ಭಾರತದಲ್ಲಿ ಹೆಚ್ಚಿನ ಜನರು ಏನಾದರು ಅಗತ್ಯವಾದ ಮೆಸೇಜ್ ಕಳುಹಿಸ ಬೇಕಾದರೆ ಈ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಇನ್ನು ಕೆಲವರು ತಮ್ಮ ಸ್ನೇಹಿತರೊಂದಿಗೆ, ಫ್ಯಾಮಿಲಿಯವರೊಂದಿಗೆ ಸಂಬಂಧ ಬೆಳೆಸಲು ವಾಟ್ಸಾಪ್ ಅನ್ನು ಬಳಕೆ ಮಾಡುತ್ತಾರೆ. ಅದ್ರಲ್ಲೂ ಹೆಚ್ಚಿನದಾಗಿ ಅನಗತ್ಯ ಮೆಸೇಜ್ ಮಾಡುವವರೇ ಹೆಚ್ಚಾಗಿದ್ದಾರೆ. ಆದರೆ ಇದರಿಂದ ನಿಮ್ಮ ವಾಟ್ಸಾಪ್ ಸ್ಟೋರೇಜ್ ಫುಲ್ ಆಗಿದ್ಯಾ? ಇದನ್ನು ಕ್ಲಿಯರ್ ಮಾಡುವುದು ಹೇಗೆ ಎಂಬುದನ್ನು ಈ ಲೇಖನಲ್ಲಿದೆ ಓದಿ.
ವಾಟ್ಸಾಪ್ ಸ್ಟೋರೇಜ್ ಟೂಲ್: ದಿನನಿತ್ಯ ಹಲವಾರು ಅನಗತ್ಯ ಮೆಸೇಜ್ಗಳು ಬರುತ್ತದೆ. ಇದು ಕೆಲವೊಮ್ಮೆ ಆಟೋಮ್ಯಾಟಿಕ್ ಆಗಿ ಡೌನ್ಲೋಡ್ ಕೂಡ ಆಗುತ್ತದೆ. ಆದರೆ ಇವೆಲ್ಲವನ್ನು ಈ ವಾಟ್ಶಾಪ್ ಸ್ಟೋರೇಜ್ ಟೂಲ್ ಮೂಲಕ ಗಮನಿಸಬಹುದು. ಇದು ಯಾವ ಫೈಲ್ ಎಷ್ಟು ಸ್ಟೋರೇಜ್ ಅನ್ನು ಹೊಂದಿಕೊಂಡಿದೆ, ಯಾವ ರೀತಿ ಸ್ಟೋರೇಜ್ ಮಾದರಿಯನ್ನು ವಿಂಗೆಇಸಬೇಕು ಎಂಬುದನ್ನು ತಿಳಿಯಲು ಸಹಾಯಕವಾಗುತ್ತದೆ.
ಮೇಲ್ಭಾಗದಲ್ಲಿ ಬಳಕೆದಾರರು ಹಲವಾರು ಬಾರಿ ಫಾರ್ವರ್ಡ್ ಮಾಡಿದ ಸಂದೇಶಗಳನ್ನು ನೋಡಬಹುದು. ಆಗ ನಿಮಗೆ ಬೇಡವಾದಫೈಲ್ಗಳನ್ನು ಒತ್ತಿ ಹಿಡಿದುಕೊಂಡರೆ, ಡಿಲೀಟ್ ಮಾಡುವ ಆಪ್ಷನ್ ಕಾಣಿಸಿಕೊಳ್ಳುತ್ತದೆ. ನೀವು ಸೆಲೆಕ್ಟ್ ಮಾಡಿದ ಫೈಲ್ಗಳನ್ನು ಡಿಲೀಟ್ ಮಾಡಬಹುದು ಅಥವಾ ಎಲ್ಲಾ ಫೈಲ್ಗಳನ್ನು ಒಂದೇ ಬಾರಿಗೆ ಡಿಲೀಟ್ ಮಾಡುವ ಆಯ್ಕೆಯೂ ಇದೆ. ಡಿಲೀಟ್ ಮಾಡುವ ಆಯ್ಕೆಯು ಅಪ್ಲಿಕೇಶನ್ನ ಮೇಲಿನ ಬಲಭಾಗದಲ್ಲಿ ಬರುತ್ತದೆ.
ಸ್ಟಿಕ್ಕರ್ಗಳನ್ನು ಕಳುಹಿಸುವುದು ಹೇಗೆ? ಹೊಸವರ್ಷಗಳಲ್ಲಿ ಏನಾದರು ಶುಭಾಶಯಗಳನ್ನು ತಿಳಿಸಲು ಸ್ಟಿಕ್ಕರ್ಗಳು ಜನಪ್ರಿಯವಾಗಿವೆ. ನೀವು ಪ್ರೀತಿಪಾತ್ರರಿಗೆ ಹೊಸ ವರ್ಷದ ಶುಭಾಶಯಗಳು ಮತ್ತು ಇತರ ಸ್ಟಿಕ್ಕರ್ಗಳನ್ನು ಕಳುಹಿಸಲು ಬಯಸಿದರೆ ಇಲ್ಲಿದೆ ಸುಲಭ ವಿಧಾನ. ಉದಾಹರಣೆ ಹ್ಯಾಪಿ ನ್ಯೂ ಇಯರ್ ಸ್ಟಿಕ್ಕರ್ಗಳನ್ನು ಕಳುಹಿಸಬೇಕಾದರೆ, ಬಳಕೆದಾರರು ಮೊದಲಿಗೆ ಅವುಗಳನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಬೇಕಾಗುತ್ತದೆ. ಪ್ಲೇ ಸ್ಟೋರ್ ಅನ್ನು ಮೊದಲಿಗೆ ಓಪನ್ ಮಾಡ್ಬೇಕು ಮತ್ತು ನಿಮಗೆ ಬೇಕಾದ ಸ್ಟಿಕ್ಕರ್ ಆ್ಯಪ್ ಅನ್ನು ಅಲ್ಲಿ ಡೌನ್ಲೋಡ್ ಮಅಡಬಹುದು.