ವಾಟ್ಸ್ಆ್ಯಪ್ ಬಳಸುತ್ತಿದ್ದೀರಾ? ಗ್ರೂಪ್ ಅಡ್ಮಿನ್ ಆಗಿದ್ದೀರಾ? ಹಾಗಿದ್ದರೆ ಕೊಂಚ ಎಚ್ಚರ. ಈ ತಪ್ಪುಗಳನ್ನು ಮಾಡಿ ಜೈಲು ಸೇರಬೇಕಾದ ಪರಿಸ್ಥೀತಿ ಎದುರಾಗಬಹುದು. ಹೌದು. ಗ್ರೂಪ್ನಲ್ಲಿರುವವರು ದೇಶವಿರೋಧಿ ವಿಷಯಗಳನ್ನು ಶೇರ್ ಮಾಡದಂತೆ ಗ್ರೂಪ್ ಅಡ್ಮಿನ್ಗಳು ಎಚ್ಚರವಹಿಸಬೇಕು. ಒಂದು ವೇಳೆ ಈ ಸಂಗತಿ ಬೆಳಕಿಗೆ ಬಂದರೆ ಇದರಿಂದಾಗಿ ಗ್ರೂಪ್ ಅಡ್ಮಿನ್ ಕೂಡ ಜೈಲು ಪಾಲಾಗಬಹುದು. ಇದೇ ವಿಚಾರವಾಗಿ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ವ್ಯಕ್ತಿಯೋರ್ವನನ್ನು (ಗ್ರೂಪ್ ಅಡ್ಮಿನ್) ಬಂಧಿಸಲಾಗಿದೆ.