ಭಾರತದಲ್ಲಿ ಇಲ್ಲಿಯವರೆಗೆ ನಾವು ಎಲೆಕ್ಟ್ರಿಕ್ ಬೈಕ್‌ಗಳು, ಕಾರುಗಳು ಮತ್ತು ಬಸ್‌ಗಳನ್ನು ನೋಡಿದ್ದೇವೆ. ಆದರೆ ಡಬಲ್ ಡೆಕ್ಕರ್ ಬಸ್ ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿ ಹೋಗುವುದನ್ನು ನೋಡಿಲ್ಲ. ಈಗ ನೋಡುವ ಅವಕಾಶ ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್‌ಪೋರ್ಟ್ ಅಂಡರ್‌ಟೇಕಿಂಗ್ (ಬೆಸ್ಟ್) ಕಂಪೆನಿ ಭಾರತದ ಮೊದಲ ಎಲೆಕ್ಟ್ರಿಕ್ ಹವಾನಿಯಂತ್ರಿತ (ಎಸಿ) ಡಬಲ್ ಡೆಕ್ಕರ್ ಬಸ್ ಅನ್ನು ಜನವರಿ 13 ರಂದು ಬಿಡುಗಡೆ ಮಾಡಿದೆ.
ಇನ್ನು ಈ ಬಸ್ ಅನ್ನು ಸ್ವಿಚ್ ಇಐವಿ 22 ಎಂದು ಕರೆಯಲಾಗುತ್ತದೆ. ಇದನ್ನು ಸ್ವಿಚ್ ಮೊಬಿಲಿಟಿ ಕಂಪೆನಿ ತಯಾರಿಸಿದೆ. ಇದು ವ್ಯಾಪಕವಾಗಿ ಗುರುತಿಸಲ್ಪಟ್ಟ ಬ್ರ್ಯಾಂಡ್ ಅಶೋಕ್ ಲೇಲ್ಯಾಂಡ್‌ನ ವಿದ್ಯುತ್ ವಾಹನ ಉತ್ಪಾದನಾ ಅಂಗಸಂಸ್ಥೆಯಾಗಿದೆ. ಸ್ವಿಚ್ EiV 22 ವಿಶ್ವದ ಮೊದಲ ಸೆಮಿ-ಲೋ ಫ್ಲೋರ್, ಎಸಿ, ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಆಗಿದೆ. ಇದರ ಬೆಲೆ ಸುಮಾರು 2 ಕೋಟಿ ರೂಪಾಯಿಯಷ್ಟಿರುತ್ತದೆ..
ಇನ್ನು ಈ ಬಸ್ನ ಬ್ಯಾಟರಿ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಬಸ್ನ ಬ್ಯಾಟರಿಯನ್ನು ಒಮ್ಮೆ ಚಾರ್ಚ್ ಮಾಡಿದರೆ 250 ಕಿಲೋಮೀಟರ್‌ವರೆಗೂ ಚಲಿಸುತ್ತದೆ. ಈ ಸ್ವಿಚ್ EiV22 ಮಾಡೆಲ್ ಬಸ್ 231-kWh ಬ್ಯಾಟರಿಯನ್ನು ಸಹ ಹೊಂದಿದೆ. ಕೇವಲ 45 ನಿಮಿಷಗಳ ಚಾರ್ಜ್‌ನ ನಂತರ ಇ-ಬಸ್ ತನ್ನ ವ್ಯಾಪ್ತಿಯನ್ನು 100 ಕಿಲೋಮೀಟರ್‌ಗಳಷ್ಟು ಓಡುತ್ತದೆ. ಆದರೆ ಪೂರ್ಣ ಚಾರ್ಜ್ ಆಗಲು 80 ನಿಮಿಷಗಳು ಬೇಕಾಗುತ್ತದೆ.