ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಫೋನ್ ಬಳಸುತ್ತಾರೆ. ಇದು ನಮ್ಮೆಲ್ಲರ ಜೀವನದ ಪ್ರಮುಖ ಭಾಗವಾಗಿದೆ. ಆದರೆ ನಮ್ಮಲ್ಲಿ ಹೆಚ್ಚಿನವರು ಫೋನ್ ಬಳಸುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ನಿಮ್ಮ ಫೋನ್ ಅಕಾಲಿಕವಾಗಿ ಹಾಳಾಗಲು ಕಾರಣವಾಗುತ್ತದೆ. ಹಾಗಿದ್ರೆ ಆ ಸ್ಮಾರ್ಟ್ಫೋನ್ ಬಳಕೆದಾರರು ಮಾಡುವಂತಹ ಆ ಮುಖ್ಯ ತಪ್ಪು ಏನು ಎಂಬುದನ್ನು ಈ ಲೇಖನದಲ್ಲಿದೆ ಓದಿ.
ಪರ್ಮಿಷನ್: ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ಅದನ್ನು ತೆರೆದ ನಂತರ, ಅದು ನಮ್ಮಿಂದ ಅನುಮತಿ ಕೇಳುತ್ತದೆ ಎಂಬುದನ್ನು ನಾವೆಲ್ಲರೂ ಗಮನಿಸಿರಬೇಕು. ಆದರೆ ಅಪ್ಲಿಕೇಶನ್‌ಗೆ ಎಲ್ಲಾ ಅನುಮತಿಗಳ ಅಗತ್ಯವಿಲ್ಲ. ಅಪ್ಲಿಕೇಶನ್‌ಗಳು ಕೆಲವೊಮ್ಮೆ ನಿಮ್ಮ ವೈಯಕ್ತಿಕ ಮಾಹಿತಿಗೆ ಪ್ರವೇಶ ಅಥವಾ ಕ್ಯಾಮೆರಾ, ಮೈಕ್ರೊಫೋನ್‌ಗೆ ಪ್ರವೇಶದಂತಹ ಅನಗತ್ಯ ಅನುಮತಿಗಳನ್ನು ಕೇಳುತ್ತವೆ. ಈ ರೀತಿಯ ಯಾವುದೇ ಸಂದರ್ಭದಲ್ಲಿ ಅಂತಹ ಅನುಮತಿಗಳನ್ನು ನೀಡಬೇಡಿ.