ಸ್ಟೈಲಿಶ್ ಲುಕ್ ಮತ್ತು ಆಕರ್ಷಕ ಫೀಚರ್ಸ್ ಅನ್ನು ಹೊಂದಿರುವ ಸ್ಮಾರ್ಟ್ವಾಚ್ ಇದೀಗ ಭಾರತದ ಮಾರುಕಟ್ಟೆಗೆ ಬಂದಿದ್ದು ಇಕಾಮರ್ಸ್ ವೆಬ್ಸೈಟ್ಗಳಲ್ಲಿ ಈಗಾಗಲೇ ಬಹಳಷ್ಟು ಬೇಡಿಕೆಯನ್ನು ಪಡೆದ ಸ್ಮಾರ್ಟ್ವಾಚ್ ಆಗಿದೆ. ಈ ಬಾರಿ ಭಾರತದಲ್ಲಿ ಡಿಝೋ ವಾಚ್ ಆರ್ ಟಾಕ್ ಗೊ (Dizo Watch R Talk Go) ಎಂಬ ಸ್ಮಾರ್ಟ್ವಾಚನ್ನು ಬಿಡುಗಡೆ ಮಾಡಿದೆ. ಇದೀಗ ವಿಶೇಷ ಫೀಚರ್ಸ್ನೊಂದಿಗೆ ಭರ್ಜರಿ ಆಫರ್ಸ್ನಲ್ಲಿ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ವಾಚ್ ಅನ್ನು ಖರೀದಿಸಬಹುದಾಗಿದೆ.
ಹೊಸ ಡಿಝೋ ಸ್ಮಾರ್ಟ್ವಾಚ್ ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ವಾಚ್ನಂತೆಯೇ ಕೆಲವೊಂದು ಫೀಚರ್ಸ್ ಅನ್ನು ಹೊಂದಿದೆ.ಇದು ಅಲ್ಯೂಮಿನಿಯಂ ರಿಮ್ನೊಂದಿಗೆ ರೌಂಡ್ ಡಯಲ್ ವಿನ್ಯಾಸದೊಂದಿಗೆ ಸ್ಟೈಲಿಶ್ ಆಗಿ ರಚಿಸಿದ್ದಾರೆ. ಹೋಮ್ ಬಟನ್ ಮತ್ತು ಸ್ಪೋರ್ಟ್ಸ್ ಮೋಡ್ ಈ ರೀತಿಯ ಎರಡು ಬಟನ್ಗಳನ್ನು ಇದು ಹೊಂದಿದೆ. ಜೊತೆಗೆ ಇದರಲ್ಲಿ ಟಚ್ ಮೂಲಕ ಸ್ಕ್ರೀನ್ ಕಂಟ್ರೋಲ್ ಮಾಡಬಹುದು.