ಅದರಂತೆಯೇ ಚೀನಾದ EV ತಯಾರಕ ಹಾರ್ವಿನ್, ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ SK3 ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದರ ವಿನ್ಯಾಸವು ಅತ್ಯದ್ಭುತವಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದೇ ಚಾರ್ಜ್ನಲ್ಲಿ 160 ಕಿಮೀ ವರೆಗೆ ಓಡಿಸಬಹುದು ಮತ್ತು ಪ್ರತ್ಯೇಕ ಬ್ಯಾಟರಿಯನ್ನು ಜೊಡಿಸಿದಾಗ 300 ಕಿ.ಮೀವರೆಗೆ ಪ್ರಯಾಣ ಬೆಳೆಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ನ ಒಟ್ಟು ತೂಕ 115 ಕೆಜಿ ಮತ್ತು ಇದು 3.1 kW ಮೋಟಾರ್ನೊಂದಿಗೆ ಬರುತ್ತದೆ. 2022 ಹಾರ್ವಿನ್ SK3 ಪಡೆದ 72V 36Ah Lithysm-Ion ಬ್ಯಾಟರಿ ಪ್ಯಾಕ್ ಒಟ್ಟು 6.2 kW ಶಕ್ತಿಯನ್ನು ಮಾಡುತ್ತದೆ. ಈ ಸ್ಕೂಟರ್ನ ಗರಿಷ್ಠ ವೇಗ ಗಂಟೆಗೆ 90 ಕಿ.ಮೀ. ಆರಾಮದಾಯಕ ಪ್ರಯಾಣಕ್ಕಾಗಿ, ಸ್ಕೂಟರ್ನ ಮುಂಭಾಗ ಮತ್ತು ಹಿಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಗಳು ಮತ್ತು ಡ್ಯುಯಲ್ ಶಾಕ್ ಅಬ್ಸಾರ್ಬರ್ಗಳನ್ನು ನೀಡಲಾಗಿದೆ. ಇದಕ್ಕೆ 14 ಇಂಚಿನ ಮಿಶ್ರಲೋಹದ ಚಕ್ರಗಳನ್ನು ನೀಡಲಾಗಿದೆ.