯರ್ ಫೋಡ್ ಡಬಿರಿ ಅವರ ಟ್ವೀಟ್ ನಲ್ಲಿ "ನಾನು ರಾತ್ರಿ ಹೊತ್ತಿನಲ್ಲಿ ನಿದ್ರೆಯಲ್ಲಿದ್ದೆ, ನಾನು ಬೆಳಿಗ್ಗೆ 6 ಗಂಟೆಗೆ ಎಚ್ಚರವಾಗಿ ನೋಡಿದರೆ ವಾಟ್ಸಾಪ್ ಹಿನ್ನಲೆಯಲ್ಲಿ ಮೈಕ್ರೊಫೋನ್ ಅನ್ನು ಬಳಸುತ್ತಿದೆ. ಏನು ನಡೆಯುತ್ತಿದೆ ಇಲ್ಲಿ" ಅಂತ ಅವರು ಟ್ವೀಟ್ ಮಾಡಿದ್ದಾರೆ. ಇದು ಅವರ ಪಿಕ್ಸೆಲ್ 7 ಪ್ರೋ ಫೋನ್ ನಲ್ಲಿ ಸಂಭವಿಸಿದೆ ಎಂದು ಅವರು ಹೇಳಿದರು.

    MORE
    GALLERIES

  • 48

    WhatsApp: ನಿಮಗೇ ತಿಳಿಯದಂತೆ ನಿಮ್ಮ ಫೋನಿನ ಮೈಕ್ರೋಫೋನ್ ಬಳಸುತ್ತಾ ವಾಟ್ಸಾಪ್? ಈ ಬಗ್ಗೆ ಏನಂತ ಎಚ್ಚರಿಕೆ ನೀಡಿದ್ರು ಮಸ್ಕ್

    ನಂತರ ಎಲಾನ್ ಮಸ್ಕ್, ಎಂಜಿನಿಯರ್ ಮಾಡಿದ್ದ ಟ್ವೀಟ್ ಅನ್ನು ಉಲ್ಲೇಖಿಸಿ ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ "ವಾಟ್ಸಾಪ್ ಅನ್ನು ನಂಬಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಟ್ವಿಟ್ಟರ್ ಎಂಜಿನಿಯರ್ ಅವರ ಟ್ವೀಟ್ ಸಾವಿರಾರು ರಿಟ್ವೀಟ್ ಗಳು, ಲೈಕ್ ಗಳನ್ನು ಮತ್ತು ಕಾಮೆಂಟ್ ಗಳನ್ನು ಪಡೆದುಕೊಂಡು ತುಂಬಾನೇ ವೈರಲ್ ಆಗಿದೆ.

    MORE
    GALLERIES

  • 58

    WhatsApp: ನಿಮಗೇ ತಿಳಿಯದಂತೆ ನಿಮ್ಮ ಫೋನಿನ ಮೈಕ್ರೋಫೋನ್ ಬಳಸುತ್ತಾ ವಾಟ್ಸಾಪ್? ಈ ಬಗ್ಗೆ ಏನಂತ ಎಚ್ಚರಿಕೆ ನೀಡಿದ್ರು ಮಸ್ಕ್

    ಇದು ಭಾರತ ಸರ್ಕಾರ ಮತ್ತು ಭಾರತದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರ ಗಮನಕ್ಕೂ ಬಂದಿದೆ, ಅವರು ಈ ವಿಷಯದ ಬಗ್ಗೆ ಸರ್ಕಾರ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ. ಟ್ವಿಟ್ಟರ್ ಎಂಜಿನಿಯರ್ ಫೋಡ್ ಡಬಿರಿ ಅವರ ಟ್ವೀಟ್ ಅನ್ನು ಉಲ್ಲೇಖಿಸಿದ ಚಂದ್ರಶೇಖರ್ ಅವರು "ಇದು ಸ್ವೀಕಾರಾರ್ಹವಲ್ಲದ ಉಲ್ಲಂಘನೆ ಮತ್ತು ಬಳಕೆದಾರರ ಗೌಪ್ಯತೆಯ ಉಲ್ಲಂಘನೆಯಾಗಿದೆ.

