ಇತ್ತೀಚೆಗಷ್ಟೇ ಬಿಡುಗಡೆಯಾದ iPhone 13 ಬಗ್ಗೆ ಎಲ್ಲರಿಗೂ ಒಲವಿದೆ. ಆದರೆ ಇಲ್ಲಿನ ಬಗೆಬಗೆಯ ತೆರಿಗೆಗಳಿಂದಾಗಿ ಆ ಫೋನ್ ಭಾರತದಲ್ಲಿ ದುಬಾರಿಯೇ. ಆದರೆ ಭಾರತಕ್ಕಿಂತ ಬ್ರೆಜಿಲ್ ಮತ್ತು ಟರ್ಕಿಯಲ್ಲಿ ಈ ಬೆಲೆಗಳು ಇನ್ನೂ ಹೆಚ್ಚೇ ಇರುತ್ತವೆ. ಐಫೋನ್ 13 ಮತ್ತು 13 mini ನಡುವೆ ಅಂಥಾ ವ್ಯತ್ಯಾಸ ಇಲ್ಲ ಎನಿಸಿದರೂ Pro Variants ಗಳ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸ ಇದ್ದೇ ಇದೆ. ಅಮೇರಿಕಾದಲ್ಲಿ ನೀವು ಇದನ್ನು ಖರೀದಿಸಿದರೆ ಅಲ್ಲಿನ ಡಾಲರ್ ಮೊತ್ತ ಜೊತೆಗೆ ಇಲ್ಲಿಗೆ ಬರುವಾಗ ಇರುವ ನಾನಾ ತೆರಿಗೆಗಳನ್ನು ಲೆಕ್ಕ ಹಾಕಿದರೂ ಕನಿಷ್ಟ 35,000 ರೂಪಾಯಿ ಉಳಿಸಬಹುದು. ಜಿಎಸ್ಟಿ ಮತ್ತು ಬೇರೆ ಬೇರೆ ತೆರಿಗೆಗಳಿಂದ ಬೆಲೆಗಳು ಇಲ್ಲಿ ಹೆಚ್ಚಿವೆ. ಯುಎಸ್, ಹಾಂಕಾಂಗ್, ಯುಎಇ ಮುಂತಾದ ಅನೇಕ ಕಡೆಗಳಲ್ಲಿ ಐಫೋನ್ ಬೆಲೆಗಳು ಹೇಗಿವೆ ನೋಡಿ.
ಅಮೇರಿಕಾದಲ್ಲಿ ಕೊಂಡರೆ iPhone 13 series (128GB) ಮೇಲೆ ಕನಿಷ್ಟ 38,651 ರೂಪಾಯಿ ಉಳಿತಾಯ ಮಾಡಬಹುದು: ಈ ಉಳಿತಾಯ ಅಮೇರಿಕನ್ ಡಾಲರ್ ನಿಂದ ಭಾರತದ ರೂಪಾಯಿಗೆ ಬದಲಾಯಿಸಿ, ಇಲ್ಲಿರುವ ನಾನಾ ಬಗೆಯ ತೆರಿಗೆಗಳನ್ನು ಪಾವತಿಸಿದ ನಂತರದ ಲೆಕ್ಕವಾಗಿದೆ. ಬೇರೆಲ್ಲಾ ದೇಶಗಳಿಗಿಂತ ಅಮೇರಿಕಾದಲ್ಲಿ ಐಫೋನ್ ಬೆಲೆ ಕಡಿಮೆ ಇದೆ. 9.25% ನಷ್ಟು ಅತೀ ಹೆಚ್ಚಿನ ತೆರಿಗೆ ಮತ್ತು ಒಂದು ಡಾಲರ್ಗೆ 76 ರೂಪಾಯಿ ಎಂದು ಲೆಕ್ಕ ಹಾಕಿದರೂ ಇದು ಕಡಿಮೆ ಬೆಲೆಯೇ ಆಗುತ್ತದೆ. ಇದು ಅಂದಾಜಿನ ಬೆಲೆ, ಇನ್ನೂ ಕಡಿಮೆಗೆ ಕೆಲ ಪ್ರದೇಶಗಳಲ್ಲಿ ಸಿಕ್ಕರೂ ಆಶ್ಚರ್ಯವಿಲ್ಲ.
