ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ತನ್ನ ವ್ಯಾಪ್ತಿಯನ್ನು ಹೆಚ್ಚು ಹೆಚ್ಚು ಗ್ರಾಹಕರಿಗೆ ವಿಸ್ತರಿಸಲು ಅನೇಕ ಹೊಸ ಕೈಗೆಟುಕುವ ದ್ವಿಚಕ್ರ ವಾಹನಗಳನ್ನು ಪರಿಚಯಿಸುತ್ತಾ ಬಂದಿದೆ. ಅದರಂತೆಯೇ ಇತ್ತೀಚೆಗೆ ಹೋಂಡಾ ದ್ವಿಚಕ್ರ ವಾಹನಗಳು ಭಾರತೀಯ ಮಾರುಕಟ್ಟೆಗೆ ಕೆಲವು ಪೇಟೆಂಟ್ಗಳನ್ನು ಸಲ್ಲಿಸಿವೆ. ಇದು ಮುಂಬರುವ ವಾಹನಗಳ ಹೆಸರುಗಳು ಮತ್ತು ಪಟ್ಟಿಯು ಸಾಕಷ್ಟು ಉದ್ದವಾಗಿದೆ ಎಂದು ಸ್ಪಷ್ಟಪಡಿಸುತ್ತದೆ.
ಇವುಗಳ ಜೊತೆಗೆ ಹೋಂಡಾ ಡಿಯೋ ಮತ್ತು ಆಕ್ಟಿವಾ ಕೂಡ ಇದರ ಪೈಪೋಟಿಯಲ್ಲಿವೆ. ಈ ಸ್ಕೂಟರ್ ಅನ್ನು 15.4-ಲೀಟರ್ ಅಂಡರ್ ಸೀಟ್ ಸ್ಟೋರೇಜ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಇಗ್ನಿಷನ್, ಪ್ರೊಜೆಕ್ಟರ್ ಎಲ್ಇಡಿ ಹೆಡ್ಲೈಟ್, ಮಲ್ಟಿ-ಫಂಕ್ಷನಲ್ ಹುಕ್ ಮತ್ತು ಸೈಡ್ ಸ್ಟ್ಯಾಂಡ್ ಇಂಡಿಕೇಟರ್ನಂತಹ ವೈಶಿಷ್ಟ್ಯಗಳೊಂದಿಗೆ ನೀಡಬಹುದು.