Digital Voter ID: ಕೇವಲ ಐದೇ ನಿಮಿಷದಲ್ಲಿ ಡಿಜಿಟಲ್ ವೋಟರ್ ಐಡಿ ಪಡೆಯಲು ಹೀಗೆ ಮಾಡಿ

ಚುನಾವಣೆ ಹತ್ತಿರ ಬರುತ್ತಿದೆ. ಈ ಸಮಯದಲ್ಲಿ ನಿಮ್ಮ ಬಳಿ ಅಧಿಕೃತ ವೋಟರ್ ಐಡಿ ಇರುವುದು ತುಂಬಾನೇ ಮುಖ್ಯವಾಗುತ್ತದೆ. ಈಗ ಸುಲಭವಾಗಿ ನಿಮ್ಮ ವೋಟರ್​ ಐಡಿಯನ್ನು ಮೊಬೈಲ್​ನಲ್ಲಿ ಡೌನ್​ಲೋಡ್ ಮಾಡಿಕೊಳ್ಳಬಹುದು. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

First published:

  • 18

    Digital Voter ID: ಕೇವಲ ಐದೇ ನಿಮಿಷದಲ್ಲಿ ಡಿಜಿಟಲ್ ವೋಟರ್ ಐಡಿ ಪಡೆಯಲು ಹೀಗೆ ಮಾಡಿ

    ಇಂದು ಕೈಯಲ್ಲಿ ಮೊಬೈಲ್​ ಇದ್ದರೆ ಎಲ್ಲವೂ ಅದರಲ್ಲೇ ಇರುತ್ತದೆ. ಮೊಬೈಲ್​ನಲ್ಲಿ ಡಿಜಿಲಾಕರ್​​ನಂತಹ ಆ್ಯಪ್​​ ಡೌನ್​ಲೋಡ್​ ಮಾಡಿಕೊಂಡರೆ, ಅಲ್ಲಿ ಎಲ್ಲಾ ಮುಖ್ಯವಾದ ದಾಖಲೆಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಸ್ಟಡೀಸ್ ಸರ್ಟಿಫಿಕೇಟ್ಸ್​, ಇನ್ಶೂರೆನ್ಸ್​ ಪಾಲಿಸಿಗಳು, ವೆಹಿಕಲ್​ಗೆ ಸಂಬಂಧಪಟ್ಟ ದಾಖಲೆಗಳು ಹೀಗೆ ಹಲವು ಮುಖ್ಯ ಡಾಕ್ಯುಮೆಂಟ್​​ಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು.

    MORE
    GALLERIES

  • 28

    Digital Voter ID: ಕೇವಲ ಐದೇ ನಿಮಿಷದಲ್ಲಿ ಡಿಜಿಟಲ್ ವೋಟರ್ ಐಡಿ ಪಡೆಯಲು ಹೀಗೆ ಮಾಡಿ

    ಅದರಂತೆ ಈಗ ಎಲೆಕ್ಷನ್​ ಟೈಂ ಇರುವುದರಿಂದ ಸರಿಯಾದ ಅಧಿಕೃತ ವೋಟರ್​ ಐಡಿಯನ್ನು ನಮ್ಮ ಬಳಿ ಇಟ್ಟುಕೊಳ್ಳವುದು ತುಂಬಾ ಮುಖ್ಯ. ಈಗ ಮೊಬೈಲ್​ನಲ್ಲಿ ಕೇವಲ 5 ನಿಮಿಷದಲ್ಲಿ ಡಿಜಿಟಲ್ ವೋಟರ್ ಐಡಿಯನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ನೀವು ಮಾಡಬೇಕಿರೋದು ಇಷ್ಟೇ. ಮೊದಲಿಗೆ ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್​ಸೈಟ್​ https://eci.gov.in/e-epic/ ಗೆ ಭೇಟಿ ನೀಡಿ.

    MORE
    GALLERIES

  • 38

    Digital Voter ID: ಕೇವಲ ಐದೇ ನಿಮಿಷದಲ್ಲಿ ಡಿಜಿಟಲ್ ವೋಟರ್ ಐಡಿ ಪಡೆಯಲು ಹೀಗೆ ಮಾಡಿ

    ಹೊಸ ಮತದಾರರ ಹೆಸರನ್ನು ನೋಂದಾಯಿಸಲು ಈ ಪೋರ್ಟಲ್​​ನ್ನು ಬಳಸಬಹುದು. ಚುನಾವಣಾ ID ಯಲ್ಲಿನ ವಿಳಾಸವನ್ನು ಅಪ್​ಡೇಟ್ ಮಾಡಲು/ ಬದಲಾಯಿಸಲು ಮತ್ತು ಡಿಜಿಟಲ್ ವೋಟರ್ ಐಡಿಯನ್ನು ಡೌನ್‌ಲೋಡ್ ಮಾಡಲು ಈ ಪೋರ್ಟಲ್​ಗೆ ಭೇಡಿ ನೀಡಬಹುದು. ಇದನ್ನು e-EPIC ಎಂದೂ ಸಹ ಕರೆಯುತ್ತಾರೆ. ಇದು PDF ಫಾರ್ಮ್ಯಾಟ್​ನಲ್ಲಿರುತ್ತದೆ ಮತ್ತು ಡಿಜಿಲಾಕರ್‌ನಲ್ಲಿ ಸಂಗ್ರಹಿಸಬಹುದು.

    MORE
    GALLERIES

  • 48

    Digital Voter ID: ಕೇವಲ ಐದೇ ನಿಮಿಷದಲ್ಲಿ ಡಿಜಿಟಲ್ ವೋಟರ್ ಐಡಿ ಪಡೆಯಲು ಹೀಗೆ ಮಾಡಿ

    ನೀವು ಇದೇ ಮೊದಲು ಈ ಪೋರ್ಟಲ್​ ಬಳಸುತ್ತಿದ್ದರೆ, ಫೋನ್ ನಂಬರ್​ ಮೂಲಕ ರಿಜಿಸ್ಟರ್ ಆಗಿ. ಒಮ್ಮೆ ನೀವು ಪೋರ್ಟಲ್‌ಗೆ ಎಂಟ್ರಿ ಕೊಟ್ಟಾಗ, ಡೌನ್‌ಲೋಡ್ ಇ-ಎಪಿಕ್ (Download e-EPIC) ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ EPIC ಸಂಖ್ಯೆಯನ್ನು ಅಲ್ಲಿ ನಮೂದಿಸಿ, ಇದು ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ಪ್ರಿಂಟ್ ಆಗಿರುವ 10-ಅಂಕಿಯ ವಿಶಿಷ್ಟ ID ಆಗಿದೆ.

    MORE
    GALLERIES

  • 58

    Digital Voter ID: ಕೇವಲ ಐದೇ ನಿಮಿಷದಲ್ಲಿ ಡಿಜಿಟಲ್ ವೋಟರ್ ಐಡಿ ಪಡೆಯಲು ಹೀಗೆ ಮಾಡಿ

    ಇ-ಎಪಿಕ್ ಅಥವಾ ಡಿಜಿಟಲ್ ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಲು, ನಿಮ್ಮ ಮೊಬೈಲ್​ ನಂಬರ್ ಕಡ್ಡಾಯವಾಗಿ ನಿಮ್ಮ ವೋಟರ್​​ ಐಡಿಗೆ ಲಿಂಕ್ ಆಗಿರಲೇಬೇಕು. ಆಗಿಲ್ಲವಾದರೆ, ಮೊಬೈಲ್ ನಂಬರ್​ ಲಿಂಕ್​ನ್ನೂ ಅದೇ ವೆಬ್‌ಸೈಟ್‌ನಲ್ಲಿ ಮಾಡಬಹುದು.

    MORE
    GALLERIES

  • 68

    Digital Voter ID: ಕೇವಲ ಐದೇ ನಿಮಿಷದಲ್ಲಿ ಡಿಜಿಟಲ್ ವೋಟರ್ ಐಡಿ ಪಡೆಯಲು ಹೀಗೆ ಮಾಡಿ

    ನಿಮ್ಮ ಮೊಬೈಲ್ ನಂಬರ್​ನ್ನು ವೋಟರ್ ಐಡಿಗೆ ಲಿಂಕ್ ಮಾಡಲು, ಭಾರತೀಯ ಚುನಾವಣಾ ಆಯೋಗದ ಪೋರ್ಟಲ್‌ನ ಮುಖಪುಟಕ್ಕೆ (https://www.nvsp.in/) ಹೋಗಿ. ಹೋಂ ಪೇಜ್​ನಲ್ಲಿ ಕಾಣುವ ಫಾರ್ಮ್‌ಗಳ ಮೇಲೆ ಕ್ಲಿಕ್ ಮಾಡಿ. ಮುಂದೆ, ಫಾರ್ಮ್ 8 ಅನ್ನು ಕ್ಲಿಕ್ ಮಾಡಿ ಮತ್ತು ನೀವು ಕುಟುಂಬದ ಸದಸ್ಯರ ವೋಟರ್ ಐಡಿಯನ್ನು ಡೌನ್‌ಲೋಡ್ ಮಾಡಬೇಕೆಂದರೆ ಸೆಲ್ಪ್ / ಫ್ಯಾಮಿಲಿ ಆಯ್ಕೆಯನ್ನು ಆರಿಸಿ.

    MORE
    GALLERIES

  • 78

    Digital Voter ID: ಕೇವಲ ಐದೇ ನಿಮಿಷದಲ್ಲಿ ಡಿಜಿಟಲ್ ವೋಟರ್ ಐಡಿ ಪಡೆಯಲು ಹೀಗೆ ಮಾಡಿ

    ಬಳಿಕ ತಿದ್ದುಪಡಿಗೆಂದೇ ಒಂದು ಆಯ್ಕೆ ಇರುತ್ತದೆ. ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ 'The Correction of Entries' ಮೇಲೆ ಕ್ಲಿಕ್ ಮಾಡಿ. ನಿಮ್ಮ ವೋಟರ್​ ಐಡಿಗೆ ಲಿಂಕ್ ಮಾಡಬೇಕೆಂದಿರುವ ಮೊಬೈಲ್​ ನಂಬರ್​ನ್ನು ಅಲ್ಲಿ ನಮೂದಿಸಿ. ನಿಮ್ಮ ವಿವರಗಳನ್ನು ಪರಿಶೀಲಿಸಲು ಮತ್ತು ನಿಮ್ಮ ವೋಟರ್​ ಐಡಿಯೊಂದಿಗೆ ಫೋನ್ ನಂಬರ್​ನ್ನು ಲಿಂಕ್ ಮಾಡಲು ಪೋರ್ಟಲ್ ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ.

    MORE
    GALLERIES

  • 88

    Digital Voter ID: ಕೇವಲ ಐದೇ ನಿಮಿಷದಲ್ಲಿ ಡಿಜಿಟಲ್ ವೋಟರ್ ಐಡಿ ಪಡೆಯಲು ಹೀಗೆ ಮಾಡಿ

    ವೋಟರ್ ಐಡಿಗೆ ಮೊಬೈಲ್​ ನಮಬರ್ ಲಿಂಕ್ ಮಾಡಿದ ನಂತರ, ವೆಬ್‌ಸೈಟ್ https://eci.gov.in/e-epic/ ಗೆ ಹೋಗಿ ಮತ್ತು EPIC ಸಂಖ್ಯೆಯ ವಿವರಗಳನ್ನು ನಮೂದಿಸಿ & ಪರಿಶೀಲಿಸಿ. ಬಳಿಕ OTP ಬಳಸಿಕೊಂಡು ನಿಮ್ಮ ಮೊಬೈಲ್​ ನಂಬರ್​ನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ. ನಿಮ್ಮ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಡಿಜಿಟಲ್ ವೋಟರ್ ಐಡಿಯನ್ನು ಡೌನ್‌ಲೋಡ್ ಮಾಡಲು ಡೌನ್‌ಲೋಡ್ e-EPIC ಅನ್ನು ಕ್ಲಿಕ್ ಮಾಡಿ. ಫಾರ್ಮ್ 8 ಅನ್ನು ಭರ್ತಿ ಮಾಡುವ ಮೂಲಕ ನೀವು ಅದೇ ವೆಬ್‌ಸೈಟ್‌ನಿಂದ ನಕಲಿ ವೋಟರ್ ಐಡಿಯನ್ನು ಪಡೆಯಬಹುದು, ಅದನ್ನು ನಿಮ್ಮ ವೋಟರ್​ ಐಡಿಯಲ್ಲಿ ಇರುವ ವಿಳಾಸಕ್ಕೆ ತಲುಪಿಸಲಾಗುತ್ತದೆ.

    MORE
    GALLERIES