ಇತ್ತೀಚಿನ ದಿನಗಳಲ್ಲಿ 6GB ಮತ್ತು 8GB RAMಗಳ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿದ್ದು, ಇಂತಹ ಮೊಬೈಲ್ಗಳು ವೇಗದಿಂದ ಕಾರ್ಯ ನಿರ್ವಹಿಸುತ್ತದೆ. ಕಡಿಮೆ RAM ಇದ್ದರೆ ಮೊಬೈಲ್ನಲ್ಲಿ ಹ್ಯಾಂಗ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೂ ಕೆಲ ಫೋನ್ಗಳು ನಿಧಾನಗೊಳ್ಳಲು ಬಳಸುವ ಕೆಲ ಅಪ್ಲಿಕೇಶನ್ಗಳು ಕೂಡ ಕಾರಣವಾಗಿರುತ್ತದೆ. ಇಂತಹ ಆ್ಯಪ್ಗಳನ್ನು ಅನ್ ಇನ್ಸ್ಟಾಲ್ ಮಾಡುವುದರಿಂದ ಕಾರ್ಯಕ್ಷಮತೆಯ ವೇಗ ಮತ್ತು ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಇತ್ತೀಚಿನ ವರದಿಯೊಂದರ ಪ್ರಕಾರ ಫೇಸ್ಬುಕ್, ಇನ್ಸ್ಟಾಗ್ರಾಂ ಮತ್ತು ನೆಟ್ಫ್ಲಿಕ್ಸ್ ಬಳಕೆಯಿಂದ ಸ್ಮಾರ್ಟ್ಫೋನ್ಗಳ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ. ಹಾಗೆಯೇ ಈ ಆ್ಯಪ್ಗಳು ಅತಿ ಹೆಚ್ಚಿನ ಸ್ಟೋರೇಜ್ನ್ನು ಬಳಸುತ್ತದೆ ಎಂದು ತಿಳಿಸಲಾಗಿದೆ. ಇದನ್ನು ದಿನಂಪ್ರತಿ ಪರಿಶೀಲಿಸುವ ಮೂಲಕ RAM ವೇಗವನ್ನು ಹೆಚ್ಚಿಸಿ, ಬ್ಯಾಟರಿ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬಹುದು.
ಇನ್ನು Memory ಎಂಬ ವಿಭಾಗವನ್ನು ಆಯ್ಕೆ ಮಾಡಿದರೆ, memory used by apps ಆಪ್ಷನ್ ಸಿಗುತ್ತದೆ. ಅದನ್ನು ಕ್ಲಿಕ್ ಮಾಡಿದರೆ ನಿಮಗೆ ಆ್ಯಪ್ ಬಳಸಿರುವ RAM ಮಾಹಿತಿ ಲಭ್ಯವಾಗುತ್ತದೆ. ಇಲ್ಲಿ ಒಂದೊಂದು ಆ್ಯಪ್ನ್ನು ಕ್ಲಿಕ್ ಮಾಡುವ ಮೂಲಕ ಕೂಡ ಮಾಹಿತಿ ಪಡೆದುಕೊಳ್ಳಬಹುದು. ಅಲ್ಲದೆ BAttery ಸೆಟ್ಟಿಂಗ್ಸ್ಗೆ ಹೋದರೆ ಅತಿ ಹೆಚ್ಚು ಬ್ಯಾಟರಿ ಬಳಸಿದ ಈ ಆ್ಯಪ್ಗಳ ಸ್ಪಷ್ಟ ಮಾಹಿತಿ ದೊರಕುತ್ತದೆ.