ಇತ್ತೀಚೆಗೆ ಇ-ಕಾಮರ್ಸ್ ದೈತ್ಯ ಅಮೆಜಾನ್ ಆಫರ್ಗಳಿಂದ ಧೂಳೆಬ್ಬಿಸುತ್ತಿದೆ. ನಾಳೆಯಿಂದ ಅಂದರೆ ಜನವರಿ 15 ರಿಂದ 20ರವರೆಗೆ ಗ್ರೇಟ್ ರಿಪಬ್ಲಿಕ್ ಡೇಸ್ ಸೇಲ್ ಘೋಷಿಸಿರುವ ಅಮೆಜಾನ್, ಇಂದಿನಿಂದ ತನ್ನ ಪ್ರೈಮ್ ಸದಸ್ಯರಿಗಾಗಿ ಸೇಲ್ ಆರಂಭಿಸಿದೆ. ಇದೀಗ ಹಲವು ಸಮಯಗಳ ನಂತರ ಅಮೆಜಾನ್ ಈ ಸೇಲ್ ಅನ್ನು ಪ್ರಾರಂಬಿಸಿದ್ದರಿಂದ ಈಗಲೇ ಪ್ರೊಡಕ್ಟ್ಗಳನ್ನು ಖರೀದಿ ಮಾಡಲು ಆರಂಭಿಸಿದ್ದಾರೆ.
ನಾವು ಈ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ನ ಫೀಚರ್ಸ್ಗಳ ಬಗ್ಗೆ ಹೇಳುವುದಾದರೆ, ಇದು 8ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರುತ್ತದೆ. ಇನ್ನು ಈ ಸ್ಟೋರೇಜ್ ಸಾಮರ್ಥ್ಯವನ್ನು 1ಟಿಬಿ ವರೆಗೆ ವಿಸ್ತರಿಸುವ ಅವಕಾಶವಿದೆ. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 11.0 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಈ ಫೋನ್ 4500 mAh ನ ದೊಡ್ಡ ಬ್ಯಾಟರಿಯನ್ನು ಹೊಂದಿದೆ.