Nokia 3310: ಭಾರವಾದ ಕಲ್ಲು ಎತ್ಹಾಕಿದರೂ ಈ ಫೋನ್ ಒಡೆಯಲ್ಲ! ಓಲ್ಡ್ ಈಸ್ ಗೋಲ್ಡ್ ಅನ್ನೋದು ಸುಮ್ನೆನಾ?

Nokia 3310: ಈ ಸೆಲ್‌ಫೋನ್ ಹಾನಿಗೊಳ್ಳಲು 2,800 ಕೆಜಿಗಿಂತ ಹೆಚ್ಚಿನ ಒತ್ತಡವನ್ನು ಬಳಸಿಕೊಂಡಿತು ಎಂಬುದು ಹೆಚ್ಚು ಆಶ್ಚರ್ಯಕರವಾದ ವಿಷಯವಾಗಿದೆ.

First published:

  • 15

    Nokia 3310: ಭಾರವಾದ ಕಲ್ಲು ಎತ್ಹಾಕಿದರೂ ಈ ಫೋನ್ ಒಡೆಯಲ್ಲ! ಓಲ್ಡ್ ಈಸ್ ಗೋಲ್ಡ್ ಅನ್ನೋದು ಸುಮ್ನೆನಾ?

    ವಿಶ್ವದಲ್ಲಿಯೇ ಹೆಚ್ಚು ಜನಪ್ರಿಯ ಸೆಲ್ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನೋಕಿಯಾ 3310 ಸದೃಢ ಫೋನ್ ಎಂದೇ ಖ್ಯಾತಿಗೊಂಡಿತ್ತು. ಆ ಸಮಯದಲ್ಲೇ ಈ ಡಿವೈಸ್ ಗೇಮ್‌ಗಳಿಂದ ಲೋಡ್ ಆಗಿತ್ತು ಎಂಬ ಅಂಶ ಕೂಡ ಗಮನಾರ್ಹವಾದುದಾಗಿದೆ. ನೋಕಿಯಾ ಫೋನ್ ಎಂದರೆ ಅದು ದೃಢತೆಗೆ ಹೆಸರುವಾಸಿಯಾಗಿತ್ತು ಎಷ್ಟೇ ಕೆಳಕ್ಕೆ ಬೀಳಿಸಿದರೂ ಮುರಿಯದ ಹಾಗೂ ಯಾವುದೇ ಪತನಕ್ಕೂ ಒಳಗಾಗುತ್ತಿರಲಿಲ್ಲ. ನೀರಿನಲ್ಲಿ ಮುಳುಗಿದರೂ ಡಿವೈಸ್‌ಗೆ ಯಾವುದೇ ಹಾನಿಯಾಗುತ್ತಿರಲಿಲ್ಲ ಮತ್ತೊಂದು ಪರಿಣಾಮಕಾರಿ ಅಂಶವೆಂದರೆ ಬ್ಯಾಟರಿಯಾಗಿತ್ತು. ಮೂರರಿಂದ ನಾಲ್ಕು ದಿನಗಳ ಬ್ಯಾಟರಿ ದೀರ್ಘತೆಯನ್ನು ಈ ಫೋನ್ ಹೊಂದಿತ್ತು.

    MORE
    GALLERIES

  • 25

    Nokia 3310: ಭಾರವಾದ ಕಲ್ಲು ಎತ್ಹಾಕಿದರೂ ಈ ಫೋನ್ ಒಡೆಯಲ್ಲ! ಓಲ್ಡ್ ಈಸ್ ಗೋಲ್ಡ್ ಅನ್ನೋದು ಸುಮ್ನೆನಾ?

