ಹಬ್ಬದ ಪ್ರಯುಕ್ತ ವಿವಿಧ ಕಂಪನಿಗಳು ತನ್ನ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿ ಘೋಷಿಸಿದೆ. ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಆನ್ಲೈನ್ ಸಂಸ್ಥೆಗಳು 4-5 ದಿನಗಳ ಕಾಲ ಭರ್ಜರಿ ಡಿಸ್ಕೌಂಟ್ ಸೇಲ್ಸ್ ಆರಂಭಿಸಲು ಸನ್ನದ್ಧವಾಗಿದೆ. ಇದೀಗ ದಸರಾ ಹಬ್ಬದ ಹಿನ್ನಲೆಯಲ್ಲಿ ಖ್ಯಾತ ಮೊಬೈಲ್ ಕಂಪನಿ ಹಾನರ್ ಕೂಡ ತನ್ನ ಸ್ಮಾರ್ಟ್ಫೋನ್ಗಳ ಮೇಲೆ ಭಾರೀ ಡಿಸ್ಕೌಂಟ್ ನೀಡಿದೆ. ಅಲ್ಲದೆ ನಿದಿರ್ಷ್ಟದ ಸಮಯದವರೆಗೆ ಕೇವಲ 1 ರೂ.ಗೆ ದುಬಾರಿ ಮೊಬೈಲ್ಗಳನ್ನು ಮಾರಾಟ ಮಾಡಲಿದೆ.
ಈ ದಸರಾ ಸೇಲ್ನಲ್ಲಿ ನೀವು ಹಾನರ್ ಕಂಪನಿಯ ವೆಬ್ಸೈಟ್ನಲ್ಲಿ 1800 ರೂ.ನ ಫ್ರೀ ಕೂಪನ್ ಮತ್ತು 4 ಸಾವಿರದವರೆಗೆ ರಿಯಾಯಿತಿಗಳನ್ನು ಪಡೆಯಬಹುದು. ಅಲ್ಲದೆ ಹಾನರ್ 7A ಯನ್ನು ಕೇವಲ 1ರೂ. ಪಾವತಿಸಿ ತಮ್ಮದಾಗಿಸಿಕೊಳ್ಳಬಹುದು. ಇದಕ್ಕಾಗಿಯೇ ‘1 Rupee Sale'ಎಂಬ ಆಯ್ಕೆಯನ್ನು ಹಾನರ್ ನೀಡಿದ್ದು, ಇಲ್ಲಿ ಹಲವು ಮೊಬೈಲ್ಗಳನ್ನು ನಿರ್ದಿಷ್ಟ ಸಮಯದಲ್ಲಿ ಕೇವಲ ಒಂದು ರೂ.ಗೆ ಕೊಂಡುಕೊಳ್ಳಬಹುದು. ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ ಎಂಬಂತೆ ಈ ಸೇಲ್ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.