    MORE
    GALLERIES

  • 68

    WhatsApp: ನಿಮಗೇ ತಿಳಿಯದಂತೆ ನಿಮ್ಮ ಫೋನಿನ ಮೈಕ್ರೋಫೋನ್ ಬಳಸುತ್ತಾ ವಾಟ್ಸಾಪ್? ಈ ಬಗ್ಗೆ ಏನಂತ ಎಚ್ಚರಿಕೆ ನೀಡಿದ್ರು ಮಸ್ಕ್

    "ನಾವು ಇದನ್ನು ತಕ್ಷಣವೇ ಪರಿಶೀಲಿಸುತ್ತೇವೆ ಮತ್ತು ಹೊಸ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ #DPDP ಸಿದ್ಧವಾಗುತ್ತಿರುವಂತೆಯೇ ಗೌಪ್ಯತೆಯ ಯಾವುದೇ ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ" ಎಂದಿದ್ದಾರೆ.

    MORE
    GALLERIES

  • 78

    WhatsApp: ನಿಮಗೇ ತಿಳಿಯದಂತೆ ನಿಮ್ಮ ಫೋನಿನ ಮೈಕ್ರೋಫೋನ್ ಬಳಸುತ್ತಾ ವಾಟ್ಸಾಪ್? ಈ ಬಗ್ಗೆ ಏನಂತ ಎಚ್ಚರಿಕೆ ನೀಡಿದ್ರು ಮಸ್ಕ್

    ಟ್ವೀಟ್ ಗಮನ ಸೆಳೆದ ನಂತರ, ವಾಟ್ಸಾಪ್ ಕೂಡ ಈ ವಿಷಯವನ್ನು ಅಧಿಕೃತವಾಗಿ ಒಪ್ಪಿಕೊಂಡಿತು. ಆದರೆ ಇದಕ್ಕೆಲ್ಲಾ ಕಾರಣ ಆಂಡ್ರಾಯ್ಡ್ ಫೋನ್ ಅಂತ ದೂಷಿಸಿದೆ. ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್, ಈ ಸಮಸ್ಯೆ ಆಂಡ್ರಾಯ್ಡ್ ನಲ್ಲಿದೆ ಮತ್ತು ವಾಟ್ಸಾಪ್ ನಲ್ಲಿ ಅಲ್ಲ ಎಂದು ಹೇಳಿದೆ. ವಾಟ್ಸಾಪ್ ನಲ್ಲಿ ನಡೆಯುವ ಎಲ್ಲಾ ಸಂದೇಶಗಳು ಮತ್ತು ಕರೆಗಳು ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಆಗಿವೆ ಎಂದು ಇದು ಮತ್ತೊಮ್ಮೆ ಹೇಳಿಕೊಂಡಿದೆ. ಇದರರ್ಥ ಯಾರೂ ಅವುಗಳನ್ನು ಕೇಳಲು ಅಥವಾ ಓದಲು ಸಾಧ್ಯವಿಲ್ಲ ಅಂತ.

    MORE
    GALLERIES

  • 88

    WhatsApp: ನಿಮಗೇ ತಿಳಿಯದಂತೆ ನಿಮ್ಮ ಫೋನಿನ ಮೈಕ್ರೋಫೋನ್ ಬಳಸುತ್ತಾ ವಾಟ್ಸಾಪ್? ಈ ಬಗ್ಗೆ ಏನಂತ ಎಚ್ಚರಿಕೆ ನೀಡಿದ್ರು ಮಸ್ಕ್

    "ಕಳೆದ 24 ಗಂಟೆಗಳಲ್ಲಿ ನಾವು ಟ್ವಿಟ್ಟರ್ ಎಂಜಿನಿಯರ್ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ, ಅವರು ತಮ್ಮ ಪಿಕ್ಸೆಲ್ ಫೋನ್ ಮತ್ತು ವಾಟ್ಸಾಪ್ ನಲ್ಲಿ ಸಮಸ್ಯೆಯನ್ನು ಪೋಸ್ಟ್ ಮಾಡಿದ್ದಾರೆ. ಇದು ಆಂಡ್ರಾಯ್ಡ್ ಫೋನ್ ನಲ್ಲಿರುವ ದೋಷ ಎಂದು ನಾವು ನಂಬುತ್ತೇವೆ, ಅದು ತನ್ನ ಗೌಪ್ಯತೆ ಡ್ಯಾಶ್ಬೋರ್ಡ್ ನಲ್ಲಿ ಮಾಹಿತಿಯನ್ನು ತಪ್ಪಾಗಿ ನಿರೂಪಿಸುತ್ತದೆ ಮತ್ತು ಇದಕ್ಕೆ ಪರಿಹಾರ ನೀಡುವಂತೆ ಗೂಗಲ್ ಅನ್ನು ಕೇಳಲಾಗಿದೆ" ಎಂದು ವಾಟ್ಸಾಪ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

    MORE
    GALLERIES