Apple Company: ಭಾರತದಲ್ಲಿ ಶೀಘ್ರದಲ್ಲೇ ಐಫೋನ್ ಮತ್ತು ಐಪ್ಯಾಡ್ಗಳು ಭಾರೀ ಅಗ್ಗದಲ್ಲಿ ಸಿಗಲಿದೆ! ಕಾರಣವೇನು ಗೊತ್ತಾ?
ಟೆಕ್ ದೈತ್ಯ ಕಂಪೆನಿಯಾಗಿರುವ ಆ್ಯಪಲ್ ಭಾರತದಲ್ಲಿ ತನ್ನ ಉತ್ಪಾದನೆಯನ್ನು ಶೇಕಡಾ 25 ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಪ್ರಸ್ತುತ ಕಂಪನಿಯ ಉತ್ಪಾದನೆಯು ದೇಶದಲ್ಲಿ 5 ರಿಂದ 7 ಪ್ರತಿಶತದಷ್ಟಿದೆ. ಆದರೆ ಮುಂದಿನ ದಿನದಲ್ಲಿ ಸಂಪೂರ್ಣವಾಗಿ ಭಾರತದಲ್ಲೇ ಆ್ಯಪಲ್ ಸಾಧನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.
ಪ್ರಸ್ತುತ, ಆ್ಯಪಲ್ ಭಾರತದಲ್ಲಿ ಕಂಪೆನಿಯನ್ನು ವಿಸ್ತರಿಸುವ ಗುರಿಯನ್ನು ಸಾಧಿಸಲು ಯಾವಾಗ ಸಾಧ್ಯವಾಗುತ್ತದೆ ಎಂದು ವಾಣಿಜ್ಯ ಸಚಿವರು ಸರಿಯಾಗಿ ಸ್ಪಷ್ಟಪಡಿಸಿಲ್ಲ. ಕ್ಯುಪರ್ಟಿನೊ, ಕ್ಯಾಲಿಫೋರ್ನಿಯಾ ಮೂಲದ ಆ್ಯಪಲ್ ಭಾರತದ ಮೇಲೆ ದೊಡ್ಡ ಪಣತೊಟ್ಟಿದೆ.
2/ 7
ಆ್ಯಪಲ್ ಕಂಪೆನಿಯು ಭಾರತದಲ್ಲಿ 2017 ರಲ್ಲಿ ವಿಸ್ಟ್ರಾನ್ ಮತ್ತು ನಂತರ ಫಾಕ್ಸ್ಕಾನ್ ಮೂಲಕ ಭಾರತದಲ್ಲಿ ಐಫೋನ್ ಅನ್ನು ಸ್ಥಾಪಿಸಲು ಮುಂದಾಗಿತ್ತು.
3/ 7
ಈ ಮೂಲಕ ಫಾಕ್ಸ್ಕಾನ್ ಎರಡು ವರ್ಷಗಳಲ್ಲಿ ಭಾರತದಲ್ಲಿನ ತನ್ನ ಐಫೋನ್ ಕಾರ್ಖಾನೆಯಲ್ಲಿ ಉದ್ಯೋಗಿಗಳನ್ನು ನಾಲ್ಕು ಪಟ್ಟು ಹೆಚ್ಚಿಸಲು ಯೋಜಿಸಿದೆ ಎಂದು ಮೂಲಗಳು ಕಳೆದ ವರ್ಷ ರಾಯಿಟರ್ಸ್ಗೆ ತಿಳಿಸಿವೆ. ಜೊತೆಗೆ ಈ ಮೂಲಕ ಐಫೋನ್ಗಳ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.
4/ 7
ಇದರಿಂದ ದೇಶದಲ್ಲಿ ಆ್ಯಪಲ್ ಸಾಧನಗಳ ಉತ್ಪಾದನೆಯಲ್ಲಿ ಹೆಚ್ಚಳದೊಂದಿಗೆ, ಅದರ ಉತ್ಪನ್ನಗಳು ದೇಶದಲ್ಲಿ ಬಹಳ ಅಗ್ಗವಾಗಿ ದೊರೆಯುವ ನಿರೀಕ್ಷೆಯಿದೆ. ಏಕೆಂದರೆ ದೇಶದಲ್ಲೇ ಉತ್ಪಾದನೆ ಮಾಡಿದ ಸಾಧನಗಳಿಗೆ ಯಾವುದೇ ಆಮದು ತೆರಿಗೆಗಳು ಇರುವುದಿಲ್ಲ ಆದ್ದರಿಂದ ಬೆಲೆ ಕಡಿಮೆಯಾಗಬಹುದೆಂಬ ನಿರೀಕ್ಷೆಯಿದೆ.
5/ 7
ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ ಟ್ವೀಟ್ ಮಾಡಿದ್ದು, ಈ ಮೂಲಕ ಡಿಸೆಂಬರ್ನಲ್ಲಿ ಭಾರತದಿಂದ ಆ್ಯಪಲ್ ಸಾಧನಗಳ ರಫ್ತು $ 1 ಬಿಲಿಯನ್ ತಲುಪಿದೆ ಎಂದು ಹೇ.ಳಿದ್ದಾಋಎ
6/ 7
ಕೋವಿಡ್ ನೀತಿಯ ಪರಿಣಾಮ ಮತ್ತು ಬೀಜಿಂಗ್ ಮತ್ತು ವಾಷಿಂಗ್ಟನ್ ನಡುವೆ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಮಸ್ಯೆಯಿಂದಾಗಿ, ಆ್ಯಪಲ್ ತನ್ನ ಉತ್ಪಾದನೆಯನ್ನು ಚೀನಾದಿಂದ ಬದಲಾಯಿಸಲು ನಿರ್ಧರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಮೂಲಕ ಭಾರತದದಲ್ಲಿ ಉತ್ಪಾದನೆಯಾದ ಸಾಧನಗಳಿಗೆ ಇನ್ನಷ್ಟು ಬೇಡಿಕೆಗಳು ಬರಬಹುದು ಎಮದು ನಿರೀಕ್ಷಿಸಲಾಗಿದೆ.
7/ 7
ಆ್ಯಪಲ್ ಕಂಪೆನಿಯು ಕ್ರಮೇಣ ಭಾರತದಲ್ಲಿ ವಿಸ್ತರಿಸುತ್ತದೆ. ಇದಲ್ಲದೆ ಈಗಾಗಲೇ ಚೀನಾದಲ್ಲಿರುವಂತಹ ಉತ್ಪಾದನೆ ಮಟ್ಟವನ್ನು ಕಡಿಮೆ ಮಾಡುವ ನಿರ್ಧಾರವನ್ನು ಕೈಗೊಂಡು ನಂತರದಲ್ಲಿ ಭಾರತದಲ್ಲೇ ಆ್ಯಪಲ್ ಸಾಧನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.