ಅಮೇರಿಕಾದಲ್ಲಿ iPhone 13 series ಬೆಲೆ ಹೀಗಿದೆ: iPhone 13 (128GB): $799 ಅಥವಾ ಭಾರತದಲ್ಲಿ Rs 66,341. ನೀವು ಕನಿಷ್ಟ 13,559 ರೂ ಉಳಿಸಬಹುದು. iPhone 13 mini (128GB): $699 ಅಥವಾ ಭಾರತದಲ್ಲಿ ರೂ 58,038. ನೀವು ಕನಿಷ್ಟ ರೂ 11,862 ಹಣ ಉಳಿಸುತ್ತೀರ. iPhone 13 Pro (128GB): $999 ಅಥವಾ ಭಾರತದಲ್ಲಿ ರೂ 82,947. ಇದರಿಂದ ನೀವು ಕಡಿಮೆ ಅಂದರೂ 36,953 ರೂ ಉಳಿಸಬಹುದು. iPhone 13 Pro Max (128GB): $1099 ಅಥವಾ ಭಾರತದಲ್ಲಿ ರೂ91,249. ಇದರಿಂದ ನೀವು ಕನಿಷ್ಟ 38,651 ರೂಪಾಯಿ ಉಳಿತಾಯ ಮಾಡಬಹುದು.
ಹಾಂಕಾಂಗ್ ನಲ್ಲಿ iPhone 13 series ಕೊಂಡರೆ ನೀವು 35,910 ರೂಪಾಯಿಯವರಗೆ ಹಣ ಉಳಿತಾಯ ಮಾಡಬಹುದು. ಒಂದು ಹಾಂಕಾಂಗ್ ಡಾಲರ್ (HKD) ಬೆಲೆ 10 ರೂಪಾಯಿಗಳಿಗೆ ಸಮ ಎಂದು ಲೆಕ್ಕ ಮಾಡಿದರೆ ಕನಿಷ್ಟ ರೂ 9,910 ರಿಂದ ಗರಿಷ್ಟ 35,910ವರಗೆ ಉಳಿತಾಯ ಸಾಧ್ಯವಿದೆ. iPhone 13 (128GB): HKD 6,799 ಅಥವಾ ರೂ 67,990. ನಿಮ್ಮ ಉಳಿತಾಯ ರೂ 11,910 iPhone 13 mini: HKD 5,999 ಅಥವಾ ರೂ 59,990. ನಿಮ್ಮ ಉಳಿತಾಯ ರೂ 9,910 iPhone 13 Pro: HKD 8,499 ಅಥವಾ ರೂ 84,990. ನಿಮ್ಮ ಉಳಿತಾಯ ರೂ 34,910 iPhone 13 Pro Max: HKD 9,399 ಅಥವಾ ರೂ 93,990. ನಿಮ್ಮ ಉಳಿತಾಯ ರೂ 35,910
ಸಿಂಗಾಪೊರ್ ನಲ್ಲಿ ಕೊಳ್ಳುವ ಮೂಲಕ ನೀವು iPhone 13 series ಮೇಲೆ 29,156 ರೂಪಾಯಿಗಳಷ್ಟು ಹಣ ಉಳಿಸಬಹುದು. ಕನಿಷ್ಟ 7,156 ರೂಪಾಯಿಗಳಿಂದ ನಿಮ್ಮ ಉಳಿತಾಯ ಆರಂಭವಾಗುತ್ತದೆ. ಒಂದು ಸಿಂಗಾಪುರ್ ಡಾಲರ್ ಬೆಲೆ 56 ರೂಪಾಯಿಗಳಷ್ಟು ಇದೆ. iPhone 13: SGD 1299 ಅಥವಾ ರೂ 72,744. ನಿಮ್ಮ ಉಳಿತಾಯ ರೂ 7,156. iPhone 13 mini: SGD 1149 ಅಥವಾ ರೂ 64,344. ನಿಮ್ಮ ಉಳಿತಾಯ ರೂ 5,556. iPhone 13 Pro: SGD 1,649 ಅಥವಾ ರೂ 92,344. ನಿಮ್ಮ ಉಳಿತಾಯ ರೂ 27,556 iPhone 13 Pro Max: SGD 1,799 ಅಥವಾ ರೂ 1,00,744. ನಿಮ್ಮ ಉಳಿತಾಯ ರೂ 29,156
