Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

Ola Cabs Bangalore: ಇಂದು ಅನೇಕರ ಸ್ಮಾರ್ಟ್​ಫೋನ್​ನಲ್ಲಿ ಓಲಾ ಆ್ಯಪ್ ಇದೆ. ಆದರೆ ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಯಾರು? ಅದರ ಹಿಂದಿನ ಪರಿಶ್ರಮವೇನು? ಎಂಬ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಇಲ್ಲಿದೆ.

First published:

  • 113

    Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

    ಕಾಲ ಬದಲಾಗಿದೆ. ಎಲ್ಲಿಗಾದರು ಪ್ರಯಾಣ ಬೆಳೆಸಬೇಕಾದರೆ ಸ್ಮಾರ್ಟ್​ಫೋನಿನಲ್ಲಿ ಇನ್​ಸ್ಟಾಲ್ ಮಾಡಿರುವ ಓಲಾ  ಕ್ಯಾಬ್​ ಬುಕ್ ಮಾಡಿದರೆ ಸಾಕು. ನಿಮಿಷಾರ್ಧದಲ್ಲೇ ನಿಮ್ಮ ಬಳಿ ಬಂದು ಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತದೆ. ಬೆಂಗಳೂರಿ ನಂತಹ ಸಿಟಿಗಳಲ್ಲಿ ಓಲಾ ಜನಪ್ರಿಯತೆ ಪಡೆದಿದೆ. ಇದರಿಂದ ಅನೇಕರಿಗೆ ಉಪಯೋಗವಾಗಿದೆ ಕೂಡ.

    MORE
    GALLERIES

  • 213

    Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

    ಗೂಗಲ್ ಮ್ಯಾಪ್ ಬಳಸಿ ಓಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಸರಿಯಾದ ಜಾಗಕ್ಕೆ ಬಿಡುತ್ತದೆ. ಇಂದು ಅನೇಕರ ಸ್ಮಾರ್ಟ್​ಫೋನ್​ನಲ್ಲಿ ಓಲಾ ಆ್ಯಪ್ ಇದೆ. ಆದರೆ ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಯಾರು? ಅದರ ಹಿಂದಿನ ಪರಿಶ್ರಮವೇನು? ಎಂಬ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಇಲ್ಲಿದೆ.

    MORE
    GALLERIES

  • 313

    Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

    ಓಲಾ ಎಂಬ ಚಿಕ್ಕ ಕಂಪನಿ ಇಂದು ದೇಶದಲ್ಲಿ ದೊಡ್ಡದಾಗಿ ಬೆಳೆಯುವ ಮೂಲಕ ಹಲವರಿಗೆ ದಾರಿ ದೀಪವಾಗಿದೆ. ಬೆಳಗಿನಿಂದ ರಾತ್ರಿ ತನಕ ದುಡಿಯುವ ಅನೇಕ ಡ್ರೈವರ್​ಗಳಿಗೆ ಇದರಿಂದ ಉದ್ಯೋಗ ಸಿಕ್ಕಿದೆ. ಅಷ್ಟು ಮಾತ್ರವಲ್ಲ. ಬೆಂಗಳೂರಿನಂತರ ದೊಡ್ಡ ಸಿಟಿಗಳಿಗೆ ಹೊಸದಾಗಿ ಕಾಲಿಟ್ಟವರಿಗೆ ಓಲಾ ಸುರಕ್ಷತೆಯನ್ನು ಒದಗಿಸುವ ಮೂಲಕ ತಮ್ಮ ಸ್ಥಳಕ್ಕೆ ಕರೆದೊಯ್ಯುವ ಕೆಲಸ ಮಾಡುತ್ತಿದೆ.

