ಸ್ಮಾರ್ಟ್ಫೋನಿನಲ್ಲಿ ಸಾಕಷ್ಟು ಫೋಟೋಗಳನ್ನು ಸ್ಟೋರ್ ಮಾಡಿ ಇಡಬಹುದಾಗಿದೆ. ಅದರಲ್ಲು ಬೇಕೆನಿಸುವ ಫೋಟೋಗಳನ್ನು ಸ್ಮಾರ್ಟ್ಫೋನಿನ ಇಟ್ಟುಕೊಳ್ಳುತ್ತೇವೆ. ಕೆಲವೊಮ್ಮೆ ಡಿಲೀಟ್ ಮಾಡುತ್ತೇವೆ.
2/ 8
ಆದರೆ ಗೊತ್ತಿದ್ದು, ಗೊತ್ತಿಲ್ಲದೆಯೇ ಫೋಟೋಗಳು ಸ್ಮಾರ್ಟ್ಫೋನಿನಿಂದ ಡಿಲೀಟ್ ಆಗುವ ಸಂದರ್ಭಗಳು ಎದುರಾಗುತ್ತವೆ. ಹೀಗಾದಾಗ ಕೆಲವರು ಚಿಂತಿಸುತ್ತಾ ಮತ್ತೆ ಫೋಟೋವನ್ನು ರಿಕವರಿ ಮಾಡುವುದು ಹೇಗೆ ಎಂದು ಆಲೋಚಿಸುತ್ತಿರುತ್ತಾರೆ.
3/ 8
ಮುಖ್ಯವಾದ ಫೋಟೋ ಡಿಲೀಟ್ ಆಗಾದ ಆ ಫೋಟೋವನ್ನು ಮತ್ತೆ ರಿಕವರಿ ಮಾಡಲು ಮುಂದಾಗುವುದು ಸಾಮಾನ್ಯ. ಕೆಲವರು ಆ್ಯಪ್ಗಳನ್ನು ಬಳಸಿ ಫೋಟೋವನ್ನು ಮತ್ತೆ ಮರಳಿ ಪಡೆಯುತ್ತಾರೆ.
4/ 8
ಇನ್ನು ಕೆಲವರಿಗೆ ಡಿಲೀಟ್ ಆಗಿರುವ ಫೋಟೋವನ್ನು ಮತ್ತೆ ಹಿಂಪಡೆಯುವುದು ಹೇಗೆ ಎಂಬುದು ಗೊತ್ತಿರುವುದೇ ಇಲ್ಲ. ಹಾಗಾಗಿ ಅಂತವರಿಗಾಗಿ ಸುಲಭ ವಿಧಾನವನ್ನು ಇಲ್ಲಿ ಹೇಳಲಾಗಿದೆ.
5/ 8
ಸ್ಮಾರ್ಟ್ಫೋನಿನಿಂದ ಡಿಲೀಟ್ ಆದ ಫೋಟೋ ಹಿಂಪಡೆಯಲು ಮೊದಲು ಪ್ಲೇ ಸ್ಟೋರ್ಗೆ ತೆರಳಬೇಕು. ನಂತರ ಸರ್ಚ್ ಬಾರ್ ಕ್ಲಿಕ್ ಮಾಡಬೇಕು.
6/ 8
ಆ ಬಳಿಕ ಡಿಲೀಟ್ ಫೋಟೋ ರಿಕವರಿ- ರಿಸ್ಟೋರ್ ಡಿಲೀಟ್ ಫೋಟೋ (Deleted Photo Recovery - Restore Deleted Photos ) ಎಂದು ಟೈಪ್ ಮಾಡಿ ಸರ್ಚ್ ಮಾಡಿದಾಗ ಆ್ಯಪ್ 2.9 ಎಂಬಿ ಗಾತ್ರದ ಆ್ಯಪ್ ಕಾಣಸಿಗುತ್ತದೆ.
7/ 8
ಈ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿಕೊಂಡು ಸ್ಮಾರ್ಟ್ಫೋನ್ನಲ್ಲಿ ಬಳಸಬೇಕು. ಪ್ರಾರಂಭದಲ್ಲಿ ಸ್ಟಾರ್ಟ್ ರ್ಬೇಸಿಕ್ ಫೋಟೋ ಸ್ಕ್ಯಾನ್ ಎಂಬ ಆಯ್ಕೆ ಕಾಣಸಿಗುತ್ತದೆ ಅದನ್ನು ಕ್ಲಿಕ್ ಮಾಡಬೇಕು.
8/ 8
ಕ್ಲಿಕ್ ಮಾಡಿದ ನಂತರ ಕೆಳಭಾಗದಲ್ಲಿ ರಿಕವರಿ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಡಿಲೀಟ್ ಆಗಿರುವ ಫೋಟೋವನ್ನು ಮತ್ತೆ ಪಡೆಯಬಹುದಾಗಿದೆ.