ನಿಮ್ಮ ಫೋನ್‌ನಲ್ಲಿ ಯಾವುದೇ ನಿಮಗೆ ಗೊತ್ತಿಲ್ಲದ ಅಪ್ಲಿಕೇಶನ್‌ಗಳನ್ನು ನೀವು ಡೌನ್‌ಲೋಡ್ ಆಗಿದ್ದರೆ, ಯಾರಾದರೂ ನಿಮ್ಮ ಫೋನ್ ಅನ್ನು ಟ್ಯಾಂಪರಿಂಗ್ ಮಾಡುತ್ತಿದ್ದಾರೆಯೇ ಎಂದು ನಿಮಗೆ ತಿಳಿದಿರಬೇಕು. ಇನ್ನು ಈ ಹ್ಯಾಕರ್ಸ್ಗಳು ನಿಮ್ಮ ಮೊಬೈಲ್ಗೆ Net Nanny, Kaspersky Safe Kids, Norton Family ಇಂತಹ ಆ್ಯಪ್ಗಳನ್ನು ಡೌನ್‌ಲೋಡ್ ಮಾಡುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಎಚ್ಚರಿಕೆಯಿಂದಿರುವುದು ಉತ್ತಮ.
ನಿಮ್ಮ ಸಾಧನವು ಅತಿಯಾಗಿ ಬಿಸಿಯಾಗುತ್ತಿದ್ದರೆ, ಹಿನ್ನೆಲೆಯಲ್ಲಿ ಸ್ಪೈವೇರ್ ಅನ್ನು ಚಾಲನೆ ಮಾಡುವ ಮೂಲಕ ಯಾರಾದರೂ ನಿಮ್ಮ ಮೇಲೆ ವಂಚನೆ ನಡೆಸುತ್ತಿದ್ದಾರೆ ಎಂಬುದರ ಸಂಕೇತವಾಗಿರಬಹುದು. ಇನ್ನು ಇದೇ ರೀತಿ ನೀವು ಸ್ಮಾರ್ಟ್ಫೋನ್ ಬಳಸದೇ ಇದ್ದಾಗಲು ಮೊಬೈಲ್ ತನ್ನಷ್ಟಕ್ಕೆ ಬಿಸಿಯಾಗುತ್ತಿದ್ದರೆ, ನೀವು ಜಾಗರೂಕತೆಯಿಂದಿರುವುದು ಉತ್ತಮ. ಹೀಗಿರುವಾಗ ಪಕ್ಕದ ಮೊಬೈಲ್ ಶಾಪ್ಗೆ ತೋರಿಸಬೇಕು.
ಫೋನ್‌ನಲ್ಲಿ ಯಾವ ಆ್ಯಪ್‌ನಲ್ಲಿ ಡೇಟಾ ವೇಗವಾಗಿ ಬಳಕೆಯಾಗುತ್ತಿದೆ ಎಂಬುದನ್ನು ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು. ಇದಕ್ಕಾಗಿ ನೀವು ಮೊಬೈಲ್ನಲ್ಲಿ ಸೆಟ್ಟಿಂಗ್ಗಳಿಗೆ ಹೋಗಿ. ಅಲ್ಲಿ ಮೊಬೈಲ್ ಡೇಟಾವನ್ನು ಆಯ್ಕೆಮಾಡಿ. ಇದರ ನಂತರ ನೀವು ಯಾವ ಅಪ್ಲಿಕೇಶನ್‌ಗಳು ಎಷ್ಟು ಮೊಬೈಲ್ ಡೇಟಾವನ್ನು ಬಳಸುತ್ತಿವೆ ಎಂಬುದನ್ನು ನೋಡಬಹುದು. ಇದರಲ್ಲಿ ನಿಮ್ಮ ಮೊಬೈಲ್ ಹ್ಯಾಕ್ ಮಾಡುವಂತಹ ಅಪ್ಲಿಕೇಶನ್ ಇದೆಯಾ ಎಂಬುದನ್ನು ನೋಡಬಹುದು.