ಆಸ್ಟ್ರೇಲಿಯಾದಲ್ಲಿ iPhone 13 ಸೀರೀಸ್ ಕೊಂಡರೆ 28,205ರೂಪಾಯಿ ಉಳಿತಾಯ ಮಾಡಬಹುದು. ಕನಿಷ್ಠ 5,705 ರೂಪಾಯಿಯಿಂದ ಈ ಉಳಿತಾಯ ಹಣ ಆರಂಭವಾಗುತ್ತದೆ. ಒಂದು ಆಸ್ಟ್ರೇಲಿಯನ್ ಡಾಲರ್ ಬೆಲೆ 55 ರೂಪಾಯಿ ಇದೆ. iPhone 13: $1,349 ಅಥವಾ Rs 74,195. ನಿಮ್ಮ ಉಳಿತಾಯ ರೂ 5,705 iPhone 13 mini: $1,199 ಅಥವಾ Rs 65,945. ನಿಮ್ಮ ಉಳಿತಾಯ ರೂ 3,955 iPhone 13 Pro: $1,699 ಅಥವಾ Rs 93,445. ನಿಮ್ಮ ಉಳಿತಾಯ ರೂ 26,455 iPhone 13 Pro Max: $1,849 ಅಥವಾ Rs 1,01,695. ನಿಮ್ಮ ಉಳಿತಾಯ ರೂ 28,205
ಯುಎಇಯಲ್ಲಿ iPhone 13 series (128GB) ಕೊಂಡರೆ 31,721 ರೂಪಾಯಿ ಉಳಿತಾಯ ಮಾಡಬಹುದು. ಒಂದು ದಿರ್ಹಮ್ ಬೆಲೆ 21 ರೂಪಾಯಿ ಎಂದು ಲೆಕ್ಕ ಮಾಡಿದರೂ ಕನಿಷ್ಟ 8,521 ರೂಪಾಯಿಗಳಿಂದ ಗರಿಷ್ಟ 31,721 ರೂಪಾಯಿಗಳಷ್ಟು ಹಣ ಉಳಿಸಬಹುದು. iPhone 13: Dirham 3,399 ಅಥವಾ ರೂ 71,379. ನಿಮ್ಮ ಉಳಿತಾಯ ರೂ 8,521 iPhone 13 mini: Dirham 2,999 ಅಥವಾ ರೂ 62,979. ನಿಮ್ಮ ಉಳಿತಾಯ ರೂ 6,921 iPhone 13 Pro: Dirham 4,199 ಅಥವಾ ರೂ 88,179. ನಿಮ್ಮ ಉಳಿತಾಯ ರೂ 31,721 iPhone 13 Pro ಗರಿಷ್ಟ Dirham 4699. ನಿಮ್ಮ ಉಳಿತಾಯ ರೂ 31,221
ಮಲೇಷ್ಯಾದಲ್ಲಿ iPhone 13 ಸೀರೀಸ್ ಕೊಂಡರೆ ನೀವು 29,219 ರೂಪಾಯಿಗಳವರಗೆ ಉಳಿತಾಯ ಮಾಡಬಹುದು. ಒಂದು ಮಲೇಷ್ಯನ್ ರಿಂಗಿಟ್ (RM) ಬೆಲೆ 19 ರೂಪಾಯಿಯಂತೆ ಲೆಕ್ಕ ಮಾಡಿದರೂ ಕನಿಷ್ಟ 8,521 ಇಂದ ಗರಿಷ್ಟ 31,721 ರೂಪಾಯಿ ಉಳಿತಾಯ ಮಾಡಬಹುದಾಗಿದೆ. iPhone 13: RM 3,899 ಅಥವಾ ರೂ 74,081. ನಿಮ್ಮ ಉಳಿತಾಯ ರೂ 5,819 iPhone 13 mini: RM 3,399 ಅಥವಾ ರೂ 64,581. ನಿಮ್ಮ ಉಳಿತಾಯ ರೂ 5,319 iPhone 13 Pro: RM 4,899 ಅಥವಾ ರೂ 93,081. ನಿಮ್ಮ ಉಳಿತಾಯ ರೂ 26,819 iPhone 13 Pro Max: RM 5,299 ಅಥವಾ ರೂ 1,00,681. ನಿಮ್ಮ ಉಳಿತಾಯ ರೂ 29,219