ಬ್ಯಾಟರಿ ಬಿಸಿಯಾಗುವುದು ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಒಂದು ಕಾರಣವಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿ ಒಂದೇ ಸಮಯದಲ್ಲಿ ಹಲವಾರು ಬಳಸಿದರೆ ಮೊಬೈಲ್ ಬಿಸಿಯಾಗುತ್ತದೆ. ಹೆಚ್ಚು ಹೊತ್ತು ಆಟವಾಡಿದರೂ ಫೋನ್ ಬಿಸಿಯಾಗುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಸೆಟ್ಟಿಂಗ್‌ಗಳಲ್ಲಿ ಬ್ಯಾಟರಿ ವಿಭಾಗವನ್ನು ತೆರೆಯಿರಿ ಮತ್ತು ನಿಮ್ಮ ಬ್ಯಾಟರಿಯನ್ನು ಯಾವ ಅಪ್ಲಿಕೇಶನ್‌ಗಳು ಹೆಚ್ಚು ಬಳಸುತ್ತಿವೆ ಎಂಬುದನ್ನು ನೋಡಿ. ನಿಮಗೆ ಅಗತ್ಯವಿಲ್ಲದ ಅಪ್ಲಿಕೇಶನ್‌ಗಳು ಬ್ಯಾಟರಿಯನ್ನು ಬಳಸುತ್ತಿವೆಯೇ ಎಂದು ಪರಿಶೀಲಿಸಿ ಮತ್ತು ಅವುಗಳನ್ನು ಡಿಲೀಟ್ ಮಾಡಿ.
ನಿಮ್ಮ ಸ್ಮಾರ್ಟ್ ಫೋನ್ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಿ. ಹೆಚ್ಚು ಹೊತ್ತು ಮೊಬೈಲ್ ಬಳಸುವಾಗ ಫೋನ್ ಬಿಸಿಯಾಗುತ್ತಿದ್ದರೆ ಸ್ವಲ್ಪ ಹೊತ್ತು ಬಳಸುವುದನ್ನು ನಿಲ್ಲಿಸುವುದು ಉತ್ತಮ. ಈ ರೀತಿ ಬಿಸಿಯಾಗುವ ಬ್ಯಾಟರಿಗಳು ತುಂಬಾ ಅಪಾಯಕಾರಿ. ಇನ್ನು ಇದೇ ರೀತಿ ನಿಮ್ಮ ಬ್ಯಾಟರಿ ಆಗಾಗ ಬಿಸಿಯಾಗುತ್ತಿದ್ದರೆ ರೀಟೇಲ್ ಶಾಪ್ಗೆ ಹೋಗಿ ನಿಮ್ಮ ಮೊಬೈಲ್ ಅನ್ನು ಒಮ್ಮೆ ಸರ್ವೀಸ್ ಮಾಡಿಸಿ.
ಬ್ಯಾಟರಿ 20 ಶೇಕಡಾಕ್ಕಿಂತ ಕಡಿಮೆಯಾದಾಗ ಚಾರ್ಜ್ ಮಾಡುವ ಅಭ್ಯಾಸ ಅನೇಕರಿಗೆ ಇರುತ್ತದೆ. 70 ಪರ್ಸೆಂಟ್ ಕಡಿತದ ನಂತರ ಅಂದರೆ ನಿಮ್ಮ ಮೊಬೈಲ್ 30 ಶೇಕಡಾಗೆ ತಲುಪಿದಾಗ ಚಾರ್ಜ್ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ. ಪದೇ ಪದೇ ಚಾರ್ಜ್ ಮಾಡುವುದರಿಂದ ಬ್ಯಾಟರಿ ಬೇಗ ಹಾಳಾಗುತ್ತದೆ. ನಿಮ್ಮ ಫೋನ್ ಎಂದಾದರೂ ಕೆಳಗೆ ಬಿದ್ದರೆ, ಬ್ಯಾಟರಿ ಹಾನಿಯಾಗಿದೆಯೇ ಎಂದು ಚೆಕ್ ಮಾಡಿಕೊಳ್ಳಬೇಕು.