iPhone 13: ಸದ್ಯದಲ್ಲೇ ಪರಿಚಯಿಸಲಿರುವ ಐಫೋನ್ 13ನಲ್ಲಿ ಇರಲಿದೆ ಈ ಹೊಸ ಫೀಚರ್!
ಅಚ್ಚರಿಯ ವಿಚಾರವೆಂದರೆ ಮಾಸ್ಕ್ ಹಾಗೂ ಕನ್ನಡಕ ಎರಡನ್ನು ಪರಿಶೀಲಿಸುವ ಫೆಸ್ ಐಡಿ ಫೀಚರನ್ನು ಐಫೋನ್ 13ನಲ್ಲಿ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಅದಕ್ಕಾಗಿ ಪರೀಕ್ಷೆ ನಡೆಯುತ್ತಿದ್ದು, ಟೆಸ್ಟಿಂಗ್ ವೇಳೆ ಮುಖಗವಸು ಮತ್ತು ಕನ್ನಡದ ಧರಿಸಲು ಉದ್ಯೋಗಿಗಳಿಗೆ ಹೇಳಿದೆ.
ಆ್ಯಪಲ್ ಕಂಪನಿ ಐಫೋನ್ 13 ಅನ್ನು ಸಿದ್ಧಪಡಿಸುತ್ತಿದೆ. ಮುಂದಿನ ದಿನಗಳಲ್ಲಿ ನೂತನ ಫೋನ್ ಗ್ರಾಹಕರ ಕೈ ಸೇರಲಿದೆ. ಹಲವಾರು ನಿರೀಕ್ಷೆಗಳನ್ನು ಹೊತ್ತು ತರುತ್ತಿರುವ ಐಫೋನ್ 13ನಲ್ಲಿ ಆಕರ್ಷಕ ಫೀಚರ್ಸ್ ಇರಲಿದೆ ಎನ್ನಲಾಗುತ್ತಿದೆ.
2/ 7
ಮಾಹಿತಿಗಳ ಪ್ರಕಾರ, ಆ್ಯಪಲ್ ಪ್ರಸ್ತುತ ಐಫೋನ್ 13 ಲೈನ್ ಅಪ್ಗಾಗಿ ಹೊಸ ಫೇಸ್ಐಡಿ ಹಾರ್ಡ್ವೇರ್ ಅನ್ನು ಪರೀಕ್ಷಿಸುತ್ತಿದೆ. ಸೆಲ್ಫಿಕ್ಯಾಮೆರಾದೊಂದಿಗೆ ಮುಖ ಗುರುತಿಸುವಿಕೆಯ ತಂತ್ರಜ್ನಾನ ಬರಲಿದೆ ಹಾಗೂ ಅದಕ್ಕಾಗಿ ಕುಪರ್ಟಿನೊ ಕಂಪನಿಯ ಸಹಾಯ ಪಡದಿದೆ ಎಂಬ ವದಂತಿ ಹರಿದಾಡುತ್ತಿದೆ.
3/ 7
ಫ್ರಂಟ್ಪೇಜ್ಟೆಕ್.ಕಾಮ್ ವರದಿ ಮಾಡಿದ ಪ್ರಕಾರ ಐಫೋನ್ 12 ಬಳಕೆದಾರರಿಗೆ ಫೇಸ್ ಐಡಿ ಟೆಸ್ಟ್ ಮಾಡಲು ಫೀಚರ್ಸ್ ನೀಡಿದೆ. ಅದರ ಜತೆಗೆ ಐಫೋನ್ 13ನಲ್ಲೂ ಫೇಸ್ಐಡಿ ರೆಕಾಗ್ನಿಶನ್ ಅನ್ನು ನೀಡಲು ಮುಂದಾಗಿದೆ.
4/ 7
ಅಚ್ಚರಿಯ ವಿಚಾರವೆಂದರೆ ಮಾಸ್ಕ್ ಹಾಗೂ ಕನ್ನಡಕ ಎರಡನ್ನು ಪರಿಶೀಲಿಸುವ ಫೆಸ್ ಐಡಿ ಫೀಚರನ್ನು ಐಫೋನ್ 13ನಲ್ಲಿ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಅದಕ್ಕಾಗಿ ಪರೀಕ್ಷೆ ನಡೆಯುತ್ತಿದ್ದು, ಟೆಸ್ಟಿಂಗ್ ವೇಳೆ ಮುಖಗವಸು ಮತ್ತು ಕನ್ನಡದ ಧರಿಸಲು ಉದ್ಯೋಗಿಗಳಿಗೆ ಹೇಳಿದೆ.
5/ 7
ಒಳಾಂಗಣ ಮತ್ತು ಹೊರಾಂಗಣದಲ್ಲಿ ಹೊಸ ಫೇಸ್ಐಟಿ ಫೀಚರ್ಸ್ ಬಳಸಲಾಗುವಂತೆ ಪರೀಕ್ಷೆ ನಡೆಸಲಾಗುತ್ತಿದೆ. ಜೊತೆಗೆ ವಿವಿಧ ಶೈಲಿಯ ಮಾಸ್ಕ್ ಧರಿಸುವಂತೆ ವಿವಿಧ ಆಕಾರದ ಕನ್ನಡಕ ಧರಿಸುವಂತೆ ಆ್ಯಪಲ್ ಉದ್ಯೋಗಿಗಳಿಗೆ ತಿಳಿಸಿದೆ.
6/ 7
ಈ ಮೊದಲು ಫೇಸ್ಐಡಿಗೆ ಪರ್ಯಾಯವಾಗಿ ಇನ್ಡಿಸ್ಪ್ಲೇ ಟಚ್ ಐಡಿ ಫೀಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಆ್ಯಪಲ್ ಪರೀಕ್ಷಿಸಿತ್ತು. ಆದರೆ ಭವಿಷ್ಯದಲ್ಲಿ ಐಫೋನ್ ಬೆಳವಣಿಯನ್ನು ಗಮನಿಸಿ ಈ ಆಯ್ಕೆಯನ್ನು ಕೈಬಿಡಲಾಯಿತು.
7/ 7
ಸದ್ಯ ಮುಂದಿನ ಐಫೋನ್ 13ಗೆ ಅನೇಕರು ಕಾಯುತ್ತಿದ್ದಾರೆ. ಯಾವೆಲ್ಲಾ ಫೀಚರ್ಸ್ ಇದರಲ್ಲಿ ಇರಲಿದೆ ಎಂಬ ಕುತೂಹಲತೆ ಮನೆ ಮಾಡಿದೆ. ಒಟ್ಟಿನಲ್ಲಿ ಐಫೋನ್ 12ಗಿಂತ ಹೆಚ್ಚಿನ ಫೀಚರ್ಸ್ ಹೊಂದಿರಲಿದೆ ಎನ್ನಲಾಗುತ್ತಿದೆ.