ಸ್ಮಾರ್ಟ್ಫೋನ್ಗಳಲ್ಲಿ ಕರೆ ರೆಕಾರ್ಡ್ ಮಾಡುವ ಆಯ್ಕೆಗಳಿವೆ. ವಿವಿಧ ಕಾರಣಗಳಿಗಾಗಿ ಫೋನ್ ಸಂಭಾಷಣೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇದನ್ನು ಬಳಸುತ್ತಾರೆ. ಕೆಲವರು ಸಾಕ್ಷಿ ಆಧಾರಕ್ಕೆಂದು ಪ್ರತಿ ಕರೆಗಳನ್ನು ರೆಕಾರ್ಡ್ ಮಾಡುತ್ತಾರೆ. ಆದರೆ ಸದ್ಯ ಇದರ ದುರುಪಯೋಗವು ಹೆಚ್ಚಾಗುತ್ತಿದೆ. ಇದೇ ವಿಚಾರವನ್ನು ಮನಗಂಡು ಮತ್ತು ಜನರ ಗೌಪ್ಯತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ, ಗೂಗಲ್ ಮೂರನೇ ವ್ಯಕ್ತಿಯ ಅಪ್ಲಿಕೇಶನ್ಗಳ ಮೂಲಕ ಕರೆ ರೆಕಾರ್ಡಿಂಗ್ ಅನ್ನು ನಿಷೇಧಿಸಿದೆ.
ಡೀಫಾಲ್ಟ್ ಕರೆ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಹೊಂದಿರುವ ಆಂಡ್ರಾಯ್ಡ್ ಫೋನ್ಗಳು ಇನ್ನೂ ಕರೆಗಳನ್ನು ರೆಕಾರ್ಡ್ ಮಾಡಬಹುದು. ಆದರೆ ಇತರ ವ್ಯಕ್ತಿಯು ನಿಮ್ಮ ಕರೆಯನ್ನು ರೆಕಾರ್ಡ್ ಮಾಡುತ್ತಿದ್ದಾರೋ ಇಲ್ಲವೋ ಎಂದು ನಿಮಗೆ ಹೇಗೆ ತಿಳಿಯುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಿಮ್ಮ ಕರೆಯನ್ನು ರೆಕಾರ್ಡ್ ಮಾಡಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದಾದ ತಂತ್ರ ಇಲ್ಲಿದೆ.
ಅನೇಕ ಫೋನ್ಗಳು ಡೀಫಾಲ್ಟ್ ರೆಕಾರ್ಡಿಂಗ್ ಆಯ್ಕೆಯನ್ನು ಹೊಂದಿಲ್ಲ. ಹೀಗಿರುವಾಗ ಕೆಲವರು ಫೋನ್ ಅನ್ನು ಸ್ಪೀಕರ್ನಲ್ಲಿ ಇಟ್ಟುಕೊಂಡು ಮಾತನಾಡುತ್ತಾರೆ ಮತ್ತು ಇನ್ನೊಂದು ಫೋನ್ನಲ್ಲಿ ರೆಕಾರ್ಡರ್ ಅನ್ನು ಆನ್ ಮಾಡಿ ರೆಕಾರ್ಡ್ ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಸಂಭಾಷಣೆಯ ಸಮಯದಲ್ಲಿ, ಎದುರಿಗಿರುವ ಸ್ಪೀಕರ್ ಆನ್ ಮಾಡುವ ಮೂಲಕ ಮಾತನಾಡುತ್ತಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಗಮನಿಸಿ. ಸ್ಪೀಕರ್ ಜೊತೆ ಮಾತನಾಡುವಾಗ ಧ್ವನಿ ಪ್ರತಿಧ್ವನಿಸುತ್ತದೆ.