    2,800 ಕೆಜಿಗಿಂತ ಹೆಚ್ಚಿನ ತೂಕ ಬೇಕು: ಅದಾಗ್ಯೂ ಕೆಲವೊಂದು ವಿಷಯಗಳು ಹಾಗೂ ಸನ್ನಿವೇಶಗಳು ಸೆಲ್‌ ಫೋನ್‌ಗೂ ಹಾನಿಯನ್ನುಂಟು ಮಾಡಬಹುದು ಆದರೂ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರ ಎಲ್ಲಾ ಫೋನ್‌ಗಳಿಗಿಂತಲೂ ಹೆಚ್ಚು ನಿರೋಧಕ ಸಾಮರ್ಥ್ಯ ಹೊಂದಿರುವ ಡಿವೈಸ್ ಎಂದಾಗಿದೆ. ನೋಕಿಯಾ ಫೋನ್ ಹೊಂದಿದ್ದವರು ಇಲ್ಲವೇ ಅದನ್ನು ಬಳಸಿದ್ದವರು ತೀವ್ರ ನಷ್ಟವನ್ನು ಹೇಗೆ ಉಂಟುಮಾಡಬಹುದು ಎಂಬುದನ್ನು ಅನುಮಾನಿಸಿರಬಹುದು. ಈ ಕುರಿತು ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ವೈರಲ್ ಮಾಡಲಾಗಿದ್ದು ಈ ಸೆಲ್‌ಫೋನ್‌ಗಳಲ್ಲೊಂದನ್ನು ಹೈಡ್ರಾಲಿಕ್ ಪ್ರೆಸ್‌ನ ಫೋರ್ಸ್‌ಗೆ ಹೇಗೆ ಒಳಪಡಿಸಲಾಗುತ್ತದೆ ಎಂಬುದನ್ನು ತೋರಿಸಿದೆ. ಆದರೆ ಈ ಸೆಲ್‌ಫೋನ್ ಹಾನಿಗೊಳ್ಳಲು 2,800 ಕೆಜಿಗಿಂತ ಹೆಚ್ಚಿನ ಒತ್ತಡವನ್ನು ಬಳಸಿಕೊಂಡಿತು ಎಂಬುದು ಹೆಚ್ಚು ಆಶ್ಚರ್ಯಕರವಾದ ವಿಷಯವಾಗಿದೆ.

    MORE
    GALLERIES

  • 35

    Nokia 3310: ಭಾರವಾದ ಕಲ್ಲು ಎತ್ಹಾಕಿದರೂ ಈ ಫೋನ್ ಒಡೆಯಲ್ಲ! ಓಲ್ಡ್ ಈಸ್ ಗೋಲ್ಡ್ ಅನ್ನೋದು ಸುಮ್ನೆನಾ?

    ಗ್ರಾಹಕರ ಮನಗೆದ್ದ ಫೋನ್​: ನೋಕಿಯಾ 3310 GSM ಮೊಬೈಲ್ ಫೋನ್ ಆಗಿದ್ದು ಇದನ್ನು ಸಪ್ಟೆಂಬರ್ 2000 ದಲ್ಲಿ ಬಿಡುಗಡೆ ಮಾಡಲಾಯಿತು. ಉತ್ತಮ ಮಾರಾಟವನ್ನು ಕಂಡುಕೊಂಡ ಈ ಡಿವೈಸ್ 126 ಮಿಲಿಯನ್ ಯೂನಿಟ್‌ಗಳನ್ನು ಮಾರಾಟ ಮಾಡಿದ ಅತ್ಯಂತ ಯಶಸ್ವಿ ಫೋನ್‌ಗಳಲ್ಲಿ ಒಂದಾಗಿದೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಉತ್ತಮ ಬಾಳಿಕೆ ಹಾಗೂ ಗುಣಮಟ್ಟದಿಂದಾಗಿ ನೋಕಿಯಾ ಪ್ರಿಯರ ಮನಗೆದ್ದ ಡಿವೈಸ್ ಆಗಿದೆ.

    MORE
    GALLERIES

  • 45

    Nokia 3310: ಭಾರವಾದ ಕಲ್ಲು ಎತ್ಹಾಕಿದರೂ ಈ ಫೋನ್ ಒಡೆಯಲ್ಲ! ಓಲ್ಡ್ ಈಸ್ ಗೋಲ್ಡ್ ಅನ್ನೋದು ಸುಮ್ನೆನಾ?

    ಹೇಗಿತ್ತು ನೋಕಿಯಾ ಹಳೆಯ ಮೊಬೈಲ್​?: ನೋಕಿಯಾ 3310 ಅನ್ನು ಫಿನ್ಲ್ಯಾಂಡ್ ಮತ್ತು ಹಂಗೇರಿಯ ಕಾರ್ಖಾನೆಗಳಲ್ಲಿ ತಯಾರಿಸಲಾಯಿತು. 3315 ಗಳನ್ನು ದಕ್ಷಿಣ ಕೊರಿಯಾದಲ್ಲಿ ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಾಗಿ ಉತ್ಪಾದಿಸಲಾಯಿತು. 3310 ವಿನ್ಯಾಸವನ್ನು ಆಧರಿಸಿದ ಹೊಸ ಮೊಬೈಲ್ ಫೋನ್ ಅನ್ನು 2017 ರಲ್ಲಿ ಬಿಡುಗಡೆ ಮಾಡಲಾಯಿತು. ಹೊಸ ನೋಕಿಯಾ 3310 ಮಾದರಿಯು 2.4 "ಕಲರ್ ಡಿಸ್‌ಪ್ಲೇ, 2MP ಹಿಂಬದಿಯ ಕ್ಯಾಮೆರಾ ಮತ್ತು ಮೈಕ್ರೊ ಎಸ್‌ಡಿ ಸ್ಲಾಟ್‌ನೊಂದಿಗೆ ಬಂದಿದೆ. ಮೊಬೈಲ್ ಕ್ರಾಂತಿಯನ್ನೇ ಉಂಟುಮಾಡಿದ ಹ್ಯಾಂಡ್‌ಸೆಟ್ ಎಂಬ ಹೆಸರು ನೋಕಿಯಾ 3310 ಗಿದೆ.

    MORE
    GALLERIES

  • 55

    Nokia 3310: ಭಾರವಾದ ಕಲ್ಲು ಎತ್ಹಾಕಿದರೂ ಈ ಫೋನ್ ಒಡೆಯಲ್ಲ! ಓಲ್ಡ್ ಈಸ್ ಗೋಲ್ಡ್ ಅನ್ನೋದು ಸುಮ್ನೆನಾ?

    ಹ್ಯಾಂಡ್‌ಸೆಟ್ ಅನ್ನು ಹಲವಾರು ಪರಿಶೋಧನೆಗೆ ಈ ಮೊದಲು ಕೂಡ ಒಳಪಡಿಸಲಾಗಿದ್ದು ಇದು ಅತ್ಯಂತ ಸದೃಢ ಫೋನ್ ಎಂಬ ಖ್ಯಾತಿಯನ್ನು ಇಂದಿಗೂ ಪಡೆದುಕೊಂಡಿದೆ. ನೋಕಿಯಾ 3310 ಒಂದು ಕಾಲದಲ್ಲಿ ಫೋನ್ ಪ್ರಿಯರ ಮನಗೆದ್ದ ಡಿವೈಸ್ ಆಗಿತ್ತು. ವೈರಲ್ ವಿಡಿಯೋದ ಕುರಿತು ಬಳಕೆದಾರರೂ ಕೂಡ ನೋಕಿಯಾದ ಸಾಮರ್ಥ್ಯವನ್ನು ಪ್ರಶಂಸಿಸಿದ್ದು ಈಗಿನ ಡಿವೈಸ್‌ಗಳು ಇಷ್ಟೊಂದು ಶಕ್ತಿಶಾಲಿಯಾಗಿಲ್ಲ ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ. ಇನ್ನು ಕೆಲವು ಬಳಕೆದಾರರು ತಮ್ಮ ನೋಕಿಯಾ ಡಿವೈಸ್‌ಗಳ ಕಾಲವನ್ನು ಸ್ಮರಿಸಿದ್ದಾರೆ.

    MORE
    GALLERIES