ಹೀರೋ ಸ್ಪ್ಲೆಂಡರ್ ದಶಕಗಳಿಂದ ಗ್ರಾಹಕರ ನೆಚ್ಚಿನ ಬೈಕ್ ಆಗಿದ್ದು, ಇದೀಗ ಕಂಪನಿಯು ಗ್ರಾಹಕರಿಗೆ ಬೇಕಾದ ವಾಹನಗಳನ್ನನು ಪರಿಚಯಿಸುವ ಮೂಲಕ ಹೆಚ್ಚಿನ ಹಣವನ್ನು ಗಳಿಸಿದೆ. ಅದರಂತೆಯೇ ಕಂಪನಿ Hero MotoCorp ಹೊಸ ಸ್ಪ್ಲೆಂಡರ್ + XTEC ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದನ್ನು ದೆಹಲಿಯಲ್ಲಿ 72,900 ರೂಗಳ ಆರಂಭಿಕ ಎಕ್ಸ್ ಶೋ ರೂಂ ಬೆಲೆಯಲ್ಲಿ ಪರಿಚಯಿಸಿದೆ.
ವಿನ್ಯಾಸದ ಬಗ್ಗೆ ಮಾತನಾಡುವುದಾದರೆ, ಹೀರೋ ಸ್ಪ್ಲೆಂಡರ್ + XTEC ನೊಂದಿಗೆ LED ಪೊಸಿಷನ್ ಲ್ಯಾಂಪ್ ಮತ್ತು ಹೊಸ ಗ್ರಾಫಿಕ್ಸ್ ನೀಡಲಾಗಿದೆ. ಬೈಕ್ನ ಉಳಿದ ಪ್ರೊಫೈಲ್ನಲ್ಲಿ ಯಾವುದೇ ಬದಲಾವಣೆ ಇಲ್ಲ. ಕಂಪನಿಯು ಹೊಸ ಬೈಕ್ ಅನ್ನು ಸ್ಪಾರ್ಕ್ಲಿಂಗ್ ಬೀಟಾ ಬ್ಲೂ, ಕ್ಯಾನ್ವಾಸ್ ಬ್ಲಾಕ್, ಟೊರ್ನಾಡೋ ಗ್ರೇ ಮತ್ತು ಪರ್ಲ್ ವೈಟ್ ಸೇರಿದಂತೆ ನಾಲ್ಕು ವಿಭಿನ್ನ ಬಣ್ಣಗಳಲ್ಲಿ ಪರಿಚಯಿಸಿದೆ.