    MORE
    GALLERIES

  • 413

    Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

    ಭಾವೀಶ್ ಅಗರ್ವಾಲ್ ಓಲಾ ಕ್ಯಾಬ್ ಸಂಸ್ಥೆಯ ಸ್ಥಾಪಕ. ಮುಂಬಯಿಯ ಐಐಟಿಯಲ್ಲಿ ತಮ್ಮ ಪದವಿಯನ್ನು ಪೂರ್ತಿಗೊಳಿಸಿ ಮೈಕ್ರೋಸಾಫ್ಟ್ ಇಂಡಿಯಾ ಸಂಸ್ಥೆಯಲ್ಲಿ ಎರಡು ವರ್ಷ ಕೆಲಸವನ್ನು ಮಾಡಿದ್ದರು.

    MORE
    GALLERIES

  • 513

    Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

    ಪ್ರತಿನಿತ್ಯ ಆಫೀಸು, ಕಂಪ್ಯೂಟರ್ ಮುಂದೆ ಕೆಲಸ ಮಾಡುತ್ತಾ ಕೂರುತ್ತಿದ್ದ ಭಾವೀಶ್​ ಕೆಲಸ ಮುಗಿಯುತ್ತಿದ್ದಂತೆ ಆಟೋ ಅಥವಾ ಕ್ಯಾಬ್ ಬಳಸುತ್ತಾ ಮನೆಗೆ ತಲುಪುತ್ತಿದ್ದರು.

    MORE
    GALLERIES

  • 613

    Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

    ಆಫೀಸಿನ ಒತ್ತಡ ಒಂದೆಡೆಯಾದರೆ. ಮತ್ತೊಂದೆಡೆ ಟ್ರಾಫಿಕ್ ಸಮಸ್ಯೆಯನ್ನು ಎದುರಿಸುತ್ತಾ ಕ್ಯಾಬ್  ಹಿಡಿದು ಮನೆಗೆ ಹೋಗಬೇಕು. ಅದರಲ್ಲಿ ಕ್ಯಾಬ್​ ಡ್ರೈವರ್​ಗಳ ಚೌಕಾಸಿ. ಹೀಗೆ  ಇವೆಲ್ಲವನ್ನು ಕಂಡಿದ್ದ ಭಾವೀಶ್​ ಎರಡು ವರ್ಷ ತಮ್ಮ ಕೆಲಸದ ಅನುಭವದಲ್ಲಿ ಒಂದು ದಿನ ಕೆಟ್ಟ ಅನುಭವವನ್ನು ಎದುರಿಸುತ್ತಾರೆ.

    MORE
    GALLERIES

  • 713

    Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

    2010 ರಲ್ಲಿ ಭಾವೀಶ್ ಅದೊಂದು ದಿನ ಕ್ಯಾಬ್ ವೊಂದನ್ನು ಬುಕ್ ಮಾಡಿ ಬೆಂಗಳೂರಿನಿಂದ – ಬಂಡೀಪುರಕ್ಕೆ ಪಯಣ ಬೆಳೆಸುತ್ತಾರೆ. ಈ ನಡುವೆ ಟ್ಯಾಕ್ಸಿ ಚಾಲಕ ದಾರಿ ಮಧ್ಯದಲ್ಲಿ ನಿಗದಿತ ಬಾಡಿಗೆಗಿಂತ ಹೆಚ್ಚು ಬಾಡಿಗೆ ಕೇಳಲು ಆರಂಭಿಸುತ್ತಾನೆ.

    MORE
    GALLERIES

  • 813

    Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

    ಇದನ್ನು ಭಾವೀಶ್ ತಿರಸ್ಕರಿಸುತ್ತಾರೆ. ಅದಕ್ಕೆ ಟ್ಯಾಕ್ಸಿ ಚಾಲಕ ದಾರಿ ಮಧ್ಯದಲ್ಲಿ ಅವರನ್ನು ಇಳಿಸಿ ಮುಂದೆ ಹೋಗುತ್ತಾನೆ. ಇದರಿಂದ ಭಾವೀಶ್​​ಗೆ ಅವಮಾನವಾದಂತೆ ಆಗುತ್ತದೆ. ಇಂತಹ ಘಟನೆಗಳು ಮರುಕಳಿಸಬಾರದು ಮತ್ತು ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಕ್ಯಾಬ್ ವ್ಯವಸ್ಥೆಯನ್ನು ಮಾಡಬೇಕೆಂದು ನಿರ್ಧರಿಸುತ್ತಾರೆ ಭಾವೀಶ್.

    MORE
    GALLERIES

  • 913

    Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

    ಚಿಂತಿಸಿ ಹೊಸ ‘ ಓಲಾ ಕ್ಯಾಬ್‘ ಸಂಸ್ಥೆಯನ್ನು ಸ್ಥಾಪಿಸಲು ಭಾವೀಶ್ ಮುಂದಾಗುತ್ತಾರೆ. ತಮ್ಮ ಯೋಜನೆಯ ಬಗ್ಗೆ ಭಾವೀಶ್ ತಮ್ಮ ಸ್ನೇಹಿತ ಅಂಕಿತ್ ಭಾಟಿಯ ಬಳಿ ಹೇಳಿಕೊಳ್ಳುತ್ತಾರೆ. ಅಂಕಿತ್ ಭಾಟಿಯೂ ಈ ಯೋಚನೆಗೆ ಜೈ ಎಂದು ಇದರ ಬಗ್ಗೆ ಹಲವು ಸಂಶೋಧನೆಯನ್ನು ಮಾಡಲಾರಂಭಿಸುತ್ತಾರೆ.

    MORE
    GALLERIES

  • 1013

    Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

    ಓಲಾ ಕ್ಯಾಬ್ ಸ್ಥಾಪಿಸಿಲೆಂದು ಇದ್ದ ಕೆಲಸಕ್ಕೆ ರಾಜೀನಾಮೆ ನಿಡುತ್ತಾರೆ ಭಾವೀಶ್​​. ಈ ಸಮಯದಲ್ಲಿ ಆನ್​ಲೈನ್​ ಮಾರಾಟ ಮಳಿಗೆಯಾದ ಸ್ನಾಪ್ ಡೀಲ್ ಸಂಸ್ಥೆಯ ಸ್ಥಾಪಕ ಕುನಾಲ್ ಪೆಹೆಲ್ ಅವರು ಹಣಕಾಸಿನ ನೆರವು ನೀಡುತ್ತಾರೆ.

    MORE
    GALLERIES

  • 1113

    Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

    ನಂತರ ಬಾಡಿಗೆ ಕಾರುಗಳನ್ನು ಬಳಸುವ ಮೂಲಕ ಓಲಾ ಕ್ಯಾಬ್ ಆರಂಭಿಸುತ್ತಾರೆ. ಅದಕ್ಕಾಗಿ ಓಲಾ ಆ್ಯಪ್ ರಚಿಸಿ ಬಳಕೆಗೆ ತರುತ್ತಾರೆ. ಸದ್ಯ ಬೆಂಗಳೂರು, ಮುಂಬೈ ಮುಂತಾದ ನಗರದಲ್ಲಿ ಓಲಾ ಕ್ಯಾಬ್ ಬಳಕೆ ಹೆಚ್ಚಾಗಿದೆ.

    MORE
    GALLERIES

  • 1213

    Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

    ಅದರ ಜೊತೆಗೆ ‘ಫುಡ್ ಪಾಂಡ’ ಸಂಸ್ಥೆಯನ್ನು ಓಲಾ ಸಂಸ್ಥೆ ತನ್ನ ಅಸ್ತಿತ್ಬಕ್ಕೆ ತೆಗೆದುಕೊಂಡಿದೆ. ಸದ್ಯ 250 ಕ್ಕೂ ಹೆಚ್ಚು ನಗರದಲ್ಲಿ ಓಲಾ ಕ್ಯಾಬ್ ಓಡಾಡುತ್ತಿದೆ.

    MORE
    GALLERIES

  • 1313

    Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

    7 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಭಾರತ ಮಾತ್ರವಲ್ಲದೆ, ಆಸ್ಟ್ರೇಲಿಯಾ, ನ್ಯೂಜಿಲೆಂಡ್​​ನಲ್ಲೂ ಓಲಾ ಜನಪ್ರಿಯತೆ ಪಡೆದಿದೆ

    MORE
    GALLERIES