Train Tips: ರೈಲು ಪ್ರಯಾಣದಲ್ಲಿ ಮೊಬೈಲ್​ ಜಾರಿ ಹೊರ ಬಿತ್ತಾ? ಟೆನ್ಶನ್ ಆಗ್ಬೇಡಿ, ಹೀಗ್​ ಮಾಡಿ ರಿರ್ಟನ್ ಸಿಗುತ್ತೆ!

ಸಾಮಾನ್ಯವಾಗಿ ಹೆಚ್ಚಿನ ಜನರು ದೂರ ಸಂಚಾರ ಮಾಡಬೇಕಾದರೆ ರೈಲನ್ನೇ ಅವಲಂಬಿಸಿದ್ದಾರೆ. ಹಾಗೆಯೇ ರೈಲು ಸಂಚಾರದ ವೇಳೆ ಮೊಬೈಲ್‌ ಕಳ್ಳತನವಾಗುವುದು ಅಥವಾ ಕೈನಿಂದ ಜಾರಿ ಮೊಬೈಲ್‌ ಕೆಳಗೆ ಬೀಳುವ ಅದೆಷ್ಟೋ ಘಟನೆಗಳನ್ನು ನಾವೆಲ್ಲರು ಗಮನಿಸಿರುತ್ತೇವೆ. ಆ ವೇಳೆ ಮೊಬೈಲ್‌ ಅನ್ನು ಮರು ಪಡೆದುಕೊಳ್ಳಬೇಕಾದರೆ ಏನು ಮಾಡ್ಬೇಕೆಂದು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.

First published:

  • 18

    Train Tips: ರೈಲು ಪ್ರಯಾಣದಲ್ಲಿ ಮೊಬೈಲ್​ ಜಾರಿ ಹೊರ ಬಿತ್ತಾ? ಟೆನ್ಶನ್ ಆಗ್ಬೇಡಿ, ಹೀಗ್​ ಮಾಡಿ ರಿರ್ಟನ್ ಸಿಗುತ್ತೆ!

    ಸಾಮಾನ್ಯವಾಗಿ ಹೆಚ್ಚಿನ ಜನರು ದೂರ ಸಂಚಾರ ಮಾಡಬೇಕಾದರೆ ರೈಲನ್ನೇ ಅವಲಂಬಿಸಿದ್ದಾರೆ. ಹಾಗೆಯೇ ರೈಲು ಸಂಚಾರದ ವೇಳೆ ಮೊಬೈಲ್‌ ಕಳ್ಳತನವಾಗುವುದು ಅಥವಾ ಕೈನಿಂದ ಜಾರಿ ಮೊಬೈಲ್‌ ಕೆಳಗೆ ಬೀಳುವ ಅದೆಷ್ಟೋ ಘಟನೆಗಳನ್ನು ನಾವೆಲ್ಲರು ಗಮನಿಸಿರುತ್ತೇವೆ. ಆ ವೇಳೆ ಮೊಬೈಲ್‌ ಅನ್ನು ಮರು ಪಡೆದುಕೊಳ್ಳಬೇಕಾದರೆ ಏನು ಮಾಡ್ಬೇಕೆಂದು ಗೊತ್ತಾ?

    MORE
    GALLERIES

  • 28

    Train Tips: ರೈಲು ಪ್ರಯಾಣದಲ್ಲಿ ಮೊಬೈಲ್​ ಜಾರಿ ಹೊರ ಬಿತ್ತಾ? ಟೆನ್ಶನ್ ಆಗ್ಬೇಡಿ, ಹೀಗ್​ ಮಾಡಿ ರಿರ್ಟನ್ ಸಿಗುತ್ತೆ!

    ಮೊಬೈಲ್​ ಬಿದ್ದಾಗ ಏನು ಮಾಡುವುದು ಎಂಬ ಪ್ರಶ್ನೆ ಹೆಚ್ಚಿನ ಜನರಲ್ಲಿ ಇರುತ್ತದೆ. ಯಾಕೆಂದರೆ ರೈಲಿನಲ್ಲಿ ಯಾರಿಗೇ ಆಗಲಿ ಕಿಟಿಕಿ ಪಕ್ಕದಲ್ಲಿ ಕೂರುವುದೆಂದರೆ ತುಂಬಾ ಇಷ್ಟ. ಒಂದು ವೇಳೆ ಕಿಟಕಿ ಸೀಟ್‌ ಸಿಗದಿದ್ರೆ ಬಾಗಿಲ ಬಳಿ ಬಂದು, ನಿಂತು ರೈಲು ಸಂಚಾರದ ಸುಂದರ ಅನುಭವವನ್ನು ಮೊಬೈಲ್‌ನಲ್ಲಿ ಹಾಡು ಕೇಳುತ್ತಲೋ ಅಥವಾ ವಿಡಿಯೋ ಮಾಡುತ್ತಲೋ ಇರುತ್ತದೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ತಪ್ಪಿ ಕೆಳಗೆ ಬೀಳುತ್ತದೆ. ಹಾಗಿದ್ರೆ ಈ ಸಂದರ್ಭದಲ್ಲಿ ಏನು ಮಾಡ್ಬೇಕು ಎಂದು ಇಲ್ಲಿದೆ ಮಾಹಿತಿ.

    MORE
    GALLERIES

  • 38

    Train Tips: ರೈಲು ಪ್ರಯಾಣದಲ್ಲಿ ಮೊಬೈಲ್​ ಜಾರಿ ಹೊರ ಬಿತ್ತಾ? ಟೆನ್ಶನ್ ಆಗ್ಬೇಡಿ, ಹೀಗ್​ ಮಾಡಿ ರಿರ್ಟನ್ ಸಿಗುತ್ತೆ!

    ಮೊಬೈಲ್​ ಬಿದ್ದಾಗ ಏನೆಲ್ಲಾ ಸಂಭವಿಸಬಹುದು: ಸಾಮಾನ್ಯವಾಗಿ ಯಾರೇ ಆದರೂ ಪೋನ್‌ ಅನ್ನು ಕಳೆದುಕೊಂಡರೆ ತುಂಬಾ ಕಷ್ಟ ಪಡುತ್ತಾರೆ. ಈ ಕಾರಣಕ್ಕೆ ಕೆಲವರು ತಕ್ಷಣವೇ ರೈಲಿನಿಂದ ಕೆಳಗಿಳಿಯಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಚೈನ್‌ ಎಳೆದು ರೈಲು ನಿಲ್ಲಿಸಲು ಯತ್ನಿಸುತ್ತಾರೆ. ಆದರೆ, ಚೈನ್‌ ಎಳೆದು ರೈಲು ನಿಲ್ಲಿಸುವುದರಿಂದ ಹಲವಾರು ಪ್ರಯಾಣಿಕರು ಸಾಕಷ್ಟು ತೊಂದರೆಗೆ ಒಳಗಾಗುತ್ತಾರೆ ಎಂಬುದು ನಿಮಗೆ ತಿಳಿದಿರಲಿ. ಹಾಗೆಯೇ ರೈಲು ಇಲಾಖೆಗೂ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ.

    MORE
    GALLERIES

  • 48

    Train Tips: ರೈಲು ಪ್ರಯಾಣದಲ್ಲಿ ಮೊಬೈಲ್​ ಜಾರಿ ಹೊರ ಬಿತ್ತಾ? ಟೆನ್ಶನ್ ಆಗ್ಬೇಡಿ, ಹೀಗ್​ ಮಾಡಿ ರಿರ್ಟನ್ ಸಿಗುತ್ತೆ!

    ಜೈಲು ಶಿಕ್ಷೆ: ಇನ್ನು ರೈಲಿನಿಂದ ಜಿಗಿದು ಕಳ್ಳನನ್ನು ಹಿಡಿಯಲು ಅಥವಾ ಫೋನ್‌ ಬಿದ್ದ ಜಾಗವನ್ನು ಹುಡುಕಲು ಹೋದರೆ, ಇದು ಭಾರತೀಯ ರೈಲ್ವೇ ಕಾಯಿದೆ 1989 ರ ಸೆಕ್ಷನ್ 141 ರ ಪ್ರಕಾರ ಅಪರಾಧವಾಗಿದೆ. ಈ ವೇಳೆ ನೀವು ಒಂದು ವರ್ಷದ ವರೆಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಥವಾ ದಂಡ ಪಾವತಿ ಮಾಡಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಎರಡೂ ಅನ್ವಯ ಆಗುತ್ತವೆ ಎಂಬುದು ನಿಮ್ಮ ಗಮನಕ್ಕೆ ಇರಲಿ.

    MORE
    GALLERIES

  • 58

    Train Tips: ರೈಲು ಪ್ರಯಾಣದಲ್ಲಿ ಮೊಬೈಲ್​ ಜಾರಿ ಹೊರ ಬಿತ್ತಾ? ಟೆನ್ಶನ್ ಆಗ್ಬೇಡಿ, ಹೀಗ್​ ಮಾಡಿ ರಿರ್ಟನ್ ಸಿಗುತ್ತೆ!

    ಫೋನ್​ ಕೆಳಗೆ ಬಿದ್ದಾಗ ಏನು ಮಾಡ್ಬೇಕು?: ಫೋನ್‌ ಕೆಳಗೆ ಬಿದ್ದರೆ ರೈಲು ಪ್ರಯಾಣಿಕರು ಆ ಸಮದರ್ಭದಲ್ಲಿ ಏನೆಲ್ಲಾ ಮಾಡ್ಬಹುದು ಎಂದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಆದರೆ ಈ ಸಂದರ್ಭದಲ್ಲಿ ಫೋನ್‌ ಬಿದ್ದ ಸ್ಥಳವನ್ನು ಮೊದಲಿಗೆ ಸರಿಯಾಗಿ ನೋಡಿಕೊಳ್ಳಬೇಕು. ಇದಕ್ಕಾಗಿ ಹಲವಾರು ಸುಲಭ ಮಾರ್ಗಗಳಿವೆ. ಅಂದರೆ, ರೈಲ್ವೇ ಕಂಬದ ಮೇಲೆ ಬರೆಯಲಾದ ನಂಬರ್, ಸೈಡ್‌ ಟ್ರ್ಯಾಕ್‌ ನಂಬರ್‌ ಅನ್ನು ನೋಟ್‌ ಮಾಡಿಕೊಳ್ಳಬೇಕು

    MORE
    GALLERIES

  • 68

    Train Tips: ರೈಲು ಪ್ರಯಾಣದಲ್ಲಿ ಮೊಬೈಲ್​ ಜಾರಿ ಹೊರ ಬಿತ್ತಾ? ಟೆನ್ಶನ್ ಆಗ್ಬೇಡಿ, ಹೀಗ್​ ಮಾಡಿ ರಿರ್ಟನ್ ಸಿಗುತ್ತೆ!

    ನಂತರ ನಿಮ್ಮ ಸಹ ಪ್ರಯಾಣಿಕರ ಬಳಿ ಹೋಗಿ ಅವರ ಫೋನ್‌ ಪಡೆದು ರೈಲ್ವೆ ರಕ್ಷಣಾ ಪಡೆಯ ಸಂಖ್ಯೆಯಾದ 182 ಗೆ ಕರೆ ಮಾಡಿ ಮಾಹಿತಿ ನೀಡಿ. ಈ ವೇಳೆ ಯಾವ ಕಂಬದ ಅಥವಾ ಟ್ರ್ಯಾಕ್ ಸಂಖ್ಯೆಯ ಸ್ಥಳದಲ್ಲಿ ಮೊಬೈಲ್‌ ಬಿದ್ದಿದೆ ಎಂಬುದನ್ನು ಅವರಿಗೆ ತಿಳಿಸಬೇಕು. ಈ ವೇಳೆ ನೀವು ನಿಮ್ಮ ಫೋನ್‌ನ ಮಾದರಿ, ಬ್ರ್ಯಾಂಡ್, ಸ್ಥಳ, ಸಂಖ್ಯೆ, ಫೋನ್ ಬಿದ್ದ ಸಮಯ ಮತ್ತು ಹತ್ತಿರದ ರೈಲ್vE ನಿಲ್ದಾಣದಂತಹ ಇತರ ವಿವರಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದರೆ ಫೋನ್‌ ಸುಲಭವಾಗಿ ಮರುಪಡೆಯಬಹುದು.

    MORE
    GALLERIES

  • 78

    Train Tips: ರೈಲು ಪ್ರಯಾಣದಲ್ಲಿ ಮೊಬೈಲ್​ ಜಾರಿ ಹೊರ ಬಿತ್ತಾ? ಟೆನ್ಶನ್ ಆಗ್ಬೇಡಿ, ಹೀಗ್​ ಮಾಡಿ ರಿರ್ಟನ್ ಸಿಗುತ್ತೆ!

    ಈ ಸಂದರ್ಭದಲ್ಲಿ ಏನು ಮಾಡ್ಬಾರ್ದು?: ಒಂದು ವೇಳೆ ಫೋನ್‌ ನಿಮ್ಮ ಕೈಯಿಂದ ಜಾರಿ ಬಿದ್ದರೆ ಯಾವುದೇ ಕಾರಣಕ್ಕೂ ಉದ್ವೇಗ, ಆವೇಶಕ್ಕೆ ಒಳಗಾಗಬಾರದು. ಜೊತೆಗೆ ಚೈನ್‌ ಎಳೆಯುವ ಕೆಲಸಕ್ಕೂ ಮುಂದಾಗಬಾರದು. ಯಾಕೆಂದರೆ ಮೊದಲೇ ತಿಳಿಸಿದಂತೆ ಸಾವಿರಾರು ಪ್ರಯಾಣಿಕರು ಅಗತ್ಯ ಕೆಲಸ ಅಥವಾ ಇನ್ಯಾವುದೋ ಮುಖ್ಯ ವಿಷಯಕ್ಕೆ ಸಂಚಾರ ಮಾಡುತ್ತಿರುತ್ತಾರೆ. ಈ ರೀತಿ ಮಾಡುವುದರಿಂದ ಅವರಿಗೆ ತೊಂದರೆಯಾಗುವ ಜೊತೆಗೆ, ಸಮಯವೂ ವ್ಯರ್ಥವಾಗುತ್ತದೆ.

    MORE
    GALLERIES

  • 88

    Train Tips: ರೈಲು ಪ್ರಯಾಣದಲ್ಲಿ ಮೊಬೈಲ್​ ಜಾರಿ ಹೊರ ಬಿತ್ತಾ? ಟೆನ್ಶನ್ ಆಗ್ಬೇಡಿ, ಹೀಗ್​ ಮಾಡಿ ರಿರ್ಟನ್ ಸಿಗುತ್ತೆ!

    ಈ ನಂಬರ್​ ಅನ್ನೂ ಬಳಸಿ: ಹಾಗೆಯೇ ಸರ್ಕಾರಿ ರೈಲ್ಬೇ ಪೊಲೀಸ್‌ ಸಹಾಯವಾಣಿ 1512 ಗೆ ಕರೆ ಮಾಡುವ ಮೂಲಕ ಇನ್ನಷ್ಟು ಸಹಾಯವನ್ನು ಪಡೆದುಕೊಳ್ಳಬಹುದು. ಅಂದರೆ ನಿಮ್ಮ ಫೋನ್‌ ಅನ್ನು ಕಳ್ಳರು ಕಿತ್ತುಕೊಂಡು ಹೋದರೆ ಈ ಸಂಖ್ಯೆ ಉಪಯೋಗಕ್ಕೆ ಬರುತ್ತದೆ. ಜೊತೆಗೆ ಮತ್ತೊಂದು ಸಂಖ್ಯೆಯಾದ ರೈಲ್ವೇ ಪ್ಯಾಸೆಂಜರ್ ಹೆಲ್ಪ್ ಲೈನ್ ಸಂಖ್ಯೆ 138 ಗೂ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿ ಹೆಚ್ಚಿನ ಸಹಾಯವನ್ನು ನೀವು ಪಡೆದುಕೊಳ್ಳಬಹುದಾಗಿದೆ.

    MORE
    GALLERIES