ಇಂದು ವೇಗವಾಗಿ, ಸುಖಕರವಾಗಿ ಪ್ರಯಾಣ ಬೆಳೆಸಬಹುದಾಗಿದೆ. ಅದಕ್ಕಾಗಿಯೇ ಹೊಸ ತಂತ್ರಜ್ನಾನವನ್ನು ಅಳವಡಿಸಿಕೊಂಡಿರುವ, ಆಕಾಶದಲ್ಲಿ ಸ್ವಚ್ಚಂದವಾಹಿ ಹಾರಾಡುವ ವಿಮಾನಗಳಿವೆ.
2/ 8
ಬೆಂಗಳೂರಿನಲ್ಲಿ ಕುಳಿತರೆ ಕೆಲವೇ ಗಂಟೆಗಳಲ್ಲಿ ಮಂಗಳೂರು ತಲುಪಬಹುದಾಗಿದೆ. ಅಂತಹ ವ್ಯವಸ್ಥೆ ಅಧುನಿಕ ಜಗತ್ತಿನಲ್ಲಿದೆ. ದಿನಗಟ್ಟಲೆ ಪ್ರಯಾಣಿಸಬೇಕಾಗಿದ್ದ ಸ್ಥಳವನ್ನು ಒಂದೇ ದಿನದಲ್ಲಿ ತಲುಪಬಹುದಾಗಿದೆ. ವಿದೇಶಕ್ಕೂ ಹೋಗಿ ಬರಬಹುದಾಗಿದೆ.
3/ 8
ಹಾಗಾಗಿ ವಿಮಾನದಿಂದಾಗಿ ಆಗಸದ ಮೂಲಕ ಬೇರೆ ಬೇರೆ ಊರುಗಳನ್ನು ನೋಡಬಹುದಾಗಿದೆ. ಅಂದಹಾಗೆಯೇ ಇಂಧನವಿಲ್ಲದೆ ವಾಹನ ಚಲಿಸುವುದಿಲ್ಲ ಎಂಬುದು ಸಾಮಾನ್ಯನಿಗೂ ಗೊತ್ತು. ಬೈಕ್ ಕಾರುಗಳಿಗೆ ಪೆಟ್ರೋಲ್, ಡಿಸೇಲ್ ತುಂಬಿಸಿದರೆ ಮಾತ್ರ ಚಲಿಸುತ್ತದೆ. ಅದರಂತೆ ವಿಮಾನ ಕೂಡ ಇಂಧನ ಮೂಲಕ ಚಲಿಸುತ್ತದೆ.
4/ 8
ಸಾಮಾನ್ಯವಾಗಿ ಬೈಕ್ ಅಥವಾ ಕಾರು ಕೊಂಡಾಗ ಅನೇಕರು ನಿಮ್ಮ ವಾಹನ ಎಷ್ಟು ಮೈಲೇಜ್ ನೀಡುತ್ತದೆ ಎಂದು ಪ್ರಶ್ನೆ ಹಾಕುತ್ತಾರೆ. ಇನ್ನು ಕೆಲವರು ಒಂದು ಲೀಟರ್ಗೆ ಎಷ್ಟು ಕ್ರಮಿಸುತ್ತದೆ ಎಂದು ಕೇಳುತ್ತಾರೆ. ಅನೇಕರು ಕಂಪನಿ ನೀಡಿರುವ ಮೈಲೇಜ್ ಬಗ್ಗೆ ಹೇಳುತ್ತಾ ಸಮರ್ಥಿಸಿಕೊಳ್ಳುತ್ತಾರೆ.
5/ 8
ಆದರೆ ವಿಮಾನದ ಇಂಧನ ಯಾವ ರೀತಿ ಖರ್ಚು ಆಗುತ್ತದೆ ಎಂಬುದು ತಿಳಿದಿದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
6/ 8
ಜಗತ್ತಿನಲ್ಲಿಯೇ ಅತಿ ಜನಪ್ರಿಯ ವಿಮಾನವಾದ ಬೋಯಿಂಗ್ 747 ಹೆಸರನ್ನು ಎಲ್ಲರೂ ಕೇಳಿರುತ್ತಾರೆ. ಇದಕ್ಕೆ ಜಂಬೊಜೆಟ್ ಎಂದು ಕರೆಯುತ್ತಾರೆ. ದೊಡ್ಡದಾದ ವಿಮಾನ ಇದಾಗಿದೆ.
7/ 8
ಈ ವಿಮಾನದಲ್ಲಿ ಉಳಿದೆಲ್ಲ ವಿಮಾನಗಳಿಗಿಂತ ವಿಶೇಷವಾದ ಇಂಧನವನ್ನು ಉಪಯೋಗಿಸುತ್ತಾರೆ. ಇದು ಸೆಕೆಂಡಿಗೆ 4 ಲೀಟರ್ ಇಂಧನವನ್ನು ತೆಗೆದುಕೊಳ್ಳುತ್ತದೆ. 10 ಗಂಟೆಗಳವರೆಗೆ ಹಾರಾಟ ಮಾಡಿದರೆ, ಅದಕ್ಕಾಗಿ 36 ಸಾವಿರ ಗ್ಯಾಲನ್ ಅಂದರೆ 150 ಲಕ್ಷ ಲೀಟರ್ ಇಂಧನದ ಅವಶ್ಯಕತೆ ಬೀಳುತ್ತದೆ.
8/ 8
1 ಕಿಲೋಮೀಟರ್ ಅಂತರವನ್ನು ಕ್ರಮಿಸಲು 12 ಲೀಟರ್ ಇಂಧನದ ಅವಶ್ಯಕತೆ ಬೀಳುತ್ತದೆ. ಈ ರೀತಿ ಬೋಯಿಂಗ್ 747 ವಿಮಾನವು ಪ್ರತಿ ಲೀಟರ್ ಇಂಧನಕ್ಕೆ 84 ಮೀಟರ್ ಅಂತರ ಚಲಿಸುತ್ತದೆ